ಬಳ್ಳಾರಿ ! ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕಾಗಿ ಮಗಳನ್ನೆ ಕೊಂದ ತಂದೆ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ಬಳ್ಳಾರಿ: ಅನ್ಯ ಧರ್ಮದ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿರುವ ಪ್ರಕರಣ ಬಳ್ಳಾರಿ ಜಿಲ್ಲೆಯ ಕುಡುತಿನಿ ಪಟ್ಟಣದ ಸಮೀಪ ಸಿದ್ದಮ್ಮನಹಳ್ಳಿ ಬಳಿ ನಡೆದಿದೆ.

ಬುಡುಗ ಜಂಗಮ ಕಾಲೀನಿಯ ನಿವಾಸಿ ಓಂಕಾರಗೌಡನಿಂದ ತಮ್ಮ‌ಕುಟುಂಬದ ಮರ್ಯಾದೆ ಹೋಗುತ್ತೆ ಎಂದು ಮಗಳನ್ನು ಕಾಲುವೆಗೆ ನೂಕಿ ಮರ್ಯಾದೆ ಹತ್ಯೆ ಮಾಡಿರುವ ಘಟನೆ ಜರುಗಿದೆ.

ಕುಡುತಿನಿ ಪಟ್ಟಣದ ನೇತಾಜಿ ಶಾಲೆಯಲ್ಲಿ 9 ನೇ ತರಗತಿ ಓದುತ್ತಿದ್ದಾ ಗಗನ (15) ಯುವತಿ ಕೊಟ್ಟೂರು ಬಳಿಯ ಗ್ರಾಮವೊಂದರ ಯುವಕ ನಾಗರಾಜ್ ನ ಜೊತೆ ಸಂಪರ್ಕ ಬೆಳೆದು ಪ್ರೀತಿಸತೊಡಗಿದ್ದಳು. ಆತನ‌ ಜೊತೆ ಹೊರಗಡೆ ತಿರುಗಾಡಿ ಬಂದಿದ್ದನ್ನು ಕಂಡ ತಂದೆ ಬುದ್ದಿವಾದ ಹೇಳಿದ್ದರೆ ಆದರೂ ಯುವತಿ ತನ್ನ ಲೆಕ್ಕಿಸಿದ ಕಾರ ಕೋಪ ಗೊಂಡ ತಂದೆ ಓಂಕಾರಗೌಡ. ಸಿದ್ದಮ್ಮಹಳ್ಳಿ ಬಳಿ ಎಚ್‌ಎಲ್‌ಸಿ ಕಾಲುವೆ ಮಗಳನ್ನು ತಳ್ಳಿ ಹತ್ಯೆ ಮಾಡಿದ್ದಾನಂತೆ.

ನಂತರ ತಿರುಪತಿಗೆ ಹೋಗಿ ದರ್ಶನ ಮುಗಿಸಿ ವಾಪಸ್ ಬರುವಾಗ ಕೊಪ್ಪಳದ ಬಳಿ ಓಂಕಾರಗೌಡನನ್ನು ಕುಡುತಿನಿ ಪೊಲೀಸರು ಬಂಧಿಸಿದ್ದಾರೆ.
ಕುಡುತಿನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಬಾಲಕಿ ಶವಕ್ಕಾಗಿ ಪೊಲೀಸರು ಹುಡುಕಾಡುತ್ತಿದ್ದಾರೆ.

Share and Enjoy !

Shares