ಅತ್ಯಂತ ಶ್ರೇಷ್ಠ ದಾನ ನೇತ್ರದಾನ ನಗರಸಭೆ ಸದಸ್ಯ ಉಮೇಶ ಸಿಂಗನಾಳ

Share and Enjoy !

Shares
Listen to this article
ಕೊಪ್ಪಳ ಜಿಲ್ಲೆ
ಗಂಗಾವತಿ : ಅಂದರ ಬಾಳಿಗೆ ಬೆಳಕು ನೀಡುವ ಕಾರ್ಯ ಅಂದರೆ ನೇತ್ರದಾನ ಮಾಡುವ ಕಾರ್ಯ.ಅತ್ಯಂತ ಮಹತ್ವದ ಆಗಿದೆ ಎಂದು ನಗರಸಭೆ14ನೇ ವಾರ್ಡಿನ ಸದಸ್ಯ ಉಮೇಶ ಸಿಂಗನಾಳ ಹೇಳಿದರು, ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿಲಾದ ಉಚಿತ ನೇತ್ರದಾನ ಶಿಬಿರ ಹಾಗೂ ತಪಾಸಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು,, ಪ್ರತಿಯೊಬ್ಬ ವ್ಯಕ್ತಿ ತಮ್ಮ ಜೀವಿತ ಅವಧಿಯಲ್ಲಿ ತಮ್ಮ ನೇತ್ರಗಳನ್ನು ದಾನ ಮಾಡುವುದಕ್ಕಾಗಿ. ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು. ಇದರಿಂದ ವ್ಯಕ್ತಿ ಮೃತ ಗೊಂಡ ಬಳಿಕ 6 ರಿಂದ 8 ತಾಸು ಗಂಟೆಗಳ ಕಾಲ ನೇತ್ರದಲ್ಲಿ ಶಕ್ತಿಯನ್ನು ಹೊಂದಿದ್ದು. ಅವುಗಳನ್ನು ಹುಟ್ಟು ಅಂಧ ವ್ಯಕ್ತಿಗಳಿಗೆ ಅಂದರೆ ಕಣ್ಣು ಇಲ್ಲದ ಕುರುಡ ವ್ಯಕ್ತಿಗಳಿಗೆ ದಾನ ಮಾಡಿದ್ದಲ್ಲಿ ಅವರಿಗೆ ಬೆಳಕು ನೀಡುವ ಕಾರ್ಯ ವಾಗುತ್ತದೆ .ವಿನಾಕಾರಣ ಮಣ್ಣಿನಲ್ಲಿ ಮಣ್ಣಾಗುವ ಈ ದೇಹಕ್ಕೆ ನೇತ್ರ ಸೇರಿದಂತೆ ಪ್ರತಿಯೊಂದು ಅಂಗಾಂಗಗಳನ್ನು ದಾನ ಮಾಡುವುದು ಉತ್ತಮ ಕಾರ್ಯ ಇತ್ತೀಚಿಗೆ ಡಾಕ್ಟರ ರಾಜಕುಮಾರ ಪುನೀತ ರಾಜಕುಮಾರ ಸೇರಿದಂತೆ ಇತರರು ತಮ್ಮ ಅಂಗಾಂಗಗಳನ್ನು ದಾನ ಮಾಡುವುದರ ಮೂಲಕ ಇತರರಿಗೆ ಸ್ಪೂರ್ತಿದಾಯಕ ರಾಗಿ ಕಂಗೊಳಿಸುತ್ತಿದ್ದಾರೆ ಇದು ಒಂದು ಉತ್ತಮವಾದ ಬೆಳವಣಿಗೆಯಾಗಿದೆ ಎಂದು ತಿಳಿಸಿದರು ಯಾವುದೇ ಕಾರಣಕ್ಕೂ ಕಣ್ಣಿನ ಬಗ್ಗೆ ನಿರ್ಲಕ್ಷ ಸಲ್ಲುದು ಎಂದು ತಿಳಿಸಿದ ಅವರು ಕಣ್ಣಿನ ಆರೈಕೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದರು ಈ ಸಂದರ್ಭದಲ್ಲಿ ನೂರಾರು ವಿದ್ಯಾರ್ಥಿಗಳು ತಮ್ಮ ಕಣ್ಣುಗಳ ತಪಾಸನೆಯನ್ನು ಮಾಡಿಸಿಕೊಂಡರು
. ಈ ಸಂದರ್ಭದಲ್ಲಿ ವಾರ್ಡಿನ ಮುಖಂಡರಾದ ಸಂಗಪ್ಪ ಸತ್ಯನಾರಾಯಣ ಮದನ್ ಸಿಂಗ್ ಈಶಪ್ಪ ಶಾಲಾ ಮುಖೋಪಾಧ್ಯಾಯರಾದ ನಿರ್ಮಲ ಎಸ್ಡಿಎಂಸಿ ಅಧ್ಯಕ್ಷರಾದ ಅನಿಲ್ ಅಂಗನವಾಡಿ ಶಿಕ್ಷಕರಾದ ಲತಾ ಸಿರವಾರ ಸುಮಂಗಲಮ್ಮ ಸೇರಿದಂತೆ ಇನ್ನಿತರರು ಇದ್ದರು.

Share and Enjoy !

Shares