ಬಯಲಾಟ ನಮ್ಮ ಜಾನಪದ ಕಲೆ:ಎಮ್ ಎಸ್ ಸಿದ್ಧಪ್ಪ

Share and Enjoy !

Shares
Listen to this article

ಸಿರುಗುಪ್ಪ.ನ.೧೨:- ಬಯಲಾಟ ಕರ್ನಟಕ ಜಾನಪದ ಕಲೆಗಳಲ್ಲಿ ಅತ್ಯಂತ ವೈವಿದ್ಯದಿಂದ ಕೂಡಿದ ಗಂಡು ಕಲೆಯಾಗಿದ್ದು, ಇದರಲ್ಲಿ ಸಾಹಿತ್ಯ, ಸಂಗೀತ, ನೃತ್ಯಗಳು ಮುಪ್ಪುರಿಗೊಂಡಿವೆ, ಪ್ರಾಚೀನ ಕಾಲದಿಂದಲೂ ಗ್ರಾಮೀಣರಿಗೆ ಮನರಂಜೆನೆ ಒದಗಿಸಿಕೊಂಡು ಬರುತ್ತಿರುವ ಹವ್ಯಾಸಿ ಕಲೆ ಬಯಲಾಟವಾಗಿದೆ ಎಂದು ಬಿ.ಜೆ.ಪಿ. ಯುವಮೋರ್ಚಾ ತಾ.ಅಧ್ಯಕ್ಷ ಎಂ.ಎಸ್.ಸಿದ್ದಪ್ಪ ತಿಳಿಸಿದರು.
ತಾಲೂಕಿನ ತಾಳೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಾಂಡು ವಿಜಯ ಪೌರಾಣಿಕ ಬಯಲಾಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಾಮಾನ್ಯವಾಗಿ ಸುಗ್ಗಿ ಮುಗಿದ ಮೇಲೆ ಬಯಲಾಟಗಳ ಸುಗ್ಗಿ ಆಂಭವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಕೆಲಸದ ಬಿಡುವು, ಬಯಲು ನಾಟಕದ ಪ್ರದರ್ಶನಕ್ಕೆ ಮುನ್ನ ಬಹಳ ಪರಿಶ್ರಮ ಬೇಕಾಗುತ್ತದೆ, ಬಯಲಾಟದ ಹುಚ್ಚು ಇರುವವರೆಲ್ಲಾ ಒಂದೆಡೆ ಸೇರಿ ತಾವು ಕಲಿಯಬೇಕೆಂದಿರು ಪ್ರಸಂಗವನ್ನು ಆಯ್ಕೆ ಮಾಡುತ್ತಾರೆ. ಪ್ರಸಂಗದ ಪಾತ್ರಗಳಿಗೆ ಆಯ್ಕೆಯಾದ ಕಲಾವಿದರು ಅನೇಕ ತಿಂಗಳು ಕಾಲ ಪ್ರತಿದಿನ ರಾತ್ರಿ ಸೇರಿ ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ ಕಲಿಯುತ್ತಾರೆ.ಬಯಲಾಟ ಕಲಿಸುವವರಿಗೆ ಭಾಗವತ ಎಂದು ಕರೆಯುತ್ತಾರೆ.
ಬಯಲಾಟದಲ್ಲಿ ಪೌರಾಣಿಕ ಕಥೆಗಳಾದ ರಾಮಾಯಣ, ಮಹಾಭಾರತದಿಂದ ಆರಿಸಿಕೊಂಡ ಪ್ರಸಂಗಗಳು ಹೆಚ್ಛಾಗಿದ್ದು, ಕುರುಕ್ಷೇತ್ರ, ಕೃಷ್ಣ ಸಂದಾನ, ಸುಗಂದ ಪುಷ್ಪ ಹರಣ, ವೀರಾಟ ಪರ್ವ, ಚರಣ ಪರ್ವ, ವೀರ ಅಭಿಮನ್ಯು, ರತಿಕಲ್ಯಾಣ, ಲವಕುಶರ ಕಾಳಗ ಸೇರಿದಂತೆ ನೂರಾರು ಪ್ರಸಂಗಗಳನ್ನು ಆಯ್ಕೆ ಮಾಡಿಕೊಂಡು ಆಡುತ್ತಾರೆ. ಬಯಲಾಟ ನಮ್ಮ ಜಿಲ್ಲೆಯ ಹೆಮ್ಮೆಯ ಕಲೆಯಾಗಿದೆ ಎಂದು ಹೇಳಿದರು.
ಮುಖಂಡರಾದ ರಾಜಗೋಪಾಲರೆಡ್ಡಿ, ಲಕ್ಷö್ಮಣ, ಸತ್ಯನಾರಾಯಣರಡ್ಡಿ ಕೊಮಾರೆಪ್ಪ, ದೊಡ್ಡರಂಗಪ್ಪ, ಹನುಮಂತಪ್ಪ, ಶ್ರೀನಿವಾಸರೆಡ್ಡಿ, ಗಾದಿಲಿಂಗಪ್ಪ, ಪಾಂಡು ಮತ್ತು ಗ್ರಾಮಸ್ಥರು ಇದ್ದರು.

Share and Enjoy !

Shares