
ರಾಯಚೂರಜಿಲ್ಲೆ ಸಿರಿವಾರ:-ಮಕ್ಕಳು ಮತ್ತು ಗರ್ಭಿಣಿಯರು ಮೊಟ್ಟೆ ತರಕಾರಿ ಮೊಳಕೆ ಹೊಡೆದ ಧಾನ್ಯಗಳು ಕೊಡುವುದರಿಂದ ಹುಟ್ಟುವ ಮಕ್ಕಳು ಮತ್ತು ಗರ್ಭಿಣಿಯರು ಆರೋಗ್ಯ ಉತ್ತಮವಾಗಿರುತ್ತದೆ ಎಂದು ಪಟ್ಟಣ ಪಂಚಾಯಿತಿ ವಾರ್ಡ ನಂ 05 ರ ಸದಸ್ಯರ ಪುತ್ರರಾದ ರಾಜೇಶ್ ನಾಯಕ್ ಹೇಳಿದರು .
ಅವರು ಪಟ್ಟಣದ ವಾರ್ಡ ನಂ 5 ರಲ್ಲಿ ಬರುವ ಕೇಂದ್ರದ ಸಂಖ್ಯೆ 11ರ ಅಂಗನವಾಡಿ ಕೇಂದ್ರದಲ್ಲಿ ಆರು ತಿಂಗಳಿಂದ ಮೂರು ವರ್ಷದ ಮಕ್ಕಳಿಗೆ ಮನೆಗೆ ಆಹಾರ ಪುಷ್ಟಿ ವಿತರಿಸಿ ಮಾತನಾಡಿ ಎಲ್ಲಾ ಅಂಗನವಾಡಿ ಕೇಂದ್ರದಲ್ಲಿ ಉಚಿತವಾಗಿ ರಾಗಿ ಪುಷ್ಠಿ ಶೇಂಗಾ ಬೆಲ್ಲ ಹೆಸರು ಹಾಲಿನ ಪುಡಿ ಸಕ್ಕರೆ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು
ನಂತರ ಯುವ ಮುಖಂಡ ರವಿ ನಾಯಕ್ ಮಾತನಾಡಿ ಅವರು ತಮ್ಮ ವಾರ್ಡಿನ ವ್ಯಾಪ್ತಿಗೆ ಬರುವ ಅಂಗನವಾಡಿ ಕೇಂದ್ರದಲ್ಲಿ ಆಹಾರ ಪುಷ್ಠಿ ವಿತರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಸರ್ಕಾರದ ಯೋಜನೆಗಳನ್ನು ಮಕ್ಕಳು ಗರ್ಭಿಣಿಯರು ಬಾಣಂತಿಯರು ಇದರ ಸದುಪಯೋಗ ಪಡೆದುಕೊಳ್ಳುತ್ತಾ ಜೊತೆಗೆ ಹೆಚ್ಚಾಗಿ ಹಸಿರು ತರಕಾರಿ ಮೊಳಕೆವಾಡದ ಕಾಳುಗಳನ್ನು ಹೆಚ್ಚಾಗಿ ಉಪಯೋಗಿಸಬೇಕು ನಿಮ್ಮ ಆರೋಗ್ಯಕ್ಕೆ ಉತ್ತಮ ಎಂದು ಸಲಹೆ ನೀಡಿದರು
ಈ ಸಂದರ್ಭದಲ್ಲಿ ಕಾರ್ಯಕರ್ತೆಯಾದ ಮಹೇಶ್ವರಿ ಸಹಾಯಕಿ ಖಾಜಾಬಿ ಫಲಾನುಭವಿಗಳು ತಾಯಂದಿರು ಮಕ್ಕಳು ಭಾಗವಹಿಸಿದ್ದರು
Post Views: 4