ಬಳ್ಳಾರಿ ಜಿಲ್ಲೆ
ಕುರುಗೋಡು:ಜನರಲ್ಲಿದ್ದ ಮೂಢನಂಬಿಕೆ, ಅಜ್ಞಾನ, ಅಂಧಕಾರವನ್ನು ತೊಡೆದು ಹಾಕಲು ಕನಕದಾಸರು ರಚಿಸಿದ ಕೀರ್ತನೆಗಳು,ಉಪಭೋಗಗಳು,ಮಂಡಿಕೆಗಳು ಇಂದಿಗೂ ಶಾಶ್ವತ ಸತ್ಯವಾಗಿವೆ.ಬುದ್ದ,ಬಸವ,

ಅಂಬೇಡ್ಕರ್ ರಂತಹ ಮಹಾನ್ ಪುರುಷರ ಆದರ್ಶ ತತ್ವಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.
ತಮ್ಮ ಮಕ್ಕಳಿಗೆ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿ ಮಾಡಿದ್ದೇ ಆದರೆ ಯಾವುದೇ ಸಮುದಾಯವಾದರೂ ಏಳಿಗೆಯಾಗಲು ಸಾಧ್ಯ ಎಂದು ತಹಶೀಲ್ದಾರ್ ಕೆ.ರಾಘವೇಂದ್ರರಾವ್ ತಿಳಿಸಿದರು.
ಅವರು ಪಟ್ಟಣದ ತಹಶೀಲ್ದಾರ್ ಕಚೇರಿ ಪ್ರಾಂಗಣದಲ್ಲಿ ತಾಲೂಕು ಅಡಳಿತ ಹಾಗೂ ಕುರುಬ ಸಮುದಾಯದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಭಕ್ತ ಶ್ರೇಷ್ಠ ಕನಕದಾಸರ 535ನೇ ಜಯಂತೋತ್ಸವ ಹಾಗೂ ಒನಕೆ ಓಬವ್ವ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದಿಂದ ಹಲವು ಸೌಲಭ್ಯಗಳು ದೊರೆಯುತ್ತಿದ್ದು ಈ ಸಮುದಾಯದವರು ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕುರುಬ ಸಮಾಜದ ಮುಖಂಡ ವಿರುಪಾಕ್ಷಿಗೌಡ ಮಾತನಾಡಿ, ಕುರುಬ ಸಮುದಾಯ ರಾಜಕೀಯ, ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದು, ಸಮುದಾಯದಲ್ಲಿ ಆನೇಕ ಜನರು ಬಡತನದಲ್ಲಿ ಬಳಲುತ್ತಿದ್ದಾರೆ. ಹಾಗಾಗಿ ಸಮಾಜದ ಅಭಿವೃದ್ಧಿಗಾಗಿ ಸಮುದಾಯ ಮತ್ತು ಗುರುಗಳು ಅನೇಕ ವರ್ಷಗಳಿಂದ ಎಸ್.ಟಿ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದಾರೆ ಆದರೆ ಸರಕಾರ ಮಾತ್ರ ನಿರ್ಲಕ್ಷ್ಯ ತೋರುತ್ತಿದೆ. ಹಿಂದುಳಿದ ಜನಾಂಗವಾದ ಕುರುಬರ ಅಭಿವೃದ್ಧಿಗೆ ಸರಕಾರ ನ.21ರೊಳಗೆ ಎಸ್.ಟಿ ಮೀಸಲಾತಿ ನೀಡಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಂತರ ಗ್ರೇಡ್-2 ತಹಶೀಲ್ದಾರ್ ತಹಶೀಲ್ದಾರ್ ಮಲ್ಲೇಶಪ್ಪ, ಪ್ರಸ್ತಾವಿಕವಾಗಿ ಮಾತನಾಡಿ ಸಮುದಾಯಗಳಲ್ಲಿ ಕುರುಬ
ಸಮುದಾಯ ಅತ್ಯಂತ ದೊಡ್ಡ ಸಮುದಾಯವಾಗಿದ್ದು ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಸರಕಾರಿ ನೌಕರರ ಸಂಘದ ಅಧ್ಯಕ್ಷ ಗುಂಡಪ್ಪನವರ ನಾಗರಾಜ, ಕಸಾಪ ಅಧ್ಯಕ್ಷ ನಾಗರಾಜ ಮಸೂತಿ, ಮಾತನಾಡಿ ಕುರುಬ ಸಮಾಜವು ಅತ್ಯಂತ ಶ್ರೇಷ್ಠ ಸಮುದಾಯ ಎಂದು ಬಿಂಬಿತವಾಗಿದೆ ಈ ಸಮುದಾಯ ಯಾವುದೇ ಕಾರ್ಯಕ್ಕೂ ಮೊದಲು ಇವರ ಬಳಿ ವ್ಯಾಪಾರ, ವ್ಯವಹಾರ ಮಾಡಿದರೆ ಒಳ್ಳೆಯದು ಎಂಬ ಅಭಿಪ್ರಾಯದ ಜೊತೆಗೆ ಇವರ ಮನಸ್ಸು ಸಹ ಹಾಲಿನಂತೆಯೇ ಪರಿಶುದ್ಧ ಎಂದು ಕೊಂಡಾಡಿದರು.ನಂತರ ಮಾತನಾಡಿದ ಹಿಂದುಳಿದ ವರ್ಗಗಳ ಅಧ್ಯಕ್ಷ ಮಲ್ಲಿಕಾರ್ಜುನ ಎಸ್.ಟಿ ಮೀಸಲಾತಿ ನೀಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಅನೇಕ ಕುರುಬ ಸಮಾಜದವರು ಈ ಸರ್ಕಾರಿ ಕಾರ್ಯಕ್ರಮದಿಂದ ದೂರ ಉಳಿದಿದ್ದಾರೆ ಎಂದರು.
ಪ್ರಾರಂಭದಲ್ಲಿ ಪಟ್ಟಣದ ಕಲ್ಗುಡೇಶ್ವರ ದೇವಾಲಯದಲ್ಲಿ ಸಮಾಜದ ವತಿಯಿಂದ ಭಕ್ತ
ಕನಕದಾಸನಿಗೆ ಸರಳವಾಗಿ ಪೂಜೆ ಸಲ್ಲಿಸಲಾಯಿತು.
ಇನ್ನೂ ತಾಲೂಕು ಆಡಳಿತ ಕನಕದಾಸರ ಮತ್ತು ಒನಕೆ ಒಬವ್ವ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿ ಜಯಂತಿ ಆಚರಿಸಿದರು.
ಈ ಸಂದರ್ಭದಲ್ಲಿ ಶೀರಾಸ್ತೇದಾರ ಶಿವರತ್ನಮ್ಮ, ಬಂಗಿ ಮಲ್ಲಯ್ಯ, ಕೆ.ಮಲ್ಲಿಕಾರ್ಜುನ್, ಪುರಸಭೆ ಸದಸ್ಯ ಚನ್ನಪಟ್ಟಣ ಮಲ್ಲಿಕಾರ್ಜುನ, ಸೋಮಲಾಪುರ ಪಂಪಾಪತಿ, ಸಿದ್ದಪ್ಪ, ಎನ್.ರಾಜ, ಹಾಲುಮತ ಮಹಾಸಭಾ ಅಧ್ಯಕ್ಷ ಮುರುಣ್ಣಿ ವೀರೇಶ್, ಬಿಜೆಪಿ ಒಬಿಸಿ ಅಧ್ಯಕ್ಷ ಹಾಗೂ ಯುವ ಮುಖಂಡ ನಾಗರಾಜ,ಬಿ.ಸಿದ್ದಯ್ಯ, ಕುರುಬ ಸಮುದಾಯದ ಮುಖಂಡರು, .
ವೆಂಕಟೇಶ ಗೌಡ,ಮಂಜುನಾಥಕಚೇರಿ ಸಿಬ್ಬಂದಿ ವರ್ಗ ಹಾಗೂ ಇನ್ನಿತರರು ಉಪಸ್ಥಿತರಿದ್ದರು