ಲಿಟಲ್ ಹಾರ್ಟ್ ಶಾಲೆ ವಿದ್ಯಾರ್ಥಿಗಳಿಂದ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮ.   

Share and Enjoy !

Shares
Listen to this article

ಕೊಪ್ಪಳ ಜಿಲ್ಲೆ ಗಂಗಾವತಿ  : ನಗರ ಲಿಟಲ್ ಹಾರ್ಟ್ ಶಾಲೆಯ ವಿದ್ಯಾರ್ಥಿಗಳು ಶನಿವಾರ ದಂದು ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನಕ್ಕೆ ತೆರಳಿ ಪತ್ರಕರ್ತರೊಂದಿಗೆ ಸಂವಾದನವನ್ನು ನಡೆಸುವುದರ ಮೂಲಕ ಹಲವು ವಿಷಯಗಳನ್ನು ಅರಿತುಕೊಂಡರು,, ಈ ಸಂದರ್ಭದಲ್ಲಿ ಶಾಲೆಯ ಹಲವು ವಿದ್ಯಾರ್ಥಿಗಳು ಪತ್ರಕರ್ತರಾಗಲು ಇರಬೇಕಾದ ಅರ್ಹತೆಗಳೇನು. ಪತ್ರಕರ್ತರು ಬರೆದ ಸುದ್ದಿಗಳು ಮುಂದೆ ರದ್ಧಿ ಗಳಾಗುತ್ತವೆ ಸಮಾಜದ ಅಂಕು ಡೊಂಕುಗಳನ್ನು ತಿದ್ದುವಲ್ಲಿ ಪತ್ರಿಕೆ ಹಾಗೂ ಮಾಧ್ಯಮದವರ ಪಾತ್ರವೇನು, ಬಾಲ್ಯ ವಿವಾಹ ಹಾಗೂ ಬಾಲಕಾರ್ಮಿಕರ ಸಮಸ್ಯೆಗಳ ಬಗ್ಗೆ ಪತ್ರಕರ್ತ ಜವಾಬ್ದಾರಿಯನ್ನು ಹೀಗೆ ಹಲವು ಪ್ರಶ್ನೆಗಳ ಮೂಲಕ ಪತ್ರಕರ್ತರಿಂದ ಉತ್ತರ ಪಡೆದುಕೊಂಡರು, ಜೊತೆಗೆ ವೈಜ್ಞಾನಿಕ ಕೊಡುಗೆಯಿಂದಾಗಿ ಎಲೆಕ್ಟ್ರಾನಿಕ್ ಮಾಧ್ಯಮ ದಿಂದಾಗಿ ಮೂಲ ಪತ್ರಿಕೆಗಳು ತಮ್ಮ ಮೌಲ್ಯವನ್ನು ಕಳೆದುಕೊಳ್ಳುತ್ತಿವೆ. ಎಂಬ ಅನೇಕ ಪ್ರಶ್ನೆಗಳಿಗೆ ವೇದಿಕೆಯಲ್ಲಿರುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ನಾಗರಾಜ ಇಂಗಳಗಿ, ಎಂ ಜಿ ಶ್ರೀನಿವಾಸ, ಸಾಕ್ಷಿ ರವಿ ವಿಜಯ್ ಕುಮಾರ. ಗುಡ್ಲಾನೂರು , ಹಿರೇಮಠ ಮತ್ತಿತರರು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸೂಕ್ತವಾಗಿ ವಿವರಿಸಿದರು,, ಸಂವಿಧಾನದ ನಾಲ್ಕನೆಯ ಅಂಗವಾದ ಪತ್ರಿಕಾ ರಂಗವು ಶಾಸಕಾಂಗ ಹಾಗೂ ಕಾರ್ಯಾಂಗದ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ ವೈಜ್ಞಾನಿಕ ಬೆಳವಣಿಗೆಯಿಂದ ಸಾಕಷ್ಟು ಎಲೆಕ್ಟ್ರಾನಿಕ್ ಮಾಧ್ಯಮಗಳು ಕ್ಷಣ ಅರ್ಧದಲ್ಲಿ ಸುದ್ದಿಗಳನ್ನು ಬಿಂಬಿಸಿದರು ಅವುಗಳನ್ನು ನ್ಯಾಯಾಲಯ ಇತರ ಕ್ಷೇತ್ರದಲ್ಲಿ ಆಧಾರವಾಗಿ ಪರಿಗಣಿಸುವುದಿಲ್ಲ ಜೊತೆಗೆ ಇವತ್ತಿನ ಸುದ್ದಿಗಳು ನಾಳೆ ರಜಿಗಳಾಗುತ್ತವೆ ತಪ್ಪು ಗ್ರಹಿಕೆಯಾಗಿದೆ ಪತ್ರಿಕೆ ರದ್ದು ಆಗಬಹುದು ಆದರೆ ಅದರಲ್ಲಿರುವ ಸುದ್ದಿ ಶಾಶ್ವತವಾಗಿ ಜೀವಂತಿಕೆಯನ್ನು ಹೊಂದಿರುತ್ತದೆ ಎಂದು ಪತ್ರಕರ್ತ ಮಿತ್ರನೂರ್ವ ಸೂಕ್ತ ಉತ್ತರವನ್ನು ಕೊಟ್ಟರು, ಇನ್ನು ಬಾಲ್ಯ ವಿವಾಹ ಬಾಲಕಾರ್ಮಿಕರ ಸಮಸ್ಯೆ ಇವುಗಳನ್ನು ಕಾನೂನುಬಾಹಿರ ಎಂದು ಹೇಳಲಾಗಿದೆ ಇದನ್ನು ಆಚರಿಸುವವರು ಇದಕ್ಕೆ ಕುಮ್ಮಕ್ಕು ಕೊಡುವರು ಕಾನೂನು ಪ್ರಕಾರ ಅಪರಾಧಿಗಳೆಂದು ಘೋಷಣೆ ಮಾಡಲಾಗುತ್ತದೆ ಯಾವುದೇ ಕಾರಣಕ್ಕೂ ಯಾವುದೇ ಮಗು ಉಚಿತ ಹಾಗೂ ಕಡ್ಡಾಯ ಶಿಕ್ಷಣ ಅಡಿಯಲ್ಲಿ ಶಿಕ್ಷಣ ಸೌಲಭ್ಯದಿಂದ ವಂಚಿತರಾಗಬಾರದು ಎಂಬ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೆ ತಂದಿದೆ ಹೀಗೆ ಹಲವು ವಿಷಯಗಳನ್ನು ನಡೆದ ಹೋದ ಘಟನಾವಳಿಯ ಸುದ್ದಿಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟರು ಒಟ್ಟಾರೆ ಕ್ರಿಯಾತ್ಮಕ ಚಟುವಟಿಕೆಗಳಿಗೆ ಹೆಸರಾದ ನಗರ ದ ಲಿಟಲ್ ಹಾರ್ಟ್ ಶಾಲೆಯ ಇಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸನಕ್ಕೆ ದಾರಿದೀಪವಾಗಿದೆ ಈ ಹಿನ್ನೆಲೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಜಗನ್ನಾಥ ಆಲಂಪಲ್ಲಿ  ಮುಖ್ಯೋಪಾಧ್ಯಾಯರಾದ ಪ್ರಿಯಕುಮಾರಿ ಕಾರ್ಯ ಮೆಚ್ಚುವಂತದ್ದು ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ನೀಲಕಂಠ ಸೇರಿದಂತೆ ಸಹ ಶಿಕ್ಷಕರು ಸಂವಾದದಲ್ಲಿ ಪಾಲ್ಗೊಂಡಿದ್ದರು.

Share and Enjoy !

Shares