ಶಿಕ್ಷಕರ ಮಾರ್ಗದರ್ಶನವೇ ವಿದ್ಯಾರ್ಥಿಗಳಿಗೆ ದಾರಿ ದೀಪ – ರಾಜಾ ವೆಂಕಟಪ್ಪ ನಾಯಕ

Share and Enjoy !

Shares
Listen to this article
ರಾಯಚೂರು ಜಿಲ್ಲೆ  ಸಿರವಾರ: ತಾಲೂಕಿನ ಸಮೀಪದ ಬಾಗಲವಾಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪ್ರೌಢಶಾಲೆಯ ರಜತ ಮಹೋತ್ಸವ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ಉದ್ಘಾಟಿಸಿ ಮಾತನಾಡಿ ಶಿಕ್ಷಕರ ಮಾರ್ಗದರ್ಶನವೇ ವಿದ್ಯಾರ್ಥಿಗಳಿಗೆ ದಾರಿದೀಪ ಎಂದು ಹೇಳಿದರು
  ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಸರ್ಕಾರಿ ಪ್ರೌಢಶಾಲೆ ಬಾಗಲವಾಡದಲ್ಲಿ ಹಮ್ಮಿಕೊಂಡಿದ್ದ ರಜತ ಮಹೋತ್ಸವ ಗುರುವಂದನ ಕಾರ್ಯಕ್ರಮ ಅತ್ಯಂತ ಐತಿಹಾಸಿಕವಾಗಿದ್ದು ಈ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ್ದು ನನ್ನ ಸೌಭಾಗ್ಯವಾಗಿದೆ ಇಲ್ಲಿ ಕಲಿತಂತ ವಿದ್ಯಾರ್ಥಿಗಳು ಅತ್ಯಂತ ಉನ್ನತ ಮಟ್ಟದ  ಹುದ್ದೆಗಳಲ್ಲಿ ಇದ್ದು ಮುಂದೆ ಕಲಿಯುವ ವಿದ್ಯಾರ್ಥಿಗಳು ಅತ್ಯಂತ ಉನ್ನತ ಮಟ್ಟದಲ್ಲಿ ಬೆಳೆಯಲಿ ಎಂದು ಆಶಿಸುತ್ತಾ ವಿದ್ಯಾರ್ಥಿಗಳ ಜೀವನಕ್ಕೆ ಶಿಕ್ಷಕರ ಬುದ್ಧಿಶಕ್ತಿಯಿಂದ ಕಲಿಸುವ ಸುಸಂಸ್ಕೃತ ಮತ್ತು ಶಿಸ್ತು ಪಾಠ ವಿದ್ಯಾರ್ಥಿಗಳ ಜೀವನ ಮುಂದೆ ರೂಪಿಸಿಕೊಳ್ಳಲು ಸಹಕಾರಿಯಾಗುವುದು ಎಂದರು ನಾನು ಶಾಸಕನಾದ ನಂತರ ನನ್ನ ಕ್ಷೇತ್ರದದ್ಯಂತ ಶಿಕ್ಷಣ ಕ್ಷೇತ್ರಕ್ಕೆ 180 ಕೋಟಿಗು ಅಧಿಕ ರೂಪಾಯಿಗಳನ್ನು ಮಂಜೂರು ಮಾಡಿರುವುದು ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ 154 ಘಟಕಗಳನ್ನು ಸ್ಥಾಪಿಸಿರುವದಾಗಿ ತಿಳಿಸಿದರು. ವಿಶೇಷವಾಗಿ ಬಾಗಲವಾಡ ಪ್ರೌಢಶಾಲೆಗೆ ಸಿಸಿ ರಸ್ತೆ ನೂತನ ಎರಡು ಕಟ್ಟಡಗಳು ಮತ್ತು ಅಟಲ್ ಟಿಂಕರಿಂಗ್ ಲ್ಯಾಬ್ ಅನ್ನು ಮಂಜೂರು ಮಾಡಿ ಇರುವುದಾಗಿ ತಿಳಿಸಿದರು
ಮಾಜಿ ಶಾಸಕರು ಗಂಗಾಧರ ನಾಯಕ್ ಮಾತನಾಡಿ ಅಂಬೇಡ್ಕರ್ ಹೇಳಿದಂತೆ ಶಿಕ್ಷಣ ಸಂಘಟನೆ ಹೋರಾಟ ಈ ಮೂರು ವಿದ್ಯಾರ್ಥಿಗಳ ಜೀವನಕ್ಕೆ ಅತ್ಯಂತ ಅವಶ್ಯಕವಾಗಿದೆ ಎಂದರು
 ಕಾರ್ಯಕ್ರಮಕ್ಕೂ ಮೊದಲು ವೆಂಕಟೇಶ್ವರ ದೇವಾಲಯದಿಂದ ಜ್ಞಾನಜೋತಿದೀಪವನ್ನು ಶಾಲೆಗೆ ತರಲಾಯಿತು ನಂತರ ಶಾಲಾ ಮಕ್ಕಳಿಂದ ಸಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಶಾಲೆ ಸ್ಥಾಪನೆ ಕಮಿಟಿಯ ಸಂಬಂಧಿಕರಿಗೆ, ಶಾಸಕರಿಗೆ ಮತ್ತು ಮಾಜಿ ಶಾಸಕರಿಗೆ ಸನ್ಮಾನಿಸಲಾಯಿತು ಇದೇ ಸಂದರ್ಭದಲ್ಲಿ ಶ್ರೀಮತಿ ಸರ್ವಮಂಗಳ ಇವರು ಬರೆದಿರುವ,.” ನಾ ಕಂಡಂತೆ ನನ್ನವರು” ಎನ್ನುವ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು
ಈ ಸಂದರ್ಭದಲ್ಲಿ ಬಸನಗೌಡ ಬ್ಯಾಗವಾಟ್ ಮಾಜಿ ಶಾಸಕರು, ಚಂದ್ರಶೇಖರ್ ದೊಡ್ಮನಿ ಕ್ಷೇತ್ರ ಶಿಕ್ಷಣಾಧಿಕಾರಿಗಳು, ವೆಂಕೋಬ ನಾಯಕ ಅಧ್ಯಕ್ಷತೆಯನ್ನು ವಹಿಸಿದ್ದರು, ನಾಗಣ್ಣ ಸಾಹು, ಶಿವಕುಮಾರ್ ಪೋಲೀಸ್ ಪಾಟೀಲ್, ಬಸವರಾಜ್ ಮೇಟಿ ಗ್ರಾಮ ಪಂಚಾಯತ್ ಸದಸ್ಯರು ಊರಿನ ಗಣ್ಯರು ಭಾಗವಹಿಸಿದರು

Share and Enjoy !

Shares