ಸಿಂಧನೂರು: ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಪಂಚ ರತ್ನ ಯೋಜನೆಗಳನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರೂಪಿಸಿದ್ದು.ಮತದಾರರು ಜೆಡಿ ಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ನಾಡಗೌಡರ ನಡೆ ಸಾಧನೆ ಕಡೆ ಹಾಗೂ ಗ್ರಾಮ ವಾತ್ಸವ್ಯದ 9 ನೇ ದಿನವಾದ ಶನಿವಾರದಂದು ತಾಲ್ಲೂಕಿನ ಶಸಕರ ಸ್ವಗ್ರಾಮವಾದ ಜವಳಗೇರಾ ಗ್ರಾಮಕ್ಕೆ ಆಗಮಿಸಿತು. ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಮಾತನಾಡಿ,ರಾಜ್ಯದಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ವೆಂಕಟರಾವ್ ನಾಡಗೌಡರು ಉಪ ಮುಖ್ಯಮಂತ್ರಿ ಆಗುವುದು ಪಕ್ಕಾ.ಯಾವೊಬ್ಬ ಶಾಸಕ ಸಾಧನೆಗಳನ್ನು ಇಟ್ಟುಕೊಂಡು ಮತದಾರರ ಮುಂದೆ ಹೋಗಿರುವ ಇತಿಹಾಸ ಇಲ್ಲ. ನಾಡಗೌಡರು ಕ್ಷೆತ್ರದ ಪ್ರತಿಗ್ರಾಮಕ್ಕೆ ತೆರಳಿ ತಾವು ಮಾಡಿದ ಅಭಿವೃದ್ಧಿ ಕಾರ್ಯಗಳ ಕುರಿತು ಮತದಾರರಿಗೆ ತಿಳಿಸುತ್ತಿರುವುದು ವಿಶೇಷವಾಗಿದೆ ಎಂದರು.
ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿ, ಕಾಂಗ್ರೆಸ ಗೆ ಭಾರತ ಜೋಡೋ ಯಾತ್ರೆ ಹಾಗೂ ಬಿಜೆಪಿಗೆ ಹಿಂದೂ ಮುಸ್ಲಿಂ ಎಂದು ಜಗಳಕ್ಕೆ ಮಾತ್ರ ಸೀಮಿತವಾಗಿದ್ದು. ಅಭಿವೃದ್ಧಿ ಇವರಿಗೆ ಬೇಕಾಗಿಲ್ಲ.ಮೋದಿಯವರಿಗೆ ಆದಾನಿ, ಅಂಬಾನಿಗಳ ಅಭಿವೃದ್ಧಿಯೆ ದೇಶದ ಅಭಿವೃದ್ಧಿ ಯಾಗಿದ್ದು ಅದಕ್ಕಾಗಿ ದೇಶದ ಜನರು ,ರೈತರು,ಸಂಕಷ್ಟಕ್ಕೆ ಸಿಲುಕಿದರು ಆದಾನಿ,ಅಂಬಾನಿ ರವರ ಸಾಲ ಮಾತ್ರ ಮನ್ನಾ ಮಾಡುತ್ತಿದ್ದಾರೆ.ಜೆಡಿಎಸ್ ಪಕ್ಷ ಅಧಿಕಾರಕ್ಕೆ ತಂದರೆ ಕುಮಾರಸ್ವಾಮಿಯವರ ಪಂಚ ತಂತ್ರ ಯೋಜನೆಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ರಾಜ್ಯ ಉಪಾಧ್ಯಕ್ಷ ಮಹಾಂತೇಶ ಪಾಟೀಲ್ ಅತ್ನೂರು,ತಾಲೂಕಾಧ್ಯಕ್ಷ ಬಸವರಾಜ ನಾಡಗೌಡ,ಮುಖಂಡರಾದ ಅಕ್ಬರ್ ನಾಗುಂಡಿ,ಚಂದು ಭೋಪಾಲ್ ನಾಡಗೌಡ,ಧರ್ಮನಗೌಡ ,ಯಂಕೋಬ ಕಲ್ಲುರು,ಚಂದ್ರ ಶೇಖರ ಮೈಲಾರ,ಎಂ ಡಿ ನದಿಮುಲ್ಲಾ,ದಾಸರಿ ಸತ್ಯನಾರಾಯಣ,ನಾಗೇಶ ಹಂಚಿನಾಳ ಕ್ಯಾಂಪ್,ವೆಂಕಟೇಶ ನಂಜಲದಿನ್ನಿ,ಪಂಪಣ್ಣ ವಕೀಲರು ಸೇರಿದಂತೆ ಅನೇಕರು ಇದ್ದರು.