ಕೊಪ್ಪಳಜಿಲ್ಲೆ ಗಂಗಾವತಿ: ವ್ಯವಹಾರಿಕ ದೃಷ್ಟಿಯಿಂದ ಹನುಮಜನಿಸಿದ ಈ ನೆಲದ ಕುರಿತು ಸುಳ್ಳು
ಪ್ರಚಾರ ನಡೆಸುತ್ತಿರುವ ಅನ್ಯ ರಾಜ್ಯಗಳ ಕೂಗಿಗೆ ಕಿವಿಗೊಡದೆ ಪ್ರವಾಸೋದ್ಯಮ
ದೃಷ್ಟಿಯಿಂದ ಸಮರೋಪಾದಿಯಲ್ಲಿ ಅಂಜನಾದ್ರಿ ಅಭಿವೃದ್ಧಿ ಸರಕಾರ ಕ್ರಮ
ಕೈಗೊಳ್ಳಬೇಕೆಂದು ಕರವೇ ರಾಜ್ಯಧ್ಯಕ್ಷ ಶಿವರಾಮೇಗೌಡ ಹೇಳಿದರು.
ಅವರು ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಟಿಯನ್ನುದ್ದೇಶಿಸಿ ಶನಿವಾರ
ಮಾತನಾಡಿದರು. ಹನುಮ ಜನ್ಮಸ್ಥಾನದ ಬಗ್ಗೆ ಮಹಾರಾಷ್ಟç ಮತ್ತು ಟಿಟಿಡಿ ಇವುಗಳು
ತಗಾದೆ ತೆಗೆದಿದ್ದು ಇದರಲ್ಲಿ ಸತ್ಯಾಂಶವಿಲ್ಲ. ಕೊಪ್ಪಳ ಜಿಲ್ಲೆಯ ಒಣ ಪ್ರದೇಶಗಳ
ಅಭಿವೃದ್ಧಿಗೆ ಕೃಷ್ಣಾ ಬಿ ಸ್ಕೀಂ ಮೂಲಕ ಅಧಿಕಾರಕ್ಕೆ ಬಂದ ಪಕ್ಷಗಳು ತಮ್ಮ
ಭರವಸೆ ಮರೆತು ಆಡಳಿತ ನಡೆಸಿದವು, ಬಿಜೆಪಿ ಸರಕಾರವೂ ಇದಕ್ಕೆ ಹೊರತಾಗಿಲ್ಲ ರಾಜ್ಯ
ಸರಕಾರಕ್ಕೆ ಬಿಸಿ ಮುಟ್ಟಿಸಲು ಕೃಷ್ಣಾ ಬಿ ಸಕಿಂ ಕಾಮಗಾರಿ ಆರಂಭಿಸಲು ಒತ್ತಾಯಿಸಿ ಶೀಘ್ರ
ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು ಎಂದರು. ಕೃಷ್ಣಾ ಬಿಸ್ಕೀಂ ನಿಂದ ಸುಮಾರು
೬೦ ಸಾವಿರ ಹೆಕ್ಟೇರ್ ಪ್ರದೇಶ ನೀರಾವರಿಯಾಗಲಿದ್ದು ಲಕ್ಷಾಂತರ ಜನರ ಬದುಕಿಗೆ
ಬೆಳಕಾಗಲಿದೆ ಎಂದ ವಿವರಿಸಿದರು.
ಗಡಿ ಪ್ರದೇಶದ ಶಾಲೆಗಳ ಶೋಚನೀಯ ಸ್ಥಿತಿಯಲ್ಲಿವ, ರಾಜ್ಯದ ಕನ್ನಡ
ಶಾಲೆಗಳು ಮುಚ್ಚಲಾಗುತ್ತಿದೆ, ಶಿಕ್ಷಕರ ನೇಮಕ ಮಾಡುವ ಮೂಲಕ ಹಾಜರಾತಿ
ಕಡಿಮೆ ಇರುವ ಶಾಲೆಗಳನ್ನು ಮುಖ್ಯವಾಹಿನಿಗೆ ತರಬೇಕು, ಕನ್ನಡ ಭಾಷಿಕರಿಗೆ
ಕನ್ನಡ ನೆಲದಲ್ಲಿ ಉದ್ಯೋಗ ಸಿಗಬೇಕು ನಮ್ಮ ಹೋರಾಟದ ಫಲವಾಗಿ ಅನೇಕ
ಇಲಾಖೆಗಳಿಗೆ ಕನ್ನಡಿಗರಿಗೆ ಉದ್ಯೋಗ ದೊರೆಯುತ್ತಿದೆ, ಕೊಪ್ಪಳ ಜಿಲ್ಲೆಯ
ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಹೋರಾಟ
ಹಮ್ಮಿಕೊಳ್ಳಲಾಗುವುದು, ಕನ್ನಡ ಅನ್ನದ ಭಾಷೆಯನ್ನಾಗಿ ಮಾಡಲು ಕನ್ನಡಿಗರ
ಬೆಂಬಲ ಅಗತ್ಯವಾಗಿದೆ, ಜಾಗೃತರಾಗಬೇಕೆದಿ ಎಂದು ಕಿವಿಮಾತು ಹೇಳಿದರು.
(ಶಿವರಾಮೇಗೌಡ) ಉಪಾಧ್ಯಕ್ಷ ಅಜ್ಜಪ್ಪ ಕರಡಕಲ್, ಗಂಗಾವತಿ ತಾಲೂಕಾ ಅಧ್ಯಕ್ಷ
ಹನುಮೇಶ್ ಬಟಾರಿ ಮಾತನಾಡಿದರು. ಈ ಸಂದರ್ಭದಲ್ಲಿ ಕರವೆ ವಿವಿಧ ಘಟಕದ
ಪದಾಧಿಕಾರಿಗಳಾದ ನಾಗರಾಜ್ ಕಂಬಳಿ, ಶೇಖರ್ ಶ್ಯಾಗೋಟಿ, ಶಿವರಾಜ್ ಉಳಾಗಡ್ಡಿ,
ಮಲ್ಲಿಕಾರ್ಜುನ ಗುಗ್ಗರಿ ಮತ್ತು ಕೇಶಪ್ಪ ಮಾಲಿಪಾಟೀಲ್ ಇತರರಿದ್ದರು.