ಅದ್ದೂರಿಯಾಗಿ ಜರುಗಿದ ಬಿಜೆಪಿ ಎಸ್ಟಿ ಮೋರ್ಚಾ ನವಶಕ್ತಿ ಸಮಾವೇಶ

Share and Enjoy !

Shares
Listen to this article

ಬಳ್ಳಾರಿ, .ನ.20: ಬಳ್ಳಾರಿಯಲ್ಲಿ ಇಂದು ಬಿಜೆಪಿ ಎಸ್ಟಿ ಮೋರ್ಚಾದ ನವ ಶಕ್ತಿ ಸಮಾವೇಶ ನಡೆಯುತ್ತಿದೆ.
ಸಮಾವೇಶವನ್ನು ಪಕ್ಷದ ರಾಷ್ಟೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ವಾಲ್ಮೀಕಿ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಉದ್ಘಾಟಿಸಿದರು. ಸಮಾವೇಶದಲ್ಲಿ ಗಣ್ಯರು ಬಿಲ್ಲುಗಳಿಂದ ಬಾಣ ಬಿಟ್ಟು ಮುಂದಿನ  ಚುನಾವಣೆಯನ್ನು ಘೋಷಣೆಗೆ ಮುನ್ನುಡಿ ಬರೆದರು
ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮಾತನಾಡಿ, ಬಿಜೆಪಿ ಮಾತ್ರ ಕೆಳ ಸಮುದಾಯಗಳ ಅಭಿವೃದ್ಧಿಗೆ ಚಿಂತನೆ ಮಾಡುತ್ತದೆ. ತಳ ಸಮುದಾಯಗಳನ್ನು ಮುಖ್ಯ ವಾಹಿನಿಗೆ ತರುವ ಪ್ರಯತ್ನ ನಡೆದಿದೆ. ಇದಕ್ಕೆ ಉದಾ ಹರಣೆ ಎಂದರೆ, ಅರ್ಜುನ್ ಮುಂಡಾ ಅಂತವರು ಕೇಂದ್ರ ಸಚಿವರಾಗಿದ್ದು, ದ್ರೋಪದಿ ಮುರ್ಮ ರಾಷ್ಟ್ರಪತಿ ಆಗಿದ್ದು.
ಎಸ್ಟಿ ಸಮುದಾಯವನ್ನು ತನ್ನ ಓಟ್ ಬ್ಯಾಂಕ್ ಆಗಿ ಬಳಸಿಕೊಂಡ ಕಾಂಗ್ರೆಸ್ ಈ ಸಮುದಾಯದ ಜನತೆಯ ಅಭಿವೃದ್ಧಿ ಮಾತ್ರ ಮಾಡಲಿಲ್ಲ ಎಂದರು.
ಎಸ್ಟಿ, ಆದಿವಾಸಿ ಸಮುದಾಯಗಳ ಜಬತೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ ಯೋಜಬೆಗಳ ಬಗ್ಗೆ ವಿವರಿಸಿದರು.
ಯಡಿಯೂರಪ್ಪ ಅವರ ಆಶಿರ್ವಾದ, ಬೊಮ್ಮಾಯಿ ಅವರ ಹಗಲಿರುಳು ಶ್ರಮದಿಂದ ರಾಜ್ಯದಲ್ಲು ಸಾಕಷ್ಟು ಅಭಿವೃದ್ಧಿ ನಡೆಯುತ್ತಿದೆ. ಈ ಸರ್ಕಾರ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲು ನೀವೆಲ್ಲ ಚಿಂತನೆ ಮಾಡಬೇಕು, ಆಶಿರ್ವದಿಸಬೇಕು ಎಂದರು.
ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರು  ಮಾತನಾಡಿ. ದೇಶದಲ್ಲಿ   ಎಸ್ಸಿ, ಎಸ್ಟಿ ಮೀಸಲಾತಿಯನ್ನು ತೆಗೆದು ಹಾಕುತ್ತಾರೆಂಬ ವದಂತಿ ಹಬ್ಬಿಸಿದ್ದರು. ಆದರೆ ಕರ್ನಾಟಕದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸಿ ಬಿಜೆಪಿ ಧೋರಣೆ ಏನೆಂಬುದನ್ನು ತೋರಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ದುರ್ಬಲ ಜನರ ಅಭಿವೃದ್ಧಿಗೆ ಸದಾ ಸ್ಪಂದಿಸುತ್ತದೆ ಎಂದರು.
ಕಾಂಗ್ರೆಸ್ ಬರೀ ಸುಳ್ಳು ಹೇಳುತ್ತದೆ. ಬಳ್ಳಾರಿಯಿಂದ ಗೆದ್ದ ಸೋನಿಯಾ ಅವರು ಪ್ಯಾಕೇಜ್ ಘೋಷಣೆ ಮಾಡಿದ್ರು ಆದರೆ ಏನೂ ಆಗಲಿಲ್ಲ. ಅಮೇಥಿಯಲ್ಲಿ ಅಭಿವೃದ್ಧಿ ಮಾಡದಿದ್ದರಿಂದ ಅಲ್ಲುನ ಜನ ಪಾಠಕಲಿಸಿದ್ದಾರೆ.
ಅದೇ ರೀತಿ  11 ಬಾರಿ ರಾಜ್ಯದ ಬಜೆಟ್ ಮಂಡಿಸಿರುವ  ಸಿದ್ದರಾಮಯ್ಯ ಸಹ ಕ್ಷೇತ್ರಗಳ ಅಭಿವೃದ್ಧಿ ಮಾಡದೆ ಗೆಲುವಿಗಾಗಿ ರಾಜ್ಯಾದ್ಯಾಂತ ಕ್ಷೇತ್ರ ಹುಡುಕಾಟ ನಡೆಸಿದ್ದಾರೆಂದು ಟೀಕಿಸಿದರು.
ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಮುಕ್ತ ಆಗಬೇಕು ಈ ಕರ್ನಾಟಕ ಎಂದರು.
ಸಮಾವೇಶದಲ್ಲಿ ಸಿರುಗುಪ್ಪ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿ, ರಾಜ್ಯಕ್ಕೆ ದಿಕ್ಸೂಚಿಯಾಗಲಿದೆ ಈ ಸಮಾವೇಶ, ಎಸ್ಟಿ ಮತ್ತು ಎಸ್ಸಿ ಸಮುದಾಯಕ್ಕೆ 1956 ರಲ್ಲಿ ನೀಡಿದ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿ ಬಿಜೆಪಿ ಸರ್ಕಾರ ನಮ್ಮ ಈ ಸಮುದಾಯಗಳ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.
ಸುರುಪುರ ಶಾಸಕ ರಾಜುಗೌಡ ಅವರು ಮಾತನಾಡಿ,  ಗುರುವಿಗೆ ಬೆರಳು ನೀಡಿದ್ದು ವಾಲ್ಮೀಕಿ ಸಮಾಜ, ಶಿವನಿಗೆ ಕಣ್ಣು ನೀಡಿದ್ದು ವಾಲ್ಮೀಕಿ ಸಮಾಜ, ದೇಶಕ್ಕೆ ರಾಮಾಯಣ ನೀಡಿದ್ದು ವಾಲ್ಮೀಕಿ ಮಹರ್ಷಿ. ನಮ್ಮ‌ ಸಮಾಜಕ್ಕೆ ಮೀಸಲಾತಿ ಹೆಚ್ಚಿಸಿದ್ದು ಬಿಜೆಪಿ. ದಲಿತ ವಿರೋಧಿ ಪಕ್ಷ ಎಂದು ವಿಪಕ್ಷಗಳು ಹೇಳುತ್ತಿದ್ದವು. ಆದರೆ ಅವರೆಂದಿಗೂ ಮೀಸಲಾತಿ‌ ನೀಡಿ ಸಮುದಾಯವನ್ನು ಅಭಿವೃದ್ಧಿ ಮಾಡುವ ಕೆಲಸ ಮಾಡಲಿಲ್ಲ. ನಮ್ಮ ಜೀವ ಹೋಗುವವರೆಗೂ ವಾಲ್ಮೀಕಿ ಸಮಾಜ ಬಿಜೆಪಿಗೆ ಋಣಿಯಾಗಿರುತ್ತದೆ.
ದಲಿತ ಧ್ವನಿಯನ್ನು ಅರ್ಥ ಮಾಡಿಕೊಂಡಿದ್ದು ಬಿಜೆಪಿ ಮಾತ್ರ. ಉಳಿದ ಪಕ್ಷಗಳು ಮಾತ್ರ ಬರೀ ಮತ ಪಡೆದು ಓಟ್ ಬ್ಯಾಂಕ್ ಮಾಡಿಕೊಂಡರು. ನಮ್ಮನ್ನು ಉದ್ಧಾರ ಮಾಡಲಿಲ್ಲ. ಆದರೆ ಬಿಜೆಪಿ ಮಾತ್ರ ನಮಗೆ ಮೀಸಲಾತಿ ಹೆಚ್ಚಿಸಿ ನಮಗೆ ಅಭಿವೃದ್ಧಿ ಆಗಲು ಅವಕಾಶ ಮಾಡಿದೆ. ಮೀಸಲಾತಿಗಾಗಿ ಬಹಳಷ್ಟು ಹೋರಾಟ ಮಾಡಿದ್ದೇವೆ. ಅದಕ್ಕೆ ಪ್ರತಿಫಲ ಸಿಕ್ಕಿದೆಂದರು.
ಕಾಂಗ್ರೆಸ್‌ನಲ್ಲಿರುವವರು ನಕಲಿ ದೀನ ದಲಿತರು ನಾಯಕರಿದ್ದಾರೆ ಅವರ ಮಾತು ಕೇಳಬೇಡಿ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದರು. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್ ದಲಿತರ ಉದ್ದಾರದ ಬಗ್ಗೆ ಏನೇ ಹೇಳದರು ನಂಬ ಬೇಡಿ ಎಂದರು. ಈ ವರೆಗೂ ದಲಿತರ ನಾಯಕ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ‌ ಮಾಡಲಿಲ್ಲ. ಡಾ.ಪರಮೇಶ್ವರ ಅವರನ್ನು ಸೋಲಿದರು. ಹಾಹಾಗಿ ಆ ಪಕ್ಷವನ್ನು ನಂಬ ಬೇಡಿ ಎಂದರು
ಕೆ.ಎಂ.ಎಫ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ ಬಿಜೆಪಿ ಸರ್ಕಾರ ಸರ್ಕಾರ ನಮ್ಮ ಸುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವ ಉಪಕಾರಕ್ಕೆ ಬರುವ ಚುನಾವಣೆಯಲ್ಲಿ ಋಣ ತೀರಿಸಬೇಕು ಎಂದರು.
ಶಾಸಕ ಶಿವನಗೌಡ ನಾಯಕ್ ಮಾತನಾಡಿ ನಮ್ಮ ಸಮುದಾಯಕ್ಕೆ ನ್ಯಾಯ ಕೊಟ್ಟಿರುವ ಏಕೈಕ ಪಕ್ಷ ಬಿಜೆಪಿ ಮಾತ್ರ, ನಮ್ಮ ಸಮುದಾಯದ ಗುರುಗಳು ಧರಣಿ ಕುಳಿತಾಗ ಹೇಳಿದ್ದೆ. ನಮ್ಮ ಸರ್ಕಾರ ಕೊಟ್ಟ ಮಾತನ್ನು ಈಡೇರಿಸುತ್ತೆ. ಅದೇ ರೀತಿ ಮಾಡಿದೆಂದು ಹೇಳಿದರು.
ಈ ಸಂದರ್ಭದಲ್ಲಿ ವೇದಿಕೆ ಮತ್ತೊಂದು ಬಳಿ ಇದ್ದ ಎಸ್ಟಿ ಸಮುದಾಯದಲ್ಲಿದ್ದು ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿದವರನ್ನು ಸನ್ಮಾನಿಸಿ ಗೌರವಿಸಲಾಯಿತು. ಮುಖಂಡ ಗೋನಾಳ್ ಮುರಹರಗೌಡ ವಂದಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ, ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ,  ನಾರಾಯಣಸ್ವಾಮಿ , ಅರ್ಜುನ್ ಮುಂಡಾ,  ಭಗವಂತ್ ಖೂಬಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ  ಅರ್ಜುನ್ ಸಿಂಗ್, ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಜ್ಯ ಸಹ ಉಸ್ತುವಾರಿ ಡಿ.ಕೆ. ಅರುಣಾ,
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಸಿ.ಟಿ. ರವಿ, ರಾಜ್ಯ ಸಚಿವರಾದ ಸಾರಿಗೆ ಸಚಿವ  ಬಿ. ಶ್ರೀರಾಮುಲು, ಶಿಕ್ಷಣ ಸಚಿವ  ಬಿ.ಸಿ. ನಾಗೇಶ್, ಧಾರ್ಮಿಕ ದತ್ತಿ ಇಲಾಖೆ ಸಚಿವೆ  ಶಶಿಕಲಾ ಜೊಲ್ಲೆ, ಸಕ್ಕರೆ ಖಾತೆ ಸಚಿವ  ಶಂಕರ ಪಾಟೀಲ್ ಮುನೇನಕೊಪ್ಪ, ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಗಣಿ ಮತ್ತು ಭೂವಿಜ್ಞಾನ ಸಚಿವ  ಹಾಲಪ್ಪ ಆಚಾರ್, ಎಸ್ ಟಿ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ  ವಿ.ಪಿ. ರೆಡ್ಡಿ ಮತ್ತು ಗಂಗಾಧರ ನಾಯಕ್, ಎಸ್.ಟಿ. ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ  ಗಜೇಂದ್ರ ಸಿಂಗ್ ಪಟೇಲ್, ರಾಜ್ಯ ಪ್ರಧಾನ ಕಾರ್ಯದರ್ಶಿ  ಸಿದ್ದರಾಜು, ಎಸ್.ಟಿ. ಮೋರ್ಚಾ ರಾಜ್ಯಾಧ್ಯಕ್ಷ ಶ ತಿಪ್ಪರಾಜು ಹವಾಲ್ದಾರ್ ಬಳ್ಳಾರಿ ಸಂಸದ  ವೈ. ದೇವೇಂದ್ರಪ್ಪ, ರಾಯಚೂರು ಸಂಸದ  ರಾಜಾ ಅಮರೇಶ ನಾಯಕ., ಕೊಪ್ಪಳ ಸಂಸದ  ಸಂಗಣ್ಣ ಕರಡಿ, ಮಾಜಿ ಸಂಸದ ಸಣ್ಣ ಪಕ್ಕೀರಪ್ಪ, ಸುರಪುರ ಶಾಸಕ  ನರಸಿಂಹ ನಾಯಕ(ರಾಜುಗೌಡ)
ಹರಪನಹಳ್ಳಿ ಶಾಸಕ ಜಿ. ಕರುಣಾಕರ ರಡ್ಡಿ, ಅರಭಾವಿ ಶಾಸಕ  ಬಾಲಚಂದ್ರ ಜಾರಕಿಹೊಳಿ, ಗೋಕಾಕ್ ಶಾಸಕ  ರಮೇಶ್ ಜಾರಕಿಹೊಳಿ, ದೇವದುರ್ಗ ಶಾಸಕ  ಶಿವನಗೌಡ ನಾಯಕ, ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ್ ರಡ್ಡಿ. ಜಗಳೂರು ಶಾಸಕ  ಎಸ್.ವಿ. ರಾಮಚಂದ್ರ. ಸಿರುಗುಪ್ಪ ಶಾಸಕ  ಎಂ.ಎಸ್. ಸೋಮಲಿಂಗಪ್ಪ. ಕೂಡ್ಲಿಗಿ ಶಾಸಕ  ವೈ.ಎನ್. ಗೋಪಾಲಕೃಷ್ಣ, ವಿಧಾನ ಪರಿಷತ್ ಸದಸ್ಯ  ಕೆ.ಎಸ್. ನವೀನ
ವಿಧಾನ ಪರಿಷತ್ ಸದಸ್ಯರಾದ  ವೈ.ಎಂ. ಸತೀಶ್,  ಹೇಮಲತಾ ನಾಯಕ, ರಾಜ್ಯ ಉಪಾಧ್ಯಕ್ಷ  ನಿರ್ಮಲಕುಮಾರ್ ಸುರಾನ. ರಾಜ್ಯ ಪ್ರಧಾನ ಕಾರ್ಯದರ್ಶಿ  ಅಶ್ವತ್ಥನಾರಾಯಣ,  ಮಹೇಶ ಟೆಂಗಿನಕಾಯಿ
ರಾಜ್ಯ ಸಂಘಟನಾ ಕಾರ್ಯದರ್ಶಿ  ಜಿ.ವಿ. ರಾಜೇಶ್ ಜಿ. ರಾಜ್ಯ ಕಾರ್ಯದರ್ಶಿ  ಎಸ್. ಕೇಶವ ಪ್ರಸಾದ, ಬುಡಾ ಮಾಜಿ  ಅಧ್ಯಕ್ಷರುಗಳಾದ ಕೆ.ಎ.ರಾಮಲಿಂಗಪ್ಪ, ಡಾ.ಮಹಿಪಾಲ್, ದಮ್ಮೂರು ಶೇಖರ್, ಪೊ.ಪಾಲಣ್ಣ, ಮುಖಂಟರುಗಳಾದ ಬಿ.ಶಿವಕುಮಾರ್ ಮೊದಲಾದವರು ಇದ್ದರು.

Share and Enjoy !

Shares