ಬಳ್ಳಾರಿ, ನ.20: ನಗರದ ಟಿ.ಬಿ.ಸ್ಯಾನಿಟೋರಿಯಂ ಬಳಿ ಇರುವ ಮಾಜಿ ಸಚಿವ ಗಾಲಿ ಜಿ.ಸ್ಕ್ವೇರ್ ಮೈದಾನದಲ್ಲಿ ನಿರ್ಮಿಸಿರುವ ಆದಿಕವಿ ಮಹರ್ಷಿ ವಾಲ್ಮೀಕಿ ವೇದಿಕೆಯಲ್ಲಿ
ಬಿಜೆಪಿ ಎಸ್ಟಿ ಮೊರ್ಚಾ ನವಶಕ್ತಿ ಸಮಾವೇಶ ನಡೆಯಿತು.
ನಾಡಿನ ವಿವಿಧಡೆಯಿಂದ ಸಾವಿರಾರು ಬಸ್, ಕ್ರೂಸರ್, ಬೈಕ್ ಮೊದಲಾದ ವಾಹನಗಳ ಗಳ ಮೂಲಕ ಲಕ್ಷಾಂತರ ಜನ ಸಮಾವೇಶಕ್ಕೆ ಆಗಮಿಸಿದ್ದರು.
ಸಮಾವೇಶಕ್ಕೆ ಬಂದ ಜನರನ್ನು ವೀರಗಾಸೆ, ಡೊಳ್ಳು, ನಂದಿಕೋಲು, ಹಗಲು ವೇಷಗಾರರು, ಗೊಂಬೆ ಕುಣಿತ, ಮಡಿ ವಾದನ ಮೊದಲಾದ 69 ಕ್ಕೂ ಹೆಚ್ಚು ಕಲಾ ತಂಡಗಳಿಂದ ಸ್ವಾಗತಿಸಲಾಯಿತು.
ದಾರಿಯುದ್ದಕ್ಕೂ ಬಾಳೆ, ಕಬ್ಬಿನ ಜಲ್ಲೆಯಿಂದ ಹಸಿರಿನ ಸ್ವಾಗತವೂ ಇತ್ತು. ನಗರದ ಸಾವಿರಾರು ಮಹಿಳೆಯರೊಂದಿಗೆ ಕಾಲನಡಿಗೆಯಲ್ಲಿ ವೇದಿಕೆಯತ್ತ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಸಾಗಿ ಬಂದದ್ದು ಗಮನ ಸೆಳೆಯಿತು. 60 ಸಾವಿರ ಜನತೆ ಕುಳಿತು ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಿತ್ತು. ಕಾರ್ಯಕ್ರಮ ವೀಕ್ಷಣೆಗೆ ಅನುಕೂಲವಾಗಲು 50 ಕ್ಕೂ ಹೆಚ್ಚುಕಡೆ ಎಲ್ ಈಡಿ ಪರದೆ ವ್ಯವಸ್ಥೆಯೂ ಇತ್ತು.
ಒಂದು ಕಡೆ ಸಮಾವೇಶ ಸಂಭ್ರಮದಿಂದ ಸಾಗಿದ್ದರೆ, ಮತ್ತೊಂದು ಕಡೆ ನಗರದ ಎಸ್ಪಿ ವೃತ್ತದಲ್ಲಿ ಬಿಜೆಪಿ ಕಚೇರಿ ಮುಂದೆ ಎಸ್ಟಿ ಪ್ರಮಾಣ ಪತ್ರವನ್ನು ಕೋಲಿ ಸಮಾಜಕ್ಕೆ ನೀಡಲು ಅನುಮತಿ ನೀಡಿರುವುದನ್ನು ವಿರೋದಿಸಿ, ರಾಯಚೂರು, ಕಲ್ಬುರ್ಗಿ, ಬಿಜಾಪುರ ಮೊದಕಾದ ಕಡೆಯ ವಾಲ್ಮೀಕಿ ಜನತೆ ಪ್ರತಿಭಟನೆ ನಡೆಸಿದರು.
ಸಮಾವೇಶಕ್ಕೂ ಮುನ್ನ ವೇದಿಕೆ ಮೇಲೆ ಉತ್ತರ ಕನ್ನಡ, ಬೆಂಗಳೂರು, ಕೇರಳ, ಮಂಡ್ಯ, ಕೊಡಗು ಜಿಲ್ಲೆಗಳಿಂದ ಕಲಾತಂಡಗಳು ಆಗಮಿಸಿದ್ದವು. ಪರಿಶಿಷ್ಟ ಪಂಗಡಗಳ ಸಾಂಪ್ರದಾಯಿಕ ಕಲಾ ಪ್ರಕಾರಗಳಾದ ಕುಡಿಯ, ನಾಯಕ, ಸಿದ್ಧಿ, ಗೊಂಡ ನೃತ್ಯ ಪ್ರಕಾರಗಳ ಪ್ರದರ್ಶನವಾಯಿತು.ಚಂಡೆ ವಾದನ, ಕೊಡಗಿನ ಸಾಂಪ್ರದಾಯಿಕ ನೃತ್ಯ ತಮಟೆ ವಾದನ, ಆದಿವಾಸಿ ಬಂಧುಗಳಿಂದ ಸಾಂಪ್ರದಾಯಿಕ ನೃತ್ಯ, ಡಕ್ಕೆ ಕುಣಿತ
ಕ್ರಾಂತಿ ಗೀತೆ, ಕುಡಿಯ ನೃತ್ಯ ಪೂಜಾ ಕುಣಿತ ನಡೆಯಿತು
ವೇದಿಕೆಯ ಬಲಬದಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಎಡ ಬದಿಯಲ್ಲಿ ಭಾರತ ಮಾತೆ, ಶ್ಯಾಮಪ್ರಕಾಶ್ ಮುಖರ್ಜಿ ದೀನ ದಯಾಳ್ ಉಪಾಧ್ಯ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.