ಕನ್ನಡ ಪರ ಹೋರಾಟಕ್ಕೆ ಸದಾ ಸಿದ್ದ : ಕರವೇ ಕಾವಲುಪಡೆ ತಾಲೂಕು ಅಧ್ಯಕ್ಷ ಹನುಮಂತ ಯಾದವ್ .

Share and Enjoy !

Shares
Listen to this article

ಕುರುಗೋಡು.:ಕನ್ನಡ ಪರ ಹೋರಾಟಕ್ಕೆ ನಮ್ಮ ಕಾವಲು ಪಡೆ ಸದಾ ಸನ್ನದ್ದವಾಗಿದ್ದು ನಾಡಿನ ರಕ್ಷಣೆಗೆ ಬದ್ದರಾಗಿದ್ದೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕಾವಲು ಪಡೆ ತಾಲೂಕು ಅಧ್ಯಕ್ಷ ಜಿ.ಹನುಮಂತ ಕರೆ ನೀಡಿದರು.
ಅವರು ಪಟ್ಟಣದ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಪಡೆ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ 67ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಸಾಧಕರಿಗೆ ಸನ್ಮಾನ ಮತ್ತು ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶುಕ್ರವಾರ ಮಾತನಾಡಿದರು.

ನಂತರ ಮಾತನಾಡಿದ ಶಾಸಕ ಜೆ.ಎನ್ ಗಣೇಶ್
ಕನ್ನಡ ನಾಡು ನುಡಿಯ ಹೋರಾಟಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪಾತ್ರ ಅನನ್ಯ,ಇವರ ನಿಸ್ವಾರ್ಥ ಸೇವೆ ನಾಡು,ನುಡಿ ಉಳುವಿಗೆ ಕಾರಣವಾಗಿದೆ.
ಪರಭಾಷಿಕರು ತಮ್ಮ ಮಾತೃಭಾಷೆಯ ಬಗ್ಗೆ ಹೆಚ್ಚು ಅಭಿಮಾನ ಹೊಂದಿದಂತೆ ಕನ್ನಡಿಗರು ಸಹ ಮಾತೃಭಾಷೆಯ ಅಪಾರ ಅಭಿಮಾನ ಬೆಳಸಿಕೊಳ್ಳಬೇಕು,
ಕನ್ನಡ ಭಾಷೆಯನ್ನು ಕನ್ನಡಿಗರೇ ಬಳಸಬೇಕು,ಬೆಳಸಬೇಕು ಎಂದರು.
ಕರವೇ ಕಾವಲು ಪಡೆ ರಾಜ್ಯಾಧ್ಯಕ್ಷ ಎಸ್.ಸುರೇಶ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ದಿನೇ ದಿನೇ
ಕನ್ನಡ ನಾಡಿನ ಗಡಿ ವಿಚಾರದಲ್ಲಿ ಅನ್ಯ ರಾಜ್ಯಗಳು ಕ್ಯಾತೆ ತೆಗೆಯುತ್ತಿರುವುದು ಸರಿಯಲ್ಲ, ಬೆಳಗಾವಿಯಲ್ಲಿ ಎಂ.ಇ.ಎಸ್ ಪುಂಡರ ಹಾವಳಿ ಹೆಚ್ಚಾಗಿದ್ದು ಕರ್ನಾಟಕ ಸರ್ಕಾರ ಗಂಭೀರವಾಗಿ ಕಠಿಣ ಕ್ರಮ ಕೈಗೊಳ್ಳಬೇಕು,ಶೀಘ್ರದಲ್ಲೇ ಸಮಿತಿ ರಚಿಸಿ, ಬೆಳಗಾವಿ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಬೇಕು ಎಂದರು.

ಪ್ರಾರಂಭದಲ್ಲಿ ನಾಡದೇವಿ ಭುವನೇಶ್ವರಿಗೆ ಮತ್ತು ಪುನೀತ್ ರಾಜಕುಮಾರ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಕೋವಿಡ್ ಸಂದರ್ಭದಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆ ಸಲ್ಲಿಸಿದ,ಮುಖ್ಯಮಂತ್ರಿಗಳಿಂದ ಶ್ರೇಷ್ಠ ವೈದ್ಯ ಪ್ರಶಸ್ತಿ ಪಡೆದ ಮಂಜುನಾಥ ಜವಳಿ,
ತೆರಿಗೆ ಇಲಾಖೆಯಲ್ಲಿ ದಕ್ಷ,ಪ್ರಾಮಾಣಿಕ ಸೇವೆ ಸಲ್ಲಿಸಿ ಮುಖ್ಯಮಂತ್ರಿಗಳಿಂದ ತೆರಿಗೆ ಸೇವಾ ಪದಕ ಪಡೆದ ಚಾನಾಳ್ ಅಶೋಕ ರವರ ಅನುಪಸ್ಥಿತಿಯಲ್ಲಿ ಅವರ ಕುಟುಂಬದವರಿಗೆ,ರಂಗಭೂಮಿ ಹಿರಿಯ ಕಲಾವಿದ,ಸಾವಿರಕ್ಕೂ ಹೆಚ್ಚಿನ ನಾಟಕದಲ್ಲಿ ಅಭಿನಯಿಸಿದ ಎಂ.ಪಾರ್ವತೀಶ್,ಪದವಿ ಕಾಲೇಜಿನ ವಿದ್ಯಾರ್ಥಿನಿ ರೇಖಾರವರನ್ನು ಸನ್ಮಾನಿಸಲಾಯಿತು‌.

ಪಟ್ಟಣದ ಎಲ್ಲಾ ಶಾಲಾ ಕಾಲೇಜು ಮಕ್ಕಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ಮಕ್ಕಳ ನೃತ್ಯ ರೂಪಕಗಳು ನೋಡುಗರ ಮೈ ರೋಮಾಂಚನಗೊಳಿಸಿದವು.
ವೇದಿಕೆಯಲ್ಲಿ
ಈ ಸಂದರ್ಭದಲ್ಲಿ ಜಾನಪದ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಚಾನಾಳ್ ಅಂಬರೀಶ್, ಬಂಗಿ ಮಲ್ಲಯ್ಯ,ಶಾಮಿಯಾನ ಮೌಲಾಸಾಬ್,ಓಂಕಾರಪ್ಪ,
ಹೇಮದ್ ಭಾಷಾ,ಜಕ್ಕಂಡಿ ರಮೇಶ್,ಅನಿಲ್ ಕುಮಾರ್,
ಗ್ರಾಮದ ಮುಖಂಡ ಸೋಮಶೇಖರಗೌಡ, ಸಿರಿಗನ್ನಡ ಯುವಕ ಸಂಘದ ಅಧ್ಯಕ್ಷ ಎನ್.ಕೋಮಾರೆಪ್ಪ, ಗುಡಸಲಿ ರಾಜ,ದುರ್ಗಾಪ್ರಸಾದ್, ದೇವೇಂದ್ರ,ಬಸಯ್ಯ, ಪುರಸಭೆ ಸದಸ್ಯರು, ಗ್ರಾಮದ ಮುಖಂಡರು, ವೇದಿಕೆಯ ಪದಾಧಿಕಾರಿಗಳಾದ ವಿ.ಬಸವರಾಜ, ಶರತ್ ಗೌಡ, ಜಿ.ಪ್ರಕಾಶ, ಖಜಾ ಹುಸೇನಿ ಹಾಗೂ ಇನ್ನಿತರರು ಇದ್ದರು. ಶಿಕ್ಷಕ ಬಸವರಾಜ್ ಕಾರ್ಯಕ್ರಮ ನಿರ್ವಹಿಸಿದರು.

Share and Enjoy !

Shares