ತಾಲೂಕಿನ ರುದ್ರಪಾದ ಗ್ರಾಮದ ಶಾಲಾ ಮಕ್ಕಳ ಬಿಸಿಯೂಟದ ಆಹಾರ ಪದಾರ್ಥಗಳಲ್ಲಿ ಹುಳುಗಳೇ ತುಂಬಿದ್ದು ಪೋಷಕರ ಆಕ್ರೋಶ ವ್ಯಕ್ತವಾಗಿದೆ

Share and Enjoy !

Shares
Listen to this article

ಸಿರುಗುಪ್ಪ:ಸರ್ಕಾರದ ಕಡೆಯಿಂದ ಮಕ್ಕಳ ಬಿಸಿಯೂಟದ ಆಹಾರ ಪದಾರ್ಥಗಳು ಕಳೆದ ಮೂರ್ನಾಲ್ಕು ತಿಂಗಳಿಂದ ಸರಿಯಾದ ಸಮಯಕ್ಕೆ ಎಲ್ಲಾ ಪದಾರ್ಥಗಳು ವಿತರಣೆಯಾಗುತ್ತಿಲ್ಲ
ಆದರೆ ಈದೀಗ ವಿತರಿಸಿದ ಆಹಾರ ಪದಾರ್ಥವಾದ ಗೋಧಿಯಲ್ಲಿ ಗೋಧಿ ಕಾಳಿಗಿಂತ ಹುಳುಗಳೇ ಹೆಚ್ಚಿಗಿದ್ದು ಶಾಲಾ ಸಿನ್ಬಂದಿಗಳು ಹುಳುಬಿದ್ದ ಗೋಧಿಯನ್ನು ಬಿಸಿಲಿಗೆ ಹಾಕಿ ಹುಳು ಬೇರ್ಪಡಿಸುವ ಸಮಯದಲ್ಲಿ ಗ್ರಾಮಸ್ಥರು ಮತ್ತು ಪೋಷಕರು ಮೊಬೈಲಿನಲ್ಲಿ ಚಿತ್ರಿಸಿದ್ದಾರೆ
ಇಂತಹ ಆಹಾರ ಪದಾರ್ಥವನ್ನು ಬೇಕಾಬಿಟ್ಟಿಯಾಗಿ ವಿತರಣೆ ಮಾಡುತ್ತಾ ಶಾಲಾ ಮಕ್ಕಳ ಆರೋಗ್ಯದ ಬಗ್ಗೆ ಸರ್ಕಾರ ಚೆಲ್ಲಾಟವಾಡುತ್ತಿದೆ.

ಕೆಲ ತಿಂಗಳಿಂದ ಬಿಸಿಯೂಟದ ಪದಾರ್ಥಗಳ ವಿತರಣೆಯಲ್ಲಿ ವಿಳಂಬವಾಗುತ್ತಿದ್ದು, ಕಳಪೆ ಮಟ್ಟದ ಪದಾರ್ಥಗಳೇ ವಿತರಣೆಯಾಗಿರುವ ಬಗ್ಗೆ ಅನೇಕ ದೂರುಗಳು ಬಂದಿವೆ.

ಮುಂದಾಗುವ ಪರಿಣಾಮಗಳಿಗೆ ಇಲಾಖೆ ಮತ್ತು ಸರ್ಕಾರ ನೇರ ಹೊಣೆಯಾಗುತ್ತದೆಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share and Enjoy !

Shares