ನಿವೇಶನ ಖರೀದಿ ಸಹಾಯ ಧನ ನೀಡುವಲ್ಲಿ ತಾರತಮ್ಯ, ಜನರಿಂದ ಪುರಸಭೆಗೆ ಮುತ್ತಿಗೆ

Share and Enjoy !

Shares

ವಿಜಯನಗರವಾಣಿ ಸುದ್ದಿ
ಕುರುಗೋಡು.

ಪಟ್ಟಣದ ಪುರಸಭೆಗೆ ಎ.ಸಿ.ಹೇಮಂತ್ ರವರು ಸೋಮವಾರ ಧೀಡೀರ್ ಭೇಟಿದರು.
ಈ ಸಂದರ್ಭದಲ್ಲಿ ನಿವೇಶನ ಖರೀದಿಗಾಗಿ ಸಹಾಯಧನ ನೀಡುವಲ್ಲಿ ತಾರತಮ್ಯವಾಗಿದೆ ಎಂದು ಜನ ಅಧಿಕಾರಿಗಳ ಬಳಿ ಅಳಲು ತೋಡಿಕೊಂಡರು.

ಕಳೆದ ಮೂರು ತಿಂಗಳ ಹಿಂದೆ ಈ ಕುರಿತು ಅರ್ಜಿ ಬಿಟ್ಟಿದ್ದು,ದಿನ ಪತ್ರಿಕೆಗಳಲ್ಲಿ ಈ ಬಗ್ಗೆ ಪ್ರಕಟಣೆ ನೀಡಲಾಗಿತ್ತು.

ಸೋಮವಾರ ಬೆಳಗ್ಗೆ ಚೀಟಿ ಎತ್ತುವ ಮೂಲಕ ಫಲಾನುಭವಿಗಳನ್ನು
ಆಯ್ಕೆ ಮಾಡಲಾಗಿದೆ.

 

*ಜನರ ಕೋಪಕ್ಕೆ ಕಾರಣವೇನು ?*

ಸೋಮವಾರ ನೆಡದ ಆಯ್ಕೆ ಪ್ರಕ್ರಿಯೆಯಲ್ಲಿ ಜಾಗ,ಮನೆ ಇದ್ದವರು ಆಯ್ಕೆಯಾಗಿದ್ದಾರೆ.
ಕೆಲವು ಕಡೆ ಒಂದೇ ಮನೆಯಲ್ಲಿ ಇಬ್ಬರಿಗೆ ಧನ ಸಹಾಯ ದೊರೆತಿದೆ ಇದು ಸರಿಯಾದ ಕ್ರಮವಲ್ಲ ಸೂಕ್ತ ಫಲಾನುಭವಿಗಳನ್ನು ಅಧಿಕಾರಿಗಳು ಆಯ್ಕೆ ಮಾಡಿಲ್ಲ ಎಂದು ಜನ ರೊಚ್ಚಿಗೆದ್ದರು.

*ಎ.ಸಿ.ಹೇಮಂತ್ ರವರು ಹೇಳಿದ್ದೇನು ?*

ಈ ದಿನ ನಡೆದ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಆಸ್ತಿ,ಮನೆ ಹೊಂದಿರುವ ಜನರಿಗೆ ಮತ್ತೆ ಆಯ್ಕೆಯಾಗಿದ್ದಾರೆ ಎಂಬ ವಿಷಯ ಈಗ ತಾನೇ ನನಗೆ ತಿಳಿದಿದ್ದು,ಪುರಸಭೆ ಅಧಿಕಾರಿಗಳು ಈ ಬಗ್ಗೆ ಕೂಲಕುಶವಾಗಿ ತನಿಖೆ ಮಾಡಬೇಕು ಹಾಗೆ ಯಾರಿಗಾದರೂ ಬಂದಿದ್ದರೆ. ಅಂತವರ ಹೆಸರು ಹಾಗೂ ಅವರ ಅರ್ಜಿ ಸಂಖ್ಯೆ ಬರೆದು ದೂರು ಪಟ್ಟಿಗೆಗೆ ಹಾಕಿ. ನಾವು ಅವರ ಬಗ್ಗೆ ವಿಚಾರಣೆ ನೆಡೆಸಿ ಲೋಪ ಕಂಡು ಬಂದರೆ ಅವರ ಹೆಸರನ್ನು ಬಿಡಲು ತೀರ್ಮಾನಿಸುತ್ತೇವೆ ಎಂದರು.

*ಮೀಸಲಿಟ್ಟ ಅನುದಾನ ಎಷ್ಟು ?*

2022-23 ರ ಸಾಲಿನಲ್ಲಿ ನಗರೋತ್ಥಾನ ಯೋಜನೆಯಲ್ಲಿ
ವಿವಿಧ ಯೋಜನೆಗಳಿಗೆ
ಧನ ಸಹಾಯ ನೀಡಲಾಗುತ್ತಿದ್ದು .

ಎಸ್ಸಿ – 46 ಲಕ್ಷದ .65 ಸಾವಿರ
ಎಸ್ಟಿ – 23 ಲಕ್ಷದ 63 ಸಾವಿರ
ಓಬಿಸಿ 24 ಲಕ್ಷದ .65 ಸಾವಿರ
ವಿಕಲಚೇತನ 12 ಲಕ್ಷ.50ಸಾವಿರ ಹಣ ಮೀಸಲಿಡಲಾಗಿದೆ.

*ಅನುದಾನ ಪ್ರಯೋಜನ ಹೇಗೆ ?*

ಅರ್ಜಿ ಸಲ್ಲಿಸಿದವರ ಹೆಸರಿನಲ್ಲಿ ಯಾವುದೇ ಜಾಗ ,ಆಸ್ತಿ, ಮನೆ ಹೊಂದಿರಬಾರದು.
ಅರ್ಜಿ ಸಲ್ಲಿಸಿದ ಸೂಕ್ತ ಫಲಾನುಭವಿಗೆ ಜಾಗ ಖರೀದಿಸಲು 25,0000
ಸರ್ಕಾರದಿಂದ ನೇರವಾಗಿ ಜಾಗ ಮಾರಿದವರಿಗೆ ವರ್ಗಾವಣೆ ಆಗುತ್ತದೆ. ಆ ಮೂಲಕ ಸಹಾಯಧನ ನೀಡಲಾಗುತ್ತದೆ.

*ಕುರುಗೋಡು ವ್ಯಾಪ್ತಿಯಲ್ಲಿ ಒಟ್ಟು ಎಷ್ಟು ಜನರಿಗೆ ಈ ಯೋಜನೆ ?*

ಸದ್ಯ ಒಟ್ಟು 39 ಜನರಿಗೆ ಈ ಯೋಜನೆ ತಲುಪಿಸುವ ಉದ್ದೇಶವಿದ್ದು

ಎಸ್.ಸಿ 43 ಅರ್ಜಿಗಳು ಸಲ್ಲಿಕೆಯಶಗಿದ್ದು ಅದರಲ್ಲಿ 18 ಜನರಿಗೆ ನೀಡಲಾಗಿದೆ.
ಎಸ್ಟಿ 7 ಜನರಿಗೆ ಇದ್ದು ಇದರಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಿದ್ದು ಅವರನ್ನೇ ಆಯ್ಕೆ ಮಾಡಲಾಗಿದೆ.
OBC 100 ಅರ್ಜಿಗಳು ಸಲ್ಲಿಕೆಯಾಗಿದ್ದು 9 ಜನರನ್ನು ಆಯ್ಕೆ ಮಾಡಲಾಗಿದೆ.

ಇನ್ನೂ ಅಂಗವಿಕಲ 16 ಅರ್ಜಿಗಳು ಸಲ್ಲಿಕೆಯಾಗಿದ್ದು 5 ಜನರನ್ನು ಆಯ್ಕೆ ಮಾಡಲಾಗಿದೆ.

*ಹೇಳಿಕೆ 1*

ಪುರಸಭೆ ಚುನಾಯಿತ ಅಭ್ಯರ್ಥಿಗಳಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಅಧಿಕಾರಿಗಳು ನಮ್ಮ ಯಾವೊಬ್ಬ
ಸದಸ್ಯ ರಿಗೆ ವಿಷಯ ತಿಳಿಸಿಲ್ಲ.ಆಸ್ತಿ ಇರುವವರೇ ಅರ್ಜಿ ಸಲ್ಲಿಸಿದ್ದು ಅವರೇ ಫಲಾನುಭವಿಗಳಾಗಿ ಆಯ್ಕೆಯಾಗಿದ್ದಾರೆ ಇದು ಖಂಡನೀಯ.

ಎನ್.ನಾಗರಾಜ್.
ಪುರಸಭೆ ಸದಸ್ಯರು ಕುರುಗೋಡು.

*ಹೇಳಿಕೆ 2*

ನಗರೋತ್ಥಾನ ಯೋಜನೆಯಿಂದ ಬಡವರಿಗೆ ಜಾಗ ಖರೀದಿಸಲು ಈ ಯೋಜನೆ ರೂಪಿಸಿದ್ದು ಪುರಸಭೆ ಸದಸ್ಯರಿಗೆ ಈ ಬಗ್ಗೆ ಮಾಹಿತಿ ನೀಡಿ,ಪ್ರತಿ ವಾರ್ಡಿನ ಆಸ್ತಿ ಇಲ್ಲದವರ ಬಗ್ಗೆ ಮಾಹಿತಿ ಕೇಳಿ ಅಂಥವರಿಗೆ ನೀಡಿದ್ದರೆ ಯೋಜನೆ ಸಾರ್ಥಕವಾಗುತ್ತಿತ್ತು.

ಚನ್ನಪಟ್ಟಣ ಮಲ್ಲಿಕಾರ್ಜುನ.
ಪುರಸಭೆ ಸದಸ್ಯರು
ಕುರುಗೋಡು.

Share and Enjoy !

Shares