ವಿಜಯನಗರವಾಣಿ ಸುದ್ದಿ
ಕುರುಗೋಡು.
ಪಟ್ಟಣದ ಬಳ್ಳಾರಿ ರಸ್ತೆಯ ರಾಮನಗೌಡರ ಮನೆ ಮುಂದಿನ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಈ ಹಿಂದೆ ಶಾಸಕ ಗಣೇಶ್ ಭೂಮಿ ಪೂಜೆ ನೆರೆವೇರಿಸಿದ್ದರು.
ಕಳೆದ ಮೂರು,ನಾಲ್ಕು ತಿಂಗಳ ಹಿಂದೆ ಗುತ್ತಿಗೆದಾರರು ರಸ್ತೆ ಅಗೆದು ಮಣ್ಣು,ಕಲ್ಲುಗಳನ್ನು ಹಾಕಿದ್ದು ಇದುವರೆಗೂ ನೀರು ಸಹ ಬಿಡದೇ ರಸ್ತೆಗೆ ಡಾಂಬರ್ ಹಾಕದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಹಲವು ಬಾರಿ ಸಂಭಂಧಿಸಿದವರಿಗೆ ಮಾಹಿತಿ ನೀಡಿದರೂ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
*ರಸ್ತೆಗೆ ಡಾಂಬರ್ ಇರಲಿ, ನೀರು ಬಿಡದ ಗುತ್ತಿಗೆದಾರ*
ಸದರಿ ರಸ್ತೆಯು ಬಳ್ಳಾರಿ ರಸ್ತೆಯಿಂದ ಸಿಂಧಗೇರಿ ಮತ್ತು ಗೆಣಿಕೆಹಾಳ್ ಗ್ರಾಮಗಳಿಗೆ ತೆರಳಲು ಬೈಪಾಸ್ ರಸ್ತೆಯಾಗಿದ್ದು.ಅರ್ಧ ರಸ್ತೆಗೆ ಅನುದಾನವಾಗಿದ್ದು,ಇನ್ನು ಅರ್ಧ ರಸ್ತೆಗೆ ಭೂಮಿ ಪೂಜೆ ಆಗಿಲ್ಲ.ಮೊದಲ ಅರ್ಧ ರಸ್ತೆಗೆ ಒಬ್ಬ ಗುತ್ತಿಗೆದಾರರಿದ್ದರೆ.ಇನ್ನೂ ಅರ್ಧಕ್ಕೆ ಬೇರೆ ಗುತ್ತಿಗೆದಾರರು ಪಡೆದಿದ್ದಾರೆ. ಸದ್ಯ ಭೂಮಿ ಪೂಜೆ ಮಾಡಿದ ರಸ್ತೆಯನ್ನು
ನಿರ್ಮಿಸಲು ಶಾಸಕ ಗಣೇಶ್ ಸಂತೋಷ್ ಎನ್ನುವ ಗುತ್ತಿಗೆದಾರರಿಗೆ ಕೆಲಸ ನೀಡಿದ್ದಾರೆ.
ಅದರಂತೆ
ಕಲ್ಲು,ಮಣ್ಣು ಹಾಕಿ ಹೋದ ಗುತ್ತಿಗೆದಾರರು ಕನಿಷ್ಠ ಪಕ್ಷ ಒಮ್ಮೆಯಾದರೂ ರಸ್ತೆಗೆ ನೀರು ಬಿಟ್ಟಿಲ್ಲ.ಎನ್ನುವುದು ದುರಂತವೇ ಸರಿ.
*ಧೂಳಿಗೆ ಕಂಗೆಟ್ಟ ಸಾರ್ವಜನಿಕರು*
ರಸ್ತೆ ಅಭಿವೃದ್ಧಿ ಮಾಡಲು ಬಂದ ಗುತ್ತಿಗೆದಾರ ಕಲ್ಲು, ಮಣ್ಣು ಹಾಕಿದ್ದಾರೆಯೇ ಹೊರತು ಅದಕ್ಕೆ ಒಂದು ಕೊಡ ನೀರು ಸಹ ಬಿಟ್ಟಿಲ್ಲ.ಇದರಿಂದ ದಿನನಿತ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳಿಂದ ವಿಪರೀತ ಧೂಳು ಎದ್ದು ಅಕ್ಕಪಕ್ಕದಲ್ಲಿರುವ ಮನೆಗಳಲ್ಲಿ ಹರಡುತ್ತಿದೆ.
*ಧೂಳಿನಿಂದ ಜನರ ಆರೋಗ್ಯದ ಮೇಲೆ ಪರಿಣಾಮ*
ವಾಹನಗಳ ನಿರಂತರ ಸಂಚಾರವಿರುವ ಈ ರಸ್ತೆಯಲ್ಲಿ ಧೂಳು ಎದ್ದು ಇಲ್ಲಿ ವಾಸಿಸುತ್ತಿರುವ ಸುಮಾರು 60 ಕುಟುಂಬಗಳ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ.
ಮಕ್ಕಳು ಹಾಗೂ ಹಿರಿಯರಲ್ಲಿ ಕೆಮ್ಮು,ಆಯಾಸ,ಚರ್ಮದ ಸಮಸ್ಯೆಗಳು ಕಂಡು ಬರುತ್ತಿದೆ.
ಈ ಬಗ್ಗೆ ವಾರ್ಡ್ ಸದಸ್ಯರ ಗಮನಕ್ಕೆ ಬಂದರೂ ಸಮಸ್ಯೆ ಪರಿಹರಿಸುತ್ತಿಲ್ಲ.
ಇದೇ ರಸ್ತೆಯಲ್ಲಿ ಸುಮಾರು 5-6 ಅಡಿ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ರಸ್ತೆಯ ನಡುವೆ ಬಂದಿದ್ದು ಇದನ್ನು ಸ್ಥಳಾಂತರಿದೇ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಮುಂದಿನ ದಿನಗಳಲ್ಲಿ ವಿದ್ಯುತ್ ಕಂಬದಿಂದ ಸಮಸ್ಯೆ ಉಂಟಾಗುವುದು ತಿಳಿದು ರಸ್ತೆ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರ ವರ್ತನೆಗೆ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
*ವಾರ್ಡ್ ಸದಸ್ಯರ ಮಾತು ಕೇಳದ ಗುತ್ತಿಗೆದಾರ*
11 ನೇ ವಾರ್ಡ್ ಸದಸ್ಯರಿಗೆ ವಾರ್ಡ್ ನಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪತ್ರಿಕೆ ವರದಿಗಾರರು ವಿಚಾರಿಸಿದಾಗ,
ಇದಕ್ಕೆ ಸಂಭಂದಿಸಿದವರು ಕೊಟ್ಟ ಉತ್ತರವೆಂದರೆ
ನನಗೆ ಹಲವು ದಿನಗಳಿಂದ ಈ ಸಮಸ್ಯೆ ಇರುವುದು ತಿಳಿದಿದೆ.ಇದನ್ನು ಗುತ್ತಿಗೆದಾರನ ಗಮನಕ್ಕೆ ತಂದರೂ ಅವರು ನನ್ನ ಮಾತನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನನಗೆ ಏನು ಮಾಡಬೇಕೆಂದು ತಿಳಿಯುತ್ತಿಲ್ಲ ಎಂದು ಅಸಹಾಯಕರಾಗಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಇನ್ನೂ ಸದಸ್ಯರ ಮಾತನ್ನೇ ಕೇಳದ ಗುತ್ತಿಗೆದಾರನಿಗೆ ಹೇಳಬೇಕಾದವರು ಯಾರು ?
ಹೇಳಬೇಕಾದ ಶಾಸಕರು ಸುಮ್ಮನಿರುವುದೇಕೇ ? ಎಂಬ ಪ್ರಶ್ನೆ ಜನರ ಮುಂದೆ ಕಾಡುತ್ತಿದೆ.
ಒಟ್ಟಾರೆಯಾಗಿ ಜನಸಾಮಾನ್ಯರ ಕಷ್ಟಕ್ಕೆ ನೆರವಾಗಬೇಕಿದ್ದ ಶಾಸಕರು,ಜನಪ್ರತಿನಿಧಿಗಳು ಹೀಗೆ ಕೈಚೆಲ್ಲಿ ಕುಳಿತಿರುವುದು ನೋಡಿದರೆ ಏನೆನ್ನಬೇಕು ತಿಳಿಯದಾಗಿದೆ.ಇನ್ನಾದರೂ ಶಾಸಕರು ,ಜನಪ್ರತಿನಿಧಿಗಳು ಎಚ್ಚೆತ್ತು ಸಮಸ್ಯೆ ಇತ್ಯರ್ಥ ಪಡಿಸುತ್ತಾರಾ ಕಾದು ನೋಡಬೇಕು.
ಹೇಳಿಕೆ 1
ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಜನರ ಆರೋಗ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವ ಗುತ್ತಿಗೆದಾರರು ಸಮಸ್ಯೆ ಅರಿತು ರಸ್ತೆ ನಿರ್ಮಿಸದಿದ್ದರೆ ರಸ್ತೆ ತಡೆ ಮಾಡುತ್ತೇವೆ.
ಬಸವರಾಜ್
11 ನೇ ವಾರ್ಡ್ ನಿವಾಸಿ.
ಕುರುಗೋಡು
ಹೇಳಿಕೆ 2;-ರಸ್ತೆಯಲ್ಲಿ ದಿನನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ.ಇದರಿಂದ ವಿಪರೀತ ಧೂಳು ಬರುತ್ತಿದ್ದು ಮಕ್ಕಳಿಗೆ ವೃದ್ದರಿಗೆ ಕೆಮ್ಮು,ಆಯಾಸ,ಚರ್ಮ
ಸಮಸ್ಯೆಗಳು ಕಂಡು ಬರುತ್ತಿದೆ,ಆದ್ದರಿಂದ
ಗುತ್ತಿಗೆದಾರರು ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು.
ಕೆ.ಕಲ್ಗುಡೆಪ್ಪ
11 ನೇ ವಾರ್ಡ್ ನಿವಾಸಿ
ಕುರುಗೋಡು.