ಬಳ್ಳಾರಿ: ತನ್ನ ನಾಲಿಗೆಯನ್ನೆ ದೇವರಿಗೆ ಅರ್ಪಣೆ ಮಾಡಿದ ಭೂಪ ದೇವರಿಗೆ ವಿವಿಧ ಬಗೆಯ ಅರ್ಪಣೆ ಮಾಡೊದನ್ನ ನಾವು ಕೇಳಿದ್ದೆವೆ ಆದರೇ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿ ಗ್ರಾಮದಲ್ಲಿ ವೀರೇಶ ಎನ್ನುವ ಭಕ್ತ
ದೇವರನ್ನು ಒಲಿಸಿಕೊಳ್ಳೋಕೆ ನಾಲಿಗೆಯನ್ನೇ ಕತ್ತರಿಸಿಕೊಂಡ ಘಟನೆ ನಡೆದಿದೆ.
ದೇವರುತನ್ನ ನಾಲಿಗೆ ಕೇಳಿದೆಅಂತಾ ಚಾಕುವಿನಿಂದ ನಾಲಿಗೆ ಕತ್ತರಿಸಿಕೊಂಡು ಆತನ ಆರಾಧ್ಯ ದೈವನಾದ ಶಂಕರಪ್ಪ ತಾತನಿಗಾಗಿ ನಾಲಿಗೆ ಕತ್ತರಿಸಿಕೊಂಡಿರುವುದಾಗಿ ತಿಳಿದು ಬಂದಿದ್ದು ನಾಲಿಗೆ ಕತ್ತರಿಸಿಕೊಂಡ ನಂತರ ಕತ್ತರಿಸಿದ ನಾಲಿಗೆತುಂಡಿನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಮುಂದಿವರೆದಿದೆ.