ವಿಜಯನಗರವಾಣಿ ಸುದ್ದಿ
ಬಳ್ಳಾರಿ ಜಿಲ್ಲೆ
ಕುರುಗೋಡು:-ಐತಿಹಾಸಿಕ ನಾಡು ಕುರುಗೋಡು ಪಟ್ಟಣವು ತಾಲೂಕು ಘೋಷಣೆಯಾಗಿ ಹಲವು ವರ್ಷಗಳೇ ಕಳೆದು ಹೋಗಿದೆ.
ಮಾನ್ಯ ಶಾಸಕರಾದ ಜೆ.ಎನ್ ಗಣೇಶ್ ಅಭಿವೃದ್ದಿ ಕೆಲಸಗಳಿಗೆ ಚಾಲನೆ ನೀಡಿದ್ದು, ಇವರ ಅವಧಿಯಲ್ಲಿ ಹಲವು ರಸ್ತೆಗಳಿಗೆ ಜೀವ ಬಂದದ್ದು ಖುಷಿ ವಿಚಾರ.
ಆದರೆ ಪಟ್ಟಣದ ಸಮೀಪದ ಗ್ರಾಮವಾದ ಮುಷ್ಟಗಟ್ಟೆ ಗ್ರಾಮಕ್ಕೆ ತೆರಳುವ ಮಾರ್ಗಕ್ಕೆ ಯಾಕೋ ಇನ್ನೂ ಶುಕ್ರದೆಶೆ ಬರುವಂತೆ ಕಾಣುತ್ತಿಲ್ಲ.
ಈ ರಸ್ತೆ ಸಂಪೂರ್ಣ ಹಾಳಾಗಿದ್ದು ಸರಿಪಡಿಸುವುದು ಯಾವಾಗ ? ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದೆ.
ಸಂಪೂರ್ಣ ಹಾಳಾದ ರಸ್ತೆ
ಯಾರೇ ಈ ರಸ್ತೆಯನ್ನು ನೋಡಿದರೂ
ಈ ರಸ್ತೆಗೆ ಡಾಂಬರ ಹಾಕಿ ಹಲವು ವರ್ಷಗಳೇ ಕಳೆದು ಹೋಗಿವೆ ಎನಿಸದಿರದು.
ಅದರಲ್ಲೂ ವಜ್ರಬಂಡಿ ಬಸಪ್ಪನ ದೇವಾಲಯದಿಂದ ಮುಷ್ಟ್ರಗಟ್ಟೆ ವರೆಗೆ ವಾಹನದಲ್ಲಿ ತೆರಳುವುದೆಂದರೆ ಅಸಾಧ್ಯ, ಕಷ್ಟವಾಗಿಬಿಟ್ಟಿದೆ.
ಅಷ್ಟೊಂದು ರಸ್ತೆ ಹಾಳಾಗಿದೆ ಆದರೂ ಇದಕ್ಕೆ ಡಾಂಬರ್ ಅಥವಾ ಮಣ್ಣಾದರು ಹಾಕದಿರುವುದು ವಿಪರ್ಯಾಸವೇ ಸರಿ.
ವಿದ್ಯಾರ್ಥಿಗಳ, ವೃದ್ಧರ ಪಾಡು ಕೇಳೋರ್ಯಾರು
ಕುರುಗೋಡಿನಿಂದ ಮುಸ್ಟಗಟ್ಟೆ, ಹೆಚ್. ವೀರಾಪುರ, ಚನ್ನಪಟ್ಟಣ ಗ್ರಾಮಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ.
ಈ ಗ್ರಾಮಗಳಿಂದ ನಿತ್ಯ ನೂರಾರು ಜನ ಕುರುಗೋಡಿಗೆ ವಿವಿಧ ಕಾರಣದಿಂದ ಆಗಮಿಸುತ್ತಿದ್ದಾರೆ.
ಅದರಲ್ಲೂ ವಿದ್ಯಾರ್ಥಿಗಳು ಹಾಗೂ ವೃದ್ಧರು ಈ ರಸ್ತೆಯಲ್ಲಿ ಬರುವಾಗ ಜೀವ ಕೈಯಲ್ಲಿ ಹಿಡಿದುಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಹಲವು ಬಾರಿ ಬೈಕ್ ಗಳು ಬಿದ್ದು ಮಕ್ಕಳು, ವೃದ್ಧರು ಗಾಯ ಮಾಡಿಕೊಂಡ ಉದಾಹರಣೆಗಳಿವೆ. ಇಲ್ಲಿನ ಜನಸಾಮಾನ್ಯರು ನಿತ್ಯ ಅಧಿಕಾರಿಗಳನ್ನು ಹಾಗೂ ಜನಪ್ರತಿನಿಧಿಗಳನ್ನು ಬೈದುಕೊಂಡು ತಿರುಗಾಡುತ್ತಿದ್ದಾರೆ.
ಜೊತೆಗೆ ತಮ್ಮ ಈ ಕಷ್ಟಕ್ಕೆ ಮುಕ್ತಿ ಕೊಡು ದೇವರೇ ಎಂದು ಬೇಡಿಕೊಳ್ಳುತ್ತಿದ್ದಾರೆ.
ಜನರು ಈ ರಸ್ತೆಯಲ್ಲಿ ತಿರುಗಾಡುತ್ತಿರುವ ಪರಿಣಾಮ ಮೈ ಕೈ ನೋವು ಬರುತ್ತಿದೆ. ಅಲ್ಲದೆ ರಸ್ತೆಯ ವಿಪರೀತ ಧೂಳಿನಿಂದ ಕೆಮ್ಮು, ಅಸ್ತಮಾ ಸೇರಿದಂತೆ ಜನರಲ್ಲಿ ಚರ್ಮ ಸಂಬಂಧಿಗಳು ರೋಗಗಳು ಕಾಣಿಸಿಕೊಳ್ಳುವ ಭೀತಿಯಿದೆ.
*ರಸ್ತೆ ಬೇಡ, ಕನಿಷ್ಠಪಕ್ಷ ಮಣ್ಣಾದರು ಹಾಕಬಾರದೆ*
ಈ ರಸ್ತೆಯಲ್ಲಿ ಹೋಗಬೇಕಾದರೆ ಹಲವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಹೋಗುತ್ತಿದ್ದಾರೆ.
ಈ ರಸ್ತೆ ಹಲವು ತಗ್ಗು ಗುಂಡಿಗಳಿಂದ ನಿರ್ಮಾಣವಾಗಿದ್ದು.
ವಾಹನ ಸವಾರರು ತೀವ್ರ ಪರದಾಟ ನಡೆಸುತ್ತಿದ್ದಾರೆ. ಹಲವರ ಮಾತಿನ ಪ್ರಕಾರ ಅಧಿಕಾರಿಗಳು,ಜನಪ್ರತಿನಿಧಿಗಳು ರಸ್ತೆ ನಿರ್ಮಿಸದಿದ್ದರು ಪರವಾಗಿಲ್ಲಾ, ಕನಿಷ್ಠಪಕ್ಷ ಮಣ್ಣಾದರು ಹಾಕಿ ತಗ್ಗು ಗುಂಡಿ ಮುಚ್ಚಿ ಸುಲಭ ಸಂಚಾರಕ್ಕೆ ಅವಕಾಶ ಮಾಡಿಕೊಡಿ ಎಂದು ಕೇಳುತ್ತಿದ್ದಾರೆ.
ಇನ್ನಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತು ರಸ್ತೆಗೆ ಏನಾದರೂ ಮುಕ್ತಿ ನೀಡುತ್ತಾರಾ? ಕಾದು ನೋಡಬೇಕಾಗಿದೆ.
ಹೇಳಿಕೆ 1
ಹಲವು ವರ್ಷಗಳಿಂದ ಈ ರಸ್ತೆ ಹದಗೆಟ್ಟಿದ್ದು ರಸ್ತೆ ವಾಹನ ಸವಾರರಿಗೆ ಈ ರಸ್ತೆಗೆ ಮುಕ್ತಿ ಯಾವಾಗ ?ನಿತ್ಯ ನರಕವಾಗಿದೆ.
ಈ ರಸ್ತೆ ನಿರ್ಮಿಸುವಂತೆ ಹಲವು ಬಾರಿ ಊರಿನ ಮುಖಂಡರು ಸಂಭವಿಸಿದವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ರಸ್ತೆ ನಿರ್ಮಿಸಿಕೊಟ್ಟರೆ ಅನುಕೂಲವಾಗುತ್ತದೆ.
ನಾಗಪ್ಪ
ಮುಸ್ಟಗಟ್ಟೆ ಗ್ರಾಮದ ನಿವಾಸಿ