ಸಂಡೂರು:ಪೆ:15:-ಅಸಾಂಕ್ರಾಮಿಕ ರೋಗಗಳ ಪತ್ತೆಹಚ್ಚಲು ಶಿಬಿರಗಳ ಆಯೋಜನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾ.ಪಂ ಸದಸ್ಯ ರಾಮುಲು, ತಿಳಿಸಿದರು.
ತಾಲೂಕಿನ ಡಿ.ಅಂತಾಪುರ ಗ್ರಾಮದಲ್ಲಿ ಹಮ್ಮಿಕೊಳ್ಳಲಾದ ಅರೋಗ್ಯವಂತ ಗ್ರಾಮ ಪಂಚಾಯತಿ ನಿರ್ಮಾಣ ಕುರಿತು ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಸರ್ಕಾರದ ಅದೇಶದಂತೆ ರೋಗಗಳನ್ನು ಪತ್ತೆ ಹಚ್ಚಲು ತಪಾಸಣಾ ಶಿಬಿರಗಳನ್ನು ಆಯೋಜಿಸಲು ಅಧ್ಯಕ್ಷರು, ಪಿ.ಡಿ.ಓ ಅವರ ಸಲಹೆ ಮೇರೆಗೆ ಕ್ರಿಯಾಯೋಜನೆ ತಯಾರಿಸಿ ಅದರಂತೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು,
ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಸಾಂಕ್ರಾಮಿಕ ರೋಗಗಳಿಗಿಂತ ಅಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಜನರನ್ನು ಬಾಧಿಸುತ್ತಿವೆ, ಇತರರಿಗೆ ಹರಡದಿದ್ದರೂ ಹೆಚ್ಚು ಜನರಲ್ಲಿ ಆವರಿಸಿಕೊಂಡಿರುತ್ತವೆ, ಉತ್ತಮ ಜೀವನ ಶೈಲಿ ಹೊಂದಿರದಿದ್ದರೆ ಬಿ.ಪಿ, ಶುಗರ್ ನಂತಹ ಅಸಾಂಕ್ರಾಮಿಕ ರೋಗಗಳಿಗೆ ಅವಕಾಶ ಮಾಡಿ ಕೊಟ್ಟಂತಾಗುತ್ತದೆ, ಉತ್ತಮ ಆಹಾರ ಸೇವನೆ,ವ್ಯಾಯಾಮ,ಸದಾ ಚಟುವಟಿಕೆಯಿಂದ ಇರುವಹಾಗೆ ನೋಡಿಕೊಳ್ಳ ಬೇಕು ಹಾಗೇ ಧೂಮಪಾನ, ಮಧ್ಯಪಾನದಂತಹ ಕೆಟ್ಟ ಚಟಗಳನ್ನು ತ್ಯಜಿಸುವುದು ಈ ಕ್ಷಣದಿಂದಲೇ ಬಿಡುವುದನ್ನು ಮಾಡಬೇಕಿದೆ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳನ್ನು ದೂರಮಾಡಲು ಹಾಗೂ ಇತರ ಅಂಗಾಂಗಗಳ ಆರೋಗ್ಯಕ್ಕಾಗಿ ಕೆಟ್ಟ ಚಟಗಳನ್ನು ಬಿಡಬೇಕು ಎಂದು ತಿಳಿಸಿದರು,
ಕಾರ್ಯಕ್ರಮದಲ್ಲಿ ಅಂಗವಾಡಿ ಮೇಲ್ವಿಚಾರಕಿ ಚೇತನಾ ಗೌಡ ಅವರು ಹೆಣ್ಣು ಮಕ್ಕಳ ಋತುಚಕ್ರ ಮತ್ತು ವೈಯಕ್ತಿಕ ಶುಚಿತ್ವದ ಬಗ್ಗೆ ಮತ್ತು ಆಪ್ತ ಸಮಾಲೋಚಕ ಪ್ರಶಾಂತ್ ಮಾತನಾಡಿ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರ ಜವಾಬ್ದಾರಿ ಕುರಿತು ಮಾತನಾಡಿದರು,
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಕಾರ್ಯದರ್ಶಿ ಹುಚ್ಚಪ್ಪ, ಕೆ.ಹೆಚ್.ಪಿ.ಟಿ ಸಂಯೋಜಕ ಗಣೇಶ್, ರೀಡ್ಸ್ ಸಂಸ್ಥೆಯ ಯಲ್ಲಮ್ಮ, ಅಂಗನವಾಡಿ ಕಾರ್ಯಕರ್ತೆ ರೇಖಾ,ಗಂಗಮ್ಮ,ಪೂರ್ಣಿಮಾ,ಶಿಲ್ಪಾ, ಜ್ಯೋತಿ, ಲಕ್ಷ್ಮಿ, ಸರೋಜಾ,ಮತ್ತು ಜೆಸ್ಕಾಂ ಸಿಬ್ಬಂದಿ ಲೋಕೇಶ ಇತರರು ಉಪಸ್ಥಿತರಿದ್ದರು