ಸಂಡೂರು ಪಟ್ಟಣದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ತಹಶೀಲ್ದಾರ್ ರವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಖರಾಬು ಎಂದು ನಮೂದಿಸಿರುವುದನ್ನು ರದ್ದುಗೊಳಿಸಬೇಕೆಂದು ಮನವಿಪತ್ರವನ್ನು ಸಲ್ಲಿಸಿದರು.
ಸಂಡೂರು ತಾಲೂಕಿನ 14 ಹಳ್ಳಿಗಳ ಸರ್ವೇ ಸೆಟ್ಲ್ ಮೆಂಟ್ ಮಾಡಿ ಸಾಗುವಳಿ ರೈತರಿಗೆ ಪಟ್ಟ ನೀಡುವುದು ಸ್ವಾಗತಾರ್ಹ, ಆದರೆ ಸರ್ವೇ ಸೆಟ್ಲಮೆಂಟ್ ಮಾಡುವಾಗ ಖರಾಬು ಎಂದು ನಮೂದಿಸಿರುವುದನ್ನು ರದ್ದುಪಡಿಸಬೇಕು,ಏಕೆಂದರೆ ಬಹಳಷ್ಟು ರೈತರು ಈ ಭೂಮಿಗಳಲ್ಲಿ ಸುಮಾರು 150 ವರ್ಷಗಳಿಂದ ಸಾಗುವಳಿ ಮಾಡುತ್ತ
ಬಂದಿದ್ದಾರೆ, ಈ ಭೂಮಿಗೆ ಪಾರಂ-1, ಪಾರಂ-2, ಸಾಗುವಳಿ ಚೀಟಿ ಮತ್ತು ತೆರಿಗೆಯನ್ನು ಕಂದಾಯ ಇಲಾಖೆಗೆ ಕಟ್ಟಿರುತ್ತಾರೆ. ಹಾಗೂ ಈ ಖರಾಬು ಭೂಮಿ ಕೃಷಿಗೆ ಯೋಗ್ಯವಾಗಿದ್ದು ಈ ಭೂಮಿಯಲ್ಲೇ ಸಂಡೂರು ತಾಲೂಕಿನ ರೈತರು ಸಾಗುವಳಿ ಮಾಡುತ್ತಾ ಬಂದಿದ್ದಾರೆ.
ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳು ಮತ್ತು ಕಂದಾಯ ಸಚಿವರು ಬಳ್ಳಾರಿ ಜಿಲ್ಲಾಧಿಕಾರಗಳಿಗೆ ಖರಾಬು ಎಂದು ನಮೂದಿಸಿರುವುದನ್ನು ಸಂಡೂರು ತಾಲೂಕಿನಲ್ಲಿ ಮಹಜರು ವರದಿ ಮಾಡಿಸಿ ಖರಾಬು ಎಂದು ನಮೂದಿಸಿರುವುದನ್ನು ರದ್ದುಪಡಿಸಿ ಭೂಮಿಯಲ್ಲಿ ಸಾಗುವಳಿ ಮಾಡುವ ರೈತರ ಭೂಮಿಗಳನ್ನು ಸರ್ವೆ ಸೆಟ್ಲಮೆಂಟ್ ಮಾಡಿ ಪಟ್ಟ ನೀಡಲು ಮಾನ್ಯ ಮುಖ್ಯಮಂತ್ರಿಗಳು ಆದೇಶ ನೀಡಲಿ ಎಂದು ಮನವಿಯನ್ನು ಮಾಡಿಕೊಳ್ಳುತ್ತೇವೆ ಎಂದರು
ಒಂದು ವೇಳೆ ಖರಾಬು ಎಂದು ರೈತರ ಭೂಮಿಗಳನ್ನು ಪಟ್ಟ ನೀಡದೇ ಒಕ್ಕಲೆಬ್ಬಿಸಿದರೆ ಸಂಡೂರು ತಾಲೂಕಿನ ರೈತರು ವಿಧಾನಸೌಧದ ಮುಂದೆ ಧರಣಿಕುಳಿತುಕೊಳ್ಳಬೇಕಾಗುತ್ತದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು
ಈ ಸಂಧರ್ಭದಲ್ಲಿ ದೇವರಮನೆ ಮಹೇಶ್, ಎಂ ಜಡಿಯಪ್ಪ, ಉಲವತ್ತಿ ಸೋಮಪ್ಪ, ಚನ್ನಬಸಪ್ಪ ಬಣಕಾರ್, ನಾಗಪ್ಪ ಕಂದಗಲ್ಲು,
ಮೇಟಿ ಶಂಕರಪ್ಪ, ಬಿಎಂ ಉಜ್ಜಿನಯ್ಯ ಶಿವಣ್ಣ ಧರ್ಮಾಪುರ, ನಾರಾಯಣ ರಾವ್ ನಿಂಬಾಲ್ಕರ್, ಬಿ ರಾಮನಗೌಡ, ಮಲ್ಲಯ್ಯ, ಹಾಗೂ ಇತರರಿದ್ದರು
\