ಶ್ರೀ ಗುರು ಕೊಟ್ಟೂರೇಶ್ವರ ಮಹಾರಥೋತ್ಸವಕ್ಕೆ ಪಾದಯಾತ್ರೆ ಮೂಲಕ ಆಗಮಿಸುತ್ತಿರೊ ಅಪಾರ ಭಕ್ತರು

Share and Enjoy !

Shares
Listen to this article

ಶ್ರೀ ಗುರು ಕೊಟ್ಟೂರು ಬಸವೇಶ್ವರ ಸ್ವಾಮಿ ಮಹಾರಥೋತ್ಸವಕ್ಕೆ ಕ್ಷಣಗಣನೆ, ಆರಂಭವಾಗಿದ್ದು.ವಿವಿಧ ಜಿಲ್ಲೆಗಳಿಂದ, ಶ್ರೀ ಗುರು ಕೊಟ್ಟೂರು ಬಸವೇಶ್ವರ, ದರ್ಶನಕ್ಕೆ ನೂರಾರು ಕಿಲೋಮೀಟರ್ ದೂರದಿಂದ ಕೊಟ್ಟೂರಿಗೆ ಪಾದಯಾತ್ರೆಯಲ್ಲಿ ಆಗಮಿಸುತ್ತಿರುವ ಜನಸಾಗರ ಇಂದು ಶ್ರೀ ಗುರುಬಸವೇಶ್ವರ ಮಹಾರಥೋತ್ಸವ, ನಡೆಯಲಿದ್ದು. ಕೇಳಿದ್ದನ್ನು ಕರುಣಿಸುವ ಕೊಟ್ಟುರೇಶ್ವರನ ಮೇಲಿಟ್ಟಿರುವ ಭಕ್ತರ ನಂಬಿಕೆ,

ಪಾದಯಾತ್ರೆ ಮೂಲಕ, ಕೊಟ್ಟೂರಿಗೆ ಹರಿದು ಬರುತ್ತಿರುವ ಭಕ್ತರು. ವಿಶೇಷವೆಂದರೆ,ಹರಕೆ ಹೊತ್ತ ಕೆಲ ಭಕ್ತರು. ಮೋಣಕಾಲ ಮೇಲೆ ಪಾದಯಾತ್ರೆ ಮೂಲಕ, ಕೊಟ್ಟೂರೇಶ್ವರನ ದರ್ಶನಕ್ಕೆ ಆಗಮಿಸಿದ್ರೆ. ಇನ್ನೂ ದಂಪತಿಗಳು ಮಲಗಿರುವ ತಮ್ಮ ಪುಟ್ಟ ಮಗುವನ್ನ ಜೋಳಿಗೆಯಲ್ಲಿ, ಕರೆತರುವ ಮೂಲಕ. ಪಾದಯಾತ್ರೆ ಕೈಗೊಂಡಿದ್ದು ಸಾರ್ವಜನಿಕರ, ಗಮನ ಸೆಳೆಯಿತು.

ಇನ್ನು, ಸ್ಥಳಿಯ ಭಕ್ತರು, ಹಲವು ಸಂಘ ಸಂಸ್ಥೆಗಳ ಮುಖಂಡರು.ಮತ್ತು ದೇವಸ್ಥಾನದ, ಆಡಳಿತ ಮಂಡಳಿ ಸೇರಿದಂತೆ.ವ್ಯಾಪರಸ್ಥರು.ಪಾದಯಾತ್ರಿಗಳಿಗೆ, ತುರ್ತು ಚಿಕಿತ್ಸೆ, ಔಷಧಿಗಳು ಹಾಗೂ ಹಣ್ಣು ಹಂಪಲು, ಊಟ, ಉಪಚಾರಗಳನ್ನ ಸ್ವಯಂಪರೇರಿತರಾಗಿ ಉಚಿತವಾಗಿ, ವಿತರಿಸುವ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೇ ಕೆ.ಅಯ್ಯನಹಳ್ಳಿ ಶ್ರೀಗಳು ಕೊಟ್ಟೂರೇಶನ ಮಹತ್ವ ಮತ್ತು ನಂಬಿದ ಭಕ್ತರಿಗೆ ಕೊಟ್ಟೂರೇಶನ ಕೃಪಾಶಿರ್ವಾದ ನಡೆಯುವ ಬಗ್ಗೆ ಈ ರೀತಿ ವಿವರಿಸಿದರು.ಕೊಟ್ಟೂರೇಶ್ವರ ದರ್ಶನಕ್ಕೆ ಭಕ್ತರ ಆಗಮನ

ಕೊಟ್ಟೂರು: ಕೊಟ್ಟೂರು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವದ ಅಂಗವಾಗಿ ರಾಜ್ಯದ ವಿವಿಧೆಡೆಯಿಂದ ಭಕ್ತರು ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ. ಬೆಳಗಿನ 4 ಘಂಟೆಯಿಂದ ಪ್ರಾರಂಭಗೊಂಡ ದೇವರ ದರ್ಶನಕ್ಕೆ ಸುಮಾರು 200 ಮೀಟರ್ ಉದ್ದನೆಯ ಸಾಲು ನಿರ್ಮಾಣವಾಗಿದ್ದು, ಶ್ರೀ ಸ್ವಾಮಿಯ ಹಿರೇಮಠಕ್ಕೆ ಆಗಮಿಸಿ ದರ್ಶನ ಪಡೆದು, ಮೂರ್ಕಲ್ ಮಠ, ಗಚ್ಚಿನ ಮಠ ಹಾಗೂ ತೊಟ್ಟಿಲ ಮಠಕ್ಕೆ ತೆರಳಿ ದರ್ಶನ ಪಡೆದುಕೊಂಡು ಪುನೀತರಾದರು.

Share and Enjoy !

Shares