ಕಾಂಗ್ರೆಸ್ ಮುಕ್ತ ರಾಜ್ಯ ಮಾಡಲು ಪಣ

Share and Enjoy !

Shares
Listen to this article

ಸಂಡೂರು:ಪೆ:19:- ದೇಶಕ್ಕೆ, ಉತ್ಕೃಷ್ಟ ಗುಣಮಟ್ಟದ ಅದಿರು ಹಾಗೂ ಆದಾಯ ಕೊಡುವ ಗಣಿ ನಾಡು ಸಂಡೂರು ಅಭಿವೃದ್ಧಿಯಲ್ಲಿ ಹಿಂದುಳಿದಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ  ನಂದೀಶ್ ಅಸಮಾಧಾನ ವ್ಯಕ್ತಪಡಿಸಿದರು.ಪಟ್ಟಣದ ಬಿಜೆಪಿ ಹಿರಿಯ ಮುಖ೦ಡ ಕಾರ್ತಿಕೇಯ ಘೋರ್ಪಡೆ ನಿವಾಸದ ಆವರಣದಲ್ಲಿ ಬಿಜೆಪಿಯಿಂದ ನಡೆದ ವಿಜಯ ಸಂಕಲ್ಪ ಯಾತ್ರೆ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಫೆ.23 ರಂದು ಸಂಡೂರಿನಲ್ಲಿ ಬಹಿರಂಗ ಸಭೆಯಲ್ಲಿ ಭಾಗವಹಿಸುವ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಶುಕ್ರವಾರ ನಂದೀಶ್ ಮಾತನಾಡಿದರು.

ಅಮಿತ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕ್ಷೇತ್ರದ 249 ಬೂತ್‌ಗಳ ಮುಖ೦ಡರು ಪಕ್ಷದ ಕಾರ್ಯಕರ್ತರನ್ನು ಸೇರಿಸುವ  ಜವಾಬ್ದಾರಿ ಹೊರಬೇಕಿದೆ ಎಂದರು.

ಜಿಲ್ಲಾಧ್ಯಕ್ಷ ಮುರಹರಗೌಡ ಮಾತನಾಡಿ ಕಾಂಗ್ರೆಸ್‌ ಮುಕ್ತ ರಾಜ್ಯ ಮಾಡಲು ಪಣ ತೊಡಲಾಗಿದೆ. ಬಿಜೆಪಿ ಪಕ್ಷದ ಬಲವರ್ಧನ ಮಾಡಬೇಕಿದೆ ಎಂದರು. ರಾಜ್ಯ ರೈತ ಮೋರ್ಚಾ ಪ್ರ.ಕಾರ್ಯದರ್ಶಿ ಗುರುಲಿಂಗನ ಗೌಡ ಮಾತನಾಡಿ, ರಾಜ್ಯ ಸರಕಾರ ರೈತರಿಗೆ 5 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡಲು ತೀರ್ಮಾನಿಸಿದ್ದು. ಕೇಂದ್ರ ಮತ್ತು ರಾಜ್ಯದ ಸರಕಾರದ ಜನಪರ ಯೋಜನೆಗಳನ್ನು ಜನರಿಗೆ ತಿಳಿಸಬೇಕು ಎಂದರು. ಮಂಡಲ ಅಧ್ಯಕ್ಷ ಜಿ.ಟಿ.ಪಂಪಾಪತಿ ಮಾತನಾಡಿದರು.

ವಿಭಾಗ ಪ್ರಭಾರಿ ಸಿದ್ದೇಶಯಾದವ್, ಜಿಲ್ಲಾ ಪ್ರ.ಕಾರ್ಯದರ್ಶಿ ಶಿವಶಂಕರರೆಡ್ಡಿ, ಮಹಿಳಾ ಘಟಕದ ರಾಜ್ಯ ಉಪಾಧ್ಯಕ್ಷೆ ಶಿವಕೃಷ್ಣಮ್ಮ, ವಾಡಾ ಅಧ್ಯಕ್ಷ ಕೆ.ಯರಿಸ್ವಾಮಿ,  ಬಂಗಾರು ಹನುಮಂತು, ರಾಮಲಿಂಗಪ್ಪ, ಅಜಯ್ ಮ೦ದನ್, ವಿರುಪಾಕ್ಷಪ್ಪ ಸಿಂಗನಾಳ್, ಅನಿಲ್ ನಾಯ್ಡು, ವಿರುಪಾಕ್ಷಗೌಡ ಇದ್ದರು.

ಸಮರ್ಪಕ ಮಾಹಿತಿ ನೀಡಿ:-

ಸಭೆಯ ಆರಂಭಕ್ಕೂ ಮೊದಲು ಬಿಜೆಪಿ ಕೆಲ ಪುರಸಭೆ ಸದಸ್ಯರು, ಕೆಲ ಮಾಜಿ ಸದಸ್ಯರು, ಕೆಲವು ಮುಖಂಡರು ಸಭೆಯ ಸ್ಥಳಕ್ಕೆ ಕೊಂಚ ದೂರದಲ್ಲಿ ನಿಂತು ಬಿಜೆಪಿಯ ಯಾವುದೇ ಸಭೆ, ಕಾರ್ಯಕ್ರಮಗಳಿಗೆ ತಮಗೆ ತಾಲೂಕು ಅಧ್ಯಕ್ಷರು ಸಮರ್ಪಕ ಮಾಹಿತಿ ನೀಡುತ್ತಿಲ್ಲ, ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಈಬಗ್ಗೆ ಪ್ರಶ್ನಿಸಿದರೆ ವಾಟ್ಸ್‌ಪ್‌ ಗೆ ಸಂದೇಶ ಕಳಿಸಲಾಗಿದೆ ಎಂದು ಜಾರಿಕೊಳ್ಳುತ್ತಾರೆ. ಹೀಗಾದರೆ ಪಕ್ಷ ಸಂಘಟನೆ ಹೇಗೆ ಸಾಧ್ಯ ಎಂದು ಜಿಲ್ಲಾ ಅಧ್ಯಕ್ಷ ಮುರಾಹರಿಗೌಡರ ಮುಂದೆ ದೂರಿದರು. ಎಲ್ಲವನ್ನು ಸರಿಪಡಿಸೋಣ ಎಂದು ಅಧ್ಯಕ್ಷರು ನೀಡಿದ ಭರವಸೆಯಿಂದ ಸಭೆಗೆ ಕೆಲವರು ಹಾಜರಾದರು.

 

Share and Enjoy !

Shares