ವೇದಿಕೆ ನಿರ್ಮಾಣಕ್ಕೆ ಸಂಡೂರಲ್ಲಿ ಭೂಮಿ ಪೂಜೆ; ಫೆ.23ಕ್ಕೆ ಅಮಿತ್ ಶಾ ಬಹಿರಂಗ ಸಭೆ

Share and Enjoy !

Shares
Listen to this article

ಸಂಡೂರು:ಪೆ:19: ಪಟ್ಟಣದಲ್ಲಿ ಫೆ.23 ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬಹಿರಂಗ ಸಭೆ ನಡೆಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.

ಪಟ್ಟಣದ ಎಸ್.ಆರ್.ಎಸ್ ಮೈದಾನದಲ್ಲಿ  ವೇದಿಕೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಶನಿವಾರ ಮಾತನಾಡಿದರು

ಪಟ್ಟಣದ ಎಸ್‌ .ಆರ್ .ಎಸ್‌ ಮೈದಾನದಲ್ಲಿ ಅಮಿತ್ ಷಾ ರವರು ಬಹಿರಂಗ ಸಭೆ ನಡೆಸಲಿದ್ದು, ಒಂದು ಲಕ್ಷಕ್ಕೂ ಹೆಚ್ಚಿನ ಜನರು ಸೇರುವ ನಿರೀಕ್ಷೆಯಿದೆ. ಪಕ್ಷದ ಬೂತ್‌ ಮಟ್ಟದ ಕಾರ್ಯಕರ್ತರು ಸೇರಿದಂತೆ

ಹೋಬಳಿ, ತಾಲೂಕು, ಜಿಲ್ಲಾ ಮಟ್ಟದ ಹಲವು ಜನ ಬಿಜೆಪಿ ಪದಾಧಿಕಾರಿಗಳು ಸಭೆಯಲ್ಲಿ ಬಾಗಿಯಾಗಲಿದ್ದಾರೆ

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಮುರಹರಗೌಡ,ಮಂಡಲ ಅಧ್ಯಕ್ಷ ಜಿ.ಟಿ.ಪಂಪಾಪತಿ, ವಾಡ ಅಧ್ಯಕ್ಷ ಕೆ. ಯರ್ರಿಸ್ವಾಮಿ, ಕೆ ಎಸ್ ದಿವಾಕರ್, ಬಿಜೆಪಿಯ ಮೋರ್ಚಾಗಳ ಪದಾಧಿಕಾರಿಗಳು , ಪುರಸಭೆ ಸದಸ್ಯರು,ಮಾಜಿ ಸದಸ್ಯರು ಇದ್ದರು

Share and Enjoy !

Shares