ಮಾನವಿ : ಜಾತಿನಿಂದನೆ ಮತ್ತು ದೇಶದ್ರೋಹ ಎಸಗಿದವರ ವಿರುದ್ಧ ಕಠಿಣ ಕ್ರಮ ಹಾಗೂ ಜಾತಿವಾದಿ ಜೈನ್ ವಿವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಭೀಮ್ ಆರ್ಮಿ ತಾಲ್ಲೂಕು ಘಟಕದಿಂದ ತಾಲ್ಲೂಕು ತಹಸೀಲ್ದಾರರ ಮೂಲಕ ಕರ್ನಾಟಕ ಸರ್ಕಾರದ ಮಾನ್ಯ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಇತ್ತೀಚೆಗೆ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಗುಂಪೊಂದು ಸ್ಕಿಟ್ ವೊಂದರಲ್ಲಿ ಸಂವಿಧಾನ ಶಿಲ್ಪಿ ಡಾ ಅಂಬೇಡ್ಕರ್ ಹಾಗೂ ದಲಿತ ಸಮುದಾಯದ ಬಗ್ಗೆ ಅಪಹಾಸ್ಯ ಮತ್ತು ಜಾತಿದ್ವೇಷದ ಅವಮಾನ ಮಾಡಲಾಗಿದ್ದು, ಇದು ಸ್ಪಷ್ಟವಾಗಿ ಉದ್ದೇಶಪೂರ್ವಕವಾಗಿ ದೇಶದ್ರೋಹ ಮತ್ತು ಜಾತಿ ನಿಂದನೆಯ ಪ್ರಕರಣ ಹಾಗೂ ಇದು ಖಂಡನೀಯವಾಗಿದೆ. ಜೈನ್ ವಿಶ್ವವಿದ್ಯಾಲಯದ “ಮ್ಯಾನೇಜ್ ಮೆಂಟ್ ಸ್ಟಡೀಸ್ ಕೇಂದ್ರದ ಕಾಲೇಜು ತಂಡ ಜಾತಿವಾದವನ್ನು ಎತ್ತಿ ತೋರಿಸುವ ಮತ್ತು ಜಾತಿನಿಂದನೆಯ ಕೀಳು ಭಾಷೆಯನ್ನು ಬಳಸಿ ಸ್ಕಿಟ್ ಮಾಡಿ ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಮತ್ತು ದಲಿತ ಸಮುದಾಯವನ್ನು ನೇರವಾಗಿ ಗೇಲಿ ಮಾಡಿ ಜಾತಿನಿಂದನೆ ಮಾಡಿರುತ್ತಾರೆ. ಜೈನ್ ವಿಶ್ವವಿದ್ಯಾಲಯದ ಮ್ಯಾನೇಜ್ ಮೆಂಟ್ ಸ್ಟಡೀಸ್ ಕೇಂದ್ರದ ಥಿಯೇಟರ್ ಗ್ರೂಪ್, ‘ದಿ ಡೆಬ್ರಾಯ್ಡ್ ಬಾಯ್ಸ್’, ‘ಮ್ಯಾಡ್-ಆಡ್ಸ್’ ನ ಭಾಗವಾಗಿ, ಫೆಸ್ಟ್‌ನಲ್ಲಿ ಅಂಬೇಡ್ಕರ್ ಮತ್ತು ದಲಿತ ಸಮುದಾಯದ ಕುರಿತು ಹಾಸ್ಯ ಮತ್ತು ಗೇಲಿ ಮಾಡುತ್ತ ಸ್ಕಿಟ್‌ನ್ನು ಪ್ರದರ್ಶಿಸಿದ್ದಾರೆ.
ಇದು ಇಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸ್ಕಿಟ್ ನಲ್ಲಿ ಕೆಳ ಜಾತಿಯ ಹಿನ್ನೆಲೆಯ ವ್ಯಕ್ತಿಯೊಬ್ಬ ಮೇಲ್ಜಾತಿ ಮಹಿಳೆಯೊಂದಿಗೆ ಡೇಟಿಂಗ್ ಮಾಡಲು ಪ್ರಯತ್ನಿಸುತ್ತಿರುವುದನ್ನು ಪ್ರದರ್ಶಿಸಿದ್ದು, ಈ ವೇಳೆ ಆತ ತಾನು ದಲಿತ, ಕೆಳಜಾತಿಯವ ಅಥವಾ ಅಸ್ಪೃಶ್ಯ ಎಂದು ಹೇಳಿಕೊಂಡಾಗ ‘ಡೋಂಟ್ ಟಚ್ ಮಿಟಚ್ ಮಿ ಎಂಬ ಹಾಡನ್ನು ಗೇಲಿ ಮಾಡುತ್ತಾ ಪ್ಲೇ ಮಾಡಿ ಉದ್ದೇಶಪೂರ್ವಕವಾಗಿ ಅವಮಾನಿಸಿರುತ್ತಾರೆ. ಇದಲ್ಲದೆ, ಬಿ.ಆರ್. ಅಂಬೇಡ್ಕರ್ ಅವರನ್ನು ‘ಬೀಯರ್ ಅಂಬೇಡ್ಕರ್’ ಎಂದು ಹೇಳಿ ಅತ್ಯಂತ ಕೀಳು ಮಟ್ಟದಲ್ಲಿ ಅವಮಾನಿಸಿರುತ್ತಾರೆ, ಇದರೊಂದಿಗೆ ಕೆಲವು ಜಾತಿ ನಿಂದನಾತ್ಮಕ ನುಡಿಗಟ್ಟುಗಳನ್ನು ಬಳಸಿರುತ್ತಾರೆ.
ಈ ದೇಶದ ಅತ್ಯುನ್ನತ ಪುರಸ್ಕಾರವಾದ ‘ಭಾರತರತ್ನ’ ಪಡೆದ ಹಾಗೂ ಈ ದೇಶಕ್ಕೆ ಸಂವಿಧಾನವನ್ನು ಕೊಟ್ಟ ಸಂವಿಧಾನಶಿಲ್ಪಿ ಮತ್ತು ಈ ದೇಶದ ಸಾಕ್ಷಿಪ್ರಜ್ಞೆ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅತ್ಯಂತ ತುಚ್ಛವಾಗಿ ಅವಮಾನಿಸಿರುವುದು ದೇಶದ್ರೋಹವೆಂದೇ ಪರಿಗಣಿಸಬೇಕು.
ಸಂವಿಧಾನದಲ್ಲಿ ಅಸ್ಪೃಶ್ಯತೆಯನ್ನು ತೊಡೆದುಹಾಕಿದ ಮೇಲೂ ಮತ್ತು ನಮ್ಮ ಕಾನೂನಿನಲ್ಲಿ ಅಸ್ಪೃಶ್ಯತೆ ಆಚರಿಸುವುದು ದಂಡಾರ್ಹ ಅಪರಾಧ ಎಂದು ತಿಳಿದಿದ್ದರೂ ಜೈನ್ ಕಾಲೇಜಿನ ಸದರಿ ವಿದ್ಯಾರ್ಥಿಗಳು ಜಾತಿನಿಂದನೆ ಮಾಡಿರುವುದು ಇಡೀ ಶೋಷಿತ ಸಮುದಾಯಗಳಿಗೆ ಅಪಾರ ನೋವು ಮತ್ತು ಅಪಮಾನ ಮಾಡಿರುವ ಅಪರಾದವಾಗಿದೆ ಆದ್ದರಿಂದ ಇದಕ್ಕೆ ಸಂಭಂದಿಸಿದವರ ವಿರುದ್ಧ ತಕ್ಷಣವೇ ನಿಮ್ಮ ನೇತೃತ್ವದ ಘನ ಸರ್ಕಾರವು ದೂರು ದಾಖಲಿಸಿ ಕಾನೂನು ಕ್ರಮ ಕೈಗೊಂಡು ಇವರನ್ನು ಬಂಧಿಸಬೇಕು ಹಾಗೇಯೇ ಇಷ್ಟೆಲ್ಲಾ ಎಡವಟ್ಟು ಆಗಲು ಜೈನ್ ವಿಶ್ವವಿದ್ಯಾಲಯದ ಮೇಲಾಧಿಕಾರಿಗಳ ಪರೋಕ್ಷ ಬೆಂಬಲ ಇದೆ ಎಂಬದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಸಂವಿಧಾನದ ಶಿಲ್ಪ ಡಾ ಬಿರ್ ಅಂಬೇಡ್ಕರ್ ಅವರನ್ನು ಅವಮಾನಿಸುವ ಮೂಲಕ ದೇಶ ವಿರೊಧಿ ಚಟುವಟಿಕೆ ನಡೆಸುತ್ತಿರುವ, ವಿದ್ಯಾರ್ಥಿ ಯುವಜನರ ಮೂಲಕ ದೇಶದಲ್ಲಿ ಅಶಾಂತಿ ಸೃಷ್ಟಿಲು ಯತ್ನಿಸುತ್ತಿರುವ ಈ ಜೈನ್ ವಿವಿ ವಿರುದ್ಧ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಈ ಜೈನ್ ವಿವಿ ಯಿಂದ ರಾಜ್ಯದಲ್ಲಿ ಸಾಮಾಜಿಕ ಅಸಮಾನತೆ ಬಿತ್ತುವ ಕಾರ್ಯಗಳಿಗೆ ಪರೋಕ್ಷವಾಗಿ ಸಹಮತಿ ನೀಡಿದಂತಾಗುತ್ತದೆ. ಇವರ ವಿರುದ್ಧವೂ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಭೀಮ್ ಆರ್ಮಿ ತಾಲ್ಲೂಕು ಘಟಕದ ವತಿಯಿಂದ ಮಾನವಿ ತಾಲ್ಲೂಕು ತಹಸೀಲ್ದಾರರ ಮೂಲಕ ಮಾನ್ಯ ರಾಷ್ಟ್ರಪತಿ ಇವರಿಗೆ ಮನವಿ ಪತ್ರ ನೀಡಲಾಯಿತು.
ಈ ವೇಳೆ ವೆಂಕಟೇಶ್ ಈರಲಗಡ್ಡಿ ತಾಲೂಕು ಅಧ್ಯಕ್ಷರು ಮಲ್ಲಿಕಾರ್ಜುನ ತಾಲೂಕು ಸಂ, ಕಾರ್ಯದರ್ಶಿ, ಲಚುಮಯ್ಯ ನಾಯಕ ಉಮಳಿಹೊಸೂರು, ಹನುಮೇಶ ಭಜಂತ್ರಿ, ತಿಮ್ಮಯ್ಯ ಮದ್ಲಾಪೂರು, ದೇವೇಂದ್ರ ದೇವಿಪುರ, ಅಂಬಣ್ಣ ನಾಯಕ ಉಮಳಿಹೊಸೂರು, ಹಾಜಿಬಾಬು, ಚಂದ್ರುಗೌಡ, ಮೌನೇಶ ಸೇರಿದಂತೆ ಇತರರು ಹಾಜರಿದ್ದರು.