ವಿಜಯನಗರ ವಾಣಿ ಸುದ್ದಿ
ಮಾನ್ವಿ: ಜನರ ಅಲೆದಾಟವನ್ನು ತಪ್ಪಿಸುವ ಮೂಲಕ ಮನೆ ಮನಗೆ ಸರ್ಕಾರಿ ಸೇವೆಯನ್ನು ತಲುಪುವ ಉದ್ದೇಶದಿಂದ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳನ್ನು ಸರ್ಕಾರ ಆಯೋಜನೆ ಮಾಡುತ್ತಿದೆ ಎಂದು ತಹಸೀಲ್ದಾರ್ ಚಂದ್ರಕಾಂತ ಹೇಳಿದರು.
ಸೋಮವಾರ ತಾಲೂಕಿನ ಹಿರೆಕೋಟ್ನೇಕಲ್ ಹೋಬಳಿಯ ಜೀನೂರಿನಲ್ಲಿ ತಾಲೂಕಾಡಳಿತದಿಂದ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಸರ್ಕಾರ ಸೇವೆಗಳು ಮಾತ್ರ ಸದುಪಯೋಗ ಮಾಡಿಕೊಳ್ಳಲು ಸಾಧ್ಯ ಎಂದರು.
ಕಂದಾಯ ಇಲಾಖೆಗೆ 19, ತಾಪಂಗೆ 5, ಶಿಕ್ಷಣ ಇಲಾಖೆಗೆ 2 ಭೂದಾಖಲೆ ಇಲಾಖೆಗೆ 2 ಅರ್ಜಿಗಳು ಬಂದಿದ್ದವು. ಎಲ್ಲಾ ಅರ್ಜಿಗಳನ್ನು ಸ್ಥಳದಲ್ಲೆ ವಿಲೇವಾರಿ ಮಾಡಲಾಗಿದೆ. ಗ್ರೇಡ್೨ ತಹಸೀಲ್ದಾರ್ ಅಬ್ದುಲ್ ವಾಹೀದ್, ತಾಪಂ ಇಒ ಸೈಯದ್ ಪಟೇಲ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ, ಆರೋಂಗ್ಯಾಧಿಕಾರಿ ಚಂದ್ರಶೇಖರಯ್ಯ ಸ್ವಾಮಿ, ಕೃಷಿ ಸಹಾಯಕ ನಿರ್ಧೇಶಕ ಹುಸೇನ್ ಸಾಹೇಬ್, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಶಶಿಕಾಂತ ವಂದಾಲಿ, ಸಮಾಜ ಕಲ್ಯಾಧಿಕಾರಿ ರವಿಂದ್ರ ಉಪ್ಪಾರ, ಅಕ್ಷರ ದಾಸೋಹ ಸಹಾಯಕ ನಿರ್ಧೇಶಕ ಸುರೇಶ ನಾಯಕ ಇದ್ದರು.