ಸಿರುಗುಪ್ಪ: ತೆಕ್ಕಲಕೊಟೆಪಟ್ಟಣದ ಸುಬ್ಬರಾಯುಡು ಅಕ್ಕಿ ಗಿರಣಿ ಮೈದಾನದಲ್ಲಿ ಮಂಗಳವಾರ ಸಂಜೆ ನಡೆದ ಮಹಾಶಿವರಾತ್ರಿ ಪ್ರಯುಕ್ತ ಶಿವಲಿಂಗ ದರ್ಶನ ಕಾರ್ಯಕ್ರವನ್ನು ತಾಲ್ಲೂಕು ಬಿ. ಜಿ. ಪಿ. ಯುವ ಮೋರ್ಚಾ ಅಧ್ಯಕ್ಷ ಎಂ.ಎಸ್. ಸಿದ್ದಪ್ಪುದ್ಘಾಟಿಸಿದರು. ನಂತರ ಮಾತನಾಡಿದ ಅವರು
ಮನುಷ್ಯನ ಜನ್ಮ ಸಾರ್ಥಕವಾಗ ಬೇಕಾದರೆ ಆಧ್ಯಾತ್ಮಿಕ ಜ್ಞಾನ ಅಗತ್ಯ ಇದೆ
ಎಷ್ಟೆ ತಂತ್ರಜ್ಞಾನ ಮುಂದುವರೆದರು
ಆಧ್ಯಾತ್ಮಿಕಯನ್ನುವದು ಅತ್ಯವಶ್ಯಕ ಎಂದರು ಜಗಳೂರಿನ ರಾಜಯೋಗಿನಿ ಭಾರತಿ ಅಕ್ಕ ಮಾತನಾಡಿ, ‘ಜ್ಞಾನ, ಧ್ಯಾನ, ಧಾರಣೆ ಹಾಗೂ ಸೇವೆ ಕುರಿತ ಈಶ್ವರೀಯ ಸಂದೇಶವನ್ನು ತಿಳಿಸಿದರು.
ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ
ರಾಜಯೋಗಿನಿ ಪೂರ್ಣಿಮಾ ಅಕ್ಕ ಮಾತನಾಡಿದರು.
ಗಿನ್ನಿಸ್ ದಾಖಲೆಯ ಭರತ ನಾಟ್ಯ ಕಲಾವಿದ ಬೆಂಗಳೂರಿನ ರಾಜು ಇವರಿಂದ ನೃತ್ಯ ಪ್ರದರ್ಶನಡ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ 40 ಅಡಿ ಎತ್ತರದ ಬೃಹತ್ ಶಿವಲಿಂಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿತ್ತು. ದ್ವಾದಶ ಶಿವಲಿಂಗ, ಕ್ಷೀರಧಾರ ಲಿಂಗ ಹಾಗೂ ಸಹಸ್ರ ಲಿಂಗ ದರ್ಶನ ಆಯೋಜಿಸಲಾಗಿತ್ತು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ ಎಚ್.ಕೆ.ತಿಮ್ಮಪ್ಪ, ನರೇಂದ್ರ , ಮುರಳಿ ಸ್ವಾಮಿ, ಅಲಿ ಮುರ್ತುಜಾ, ಬಿ.ಕೆ. ಮಾನಸ, ಡಾ. ಬಿ.ಕೆ. ರೇಖಾ ಅಕ್ಕ, ಶಶಿರೇಖಾ ಅಕ್ಕ ಕರೂರು, ಮಸ್ಕಿಯ ಹೇಮಾ ಅಕ್ಕ, ತೋರಣಗಲ್ಲು ರಾಜೇಶ್ಯರಿ ಅಕ್ಕ, ಕೆ.ಪಿ. ಮಹಾಬಲೇಶ್ವರ ಇದ್ದರು.