ಶಾಲಾ ಬಸ್ ಬ್ರೇಕ್ ಫೇಲ್ ಕುರಿಗಳ ಮಾರಣಹೋಮ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ
ಕಂಪ್ಲಿ: ಸಮೀಪದ ಸಣಾಪುರದ ಗ್ರಾಮ ಮಟ್ಟಿ ರೈಸ್ ಹತ್ತಿರ ಕಂಪ್ಲಿಯ ಖಾಸಗಿ ಶಾಲೆ ಚೇತನ ಶಾಲೆಯ ವಾಹನ ಬ್ರೇಕ್ ಫೇಲಾಗಿ ಪರಿಣಾಮ ಕುರಿಗಳ ಮೇಲೆ ಹತ್ತಿದೆ ಇದರ ಪರಿಣಾಮವಾಗಿ 50-60 ಕುರಿಗಳು ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದು ಹಲವು ಕುರಿಗಳ ಸ್ಥಿತಿ ಚಿಂತಾಜನಕವಾಗಿದೆ.

ಪ್ರತಿ ನಿತ್ಯದಂತೆ ಬುಧವಾರ
ಸಂಜೆ ಸಣಾಪುರದ ರಸ್ತೆಯಲ್ಲಿ ಹೋಗುವ ಸಮಯದಲ್ಲಿ ಶಾಲಾ ವಾಹನ ಚಾಲಕ ಪಂಪಾ ಚಲಾಯಿಸುತ್ತಿದ್ದ ಬಸ್ ಏಕಾಏಕಿ ಬ್ರೇಕ್ಫಾಲ್ ಆಗಿದೆ ಈ ಸಂದರ್ಭದಲ್ಲಿ
ವಾಹನದಲ್ಲಿ ಸುಮಾರು 20 ಮಕ್ಕಳು ಇದ್ದು ಅದೃಷ್ಟವಶಾತ್ ಯಾವುದೇ ಪ್ರಾಣಪಾಯವಾಗಿಲ್ಲ,

ಕುರಿಗಳ ಮಾರಣಹೋಮವೇ ಜರುಗಿದಂತೆ ರಸ್ತೆಯಲ್ಲೆಲ್ಲಾ ರಕ್ತಸಿಕ್ತವಾಗಿದ್ದು ಕಂಡು ಬಂತು
ಕುರಿ ಕಳೆದುಕೊಂಡವರ ರೋದನ ಮುಗಿಲು ಮುಟ್ಟಿತ್ತು ಇನ್ನೂ
ಈ ವಿಷಯ ತಿಳಿದ ಕಂಪ್ಲಿ ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಕಂಪ್ಲಿ ಶಾಸಕ ಜೆ.ಎನ್. ಗಣೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು..
ಈ ಸಮಯದಲ್ಲಿ ಕಂಪ್ಲಿಯ ತಹಶಿಲ್ದಾರ್ ಊರಿನ ಮುಖಂಡರು ಶಾಲೆಯ ಮುಖ್ಯಸ್ಥರು ಮಕ್ಕಳ ಪಾಲಕರು ಉಪಸ್ಥಿತಿಯಲ್ಲಿದ್ದರು.

Share and Enjoy !

Shares