ಬಳ್ಳಾರಿ ಜಿಲ್ಲೆ
ಸಂಡೂರು:ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ವಿಜಯ ಸಂಕಲ್ಪ ಸಮಾವೇಶ ಕಾರ್ಯಕ್ರಮವನ್ನು ಗುರುವಾರ ಸಂಡೂರಿನ ಎಸ್ ಆರ್ ಎಸ್ ಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು
ಬಿಜೆಪಿ ಪಕ್ಷದ ವಿಜಯ ಸಂಕ್ಪಲ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಮಾತನಾಡಿ ರಾಜ್ಯದಲ್ಲಿ ಸಂಪೂರ್ಣ ಬಹುಮತದ ಸರ್ಕಾರ ರಚನೆ ಅಗಬೇಕಾದರೆ ನನ್ನ ಜೊತೆ ಕೈ ಜೋಡಿಸಿ, ಸಂಪೂರ್ಣ ಪ್ರಮಾಣದ ಸರ್ಕಾರ ಕೊಡಿ, ಈ ಸಾರಿ ಪೂರ್ಣ ಬಹುಮತದ ಬಿಜೆಪಿ ಸರ್ಕಾರ ರಚನೆ ಆಗಲಿದೆ ಎಂದು ಹೇಳಿದರು.
2008 ರ ಚುನಾವಣೆಯಲ್ಲಿ ಬಿಎಸ್‌ವೈ ನೇತ್ರತ್ವದಲ್ಲಿ ಚುನಾವಣೆಗೆ ಹೋಗಿದ್ದೆವೆ. ಆದ್ರೆ ನಮಗೆ ಸರ್ಕಾರ ರಚನೆ ಮಾಡಲು ಆಗಲಿಲ್ಲಾ, ಆದ್ರೆ ಅಂದು ಕಾಂಗ್ರೆಸ್ ಜೆಡಿಎಸ್ ಸೇರಿ ಸರ್ಕಾರ ರಚನೆ ಮಾಡಿದೆ. ಜೆಡಿಎಸ್‌ಗೆ ನೀವು ಹಾಕುವ ಒಂದೊಂದು ಓಟ್ ಕಾಂಗ್ರೆಸ್‌ಗೆ ಹೋಗುತ್ತವೆ. ಕಾಂಗ್ರೆಸ್ ಹಾಗು ಜೆಡಿಎಸ್ ರಾಜ್ಯದಲ್ಲಿ ಭ್ರಷ್ಟಾಚಾರ ಮಾಡಿವೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಒಂದು ತುಕಡೆ ಗ್ಯಾಂಗ್, ಈ ಎರಡು ಪಕ್ಷಕ್ಕೆ ಬಿಟ್ಟು ಓಟ್ ಯಾರಿಗೆ ಹಾಕಬೇಕು. ಬಿಜೆಪಿಗೆ ನೀವು ಮತ ಹಾಕಿದ್ರೆ ಅದು ಮೋದಿ ಶಕ್ತಿ ಮತ್ತಷ್ಟು ಬಲಿಷ್ಠ ಆಗಲಿದೆ. ಮೋದಿ ರಾಮ ಮಂದಿರದ ಶಿಲಾ ನ್ಯಾಸ ಮಾಡಿದ್ರು.
ಸೋನಿಯಾ ಮನಮೋಹನ ಸಿಂಗ್ ಎಷ್ಟು ಬಾರಿ ಪಾಕಿಸ್ತಾನದವರು ನಮ್ಮ ಮೇಲೆ ಅ್ಯಟಾಕ್ ಮಾಡಿದ್ರು ತುಟಿ ಬಿಚ್ಚಲಿಲ್ಲ. ಆದ್ರೇ ಮೋದಿ ಇದ್ದಾಗ ಸರ್ಜಿಕಲ್ ಸ್ಟ್ರೈಕ್ ಮಾಡಿದ್ರು ಪಾಕಿಸ್ತಾನಕ್ಕೆ ನುಗ್ಗಿ ಹೊಡೆದ್ರು. ಮೋದಿಯಿಂದ ಮಾತ್ರ ದೇಶದ ಅಭಿವೃದ್ಧಿ ಮತ್ತು ಭದ್ರತೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸಿಎಂ ಕುರ್ಚಿ ಜಗಳ ಮಾಡುತ್ತಿವೆ. ಒಂದು ಕಡೆ ಡಿಕೆ ಶಿವಕುಮಾರ್ ಮತ್ತೊಂದು ಕಡೆ ಸಿದ್ದರಾಮಯ್ಯ ಜಗಳ ಮಾಡುತ್ತಿದ್ದಾರೆ.
ಕರೋನ ಬಂದಾಗ ಪ್ರತಿ ನಾಗರಿಕರಿಗೆ ಉಚಿತವಾಗಿ ಲಸಿಕೆ ನೀಡಿದ್ದು ನಮ್ಮ ಮೋದಿ ಸರ್ಕಾರ ಎಂದರು.