ರಾಜ್ಯಪಾಲರಿಂದ ಸಿಜಿಸಿ ಮೋಹನ್ ಕುಮಾರ್ ದಾನಪ್ಪನವರಿಗೆ ಪ್ರಶಂಸೆ

Share and Enjoy !

Shares
Listen to this article

ಬೆಂಗಳೂರು: ಫೆ 23, ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ರವರ 72 ನೇ ಜನ್ಮ ದಿನದಂದು ರಾಷ್ಟ್ರದ ರಾಜಧಾನಿ ನವದೆಹಲಿಯಲ್ಲಿ ಮತದಾನದ ಜಾಗೃತಿಗಾಗಿ 3 ಗಂಟೆಗಳ ಮ್ಯಾರಥಾನ್ ನಡೆಸಿ ದೇಶದ ಗಮನ ಸೆಳೆದ ಕಂಪ್ಲಿ ನಿವಾಸಿ ಕರ್ನಾಟಕ ಹೈ ಕೋರ್ಟಿನ ಕೇಂದ್ರ ಸರ್ಕಾರದ ವಕೀಲರಾದ ಡಾ.ಮೋಹನ್ ಕುಮಾರ್ ದಾನಪ್ಪನವರಿಗೆ ಕರ್ನಾಟಕ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ಪತ್ರ ಬರೆದು ಅಭಿನಂದಿಸಿದ್ದಾರೆ

ರಾಜ್ಯಪಾಲರ ಪತ್ರದಲ್ಲಿ ಶ್ರೀ ಮೋಹನ್ ಕುಮಾರ್ ದಾನಪ್ಪ ಅವರು “ಮತದಾನ ನಮ್ಮ ಹಕ್ಕು, ಮತದಾನ ನಮ್ಮ ಕರ್ತವ್ಯ” ಎಂಬl ಪರಿಕಲ್ಪನೆಯೊಂದಿಗೆ ದೇಶದ ಜನರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ನವದೆಹಲಿಯ ಕರ್ನಾಟಕ ಭವನದಿಂದ ಕೆಂಪುಕೋಟೆಯವರೆಗೆ ರಾಷ್ಟ್ರಧ್ವಜ ಮತ್ತು ಕರ್ನಾಟಕ ಧ್ವಜವನ್ನು ಹಿಡಿದು 3 ಗಂಟೆಗಳ ಕಾಲ ಮ್ಯಾರಥಾನ್ ನಡೆಸಿರುವುದು ತಿಳಿದು ತುಂಬಾ ಸಂತಸವಾಗಿದೆ

ಈ ಜಾಗೃತಿ ಮ್ಯಾರಥಾನ್ ಅನ್ನು “ಇಂಡಿಯಾ ಬುಕ್ ಆಫ್ ರೆಕಾರ್ಡ್”, “ಹಾರ್ವರ್ಡ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್” ಮತ್ತು “ಇನ್ಫ್ಲುಯೆನ್ಸರ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್” ನಲ್ಲಿ ಸೇರಿಸಲಾಗಿದೆ ಎಂದು ತಿಳಿಯಲು ನನಗೆ ಸಂತೋಷವಾಗಿದೆ.

ಈ ಸಂಧರ್ಭದಲ್ಲಿ ನಾನು ಈ ಅವಕಾಶವನ್ನು ಬಳಸಿಕೊಂಡು ತಮಗೆ ನನ್ನ ಶುಭಾಶಯಗಳನ್ನು ತಿಳಿಸುತ್ತಾ, ತಮಗೆ ಶುಭಾಶಯಗಳನ್ನು ಈ ಪತ್ರದ ಮೂಲಕ ಕಳುಹಿಸಲಾಗಿದ್ದು ಮತ್ತು ನಿಮ್ಮ ಮುಂದಿನ ಪ್ರಯತ್ನಗಳಲ್ಲಿ ನೀವು ಭವ್ಯವಾದ ಯಶಸ್ಸನ್ನು ಕಾಣಲೆಂದು ಬಯಸುತ್ತೇನೆ ಎಂದು ಕರ್ನಾಟಕ ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು ತಿಳಿಸಿರುತ್ತಾರೆ

Share and Enjoy !

Shares