ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ; ಗ್ರಾಪಂ ಅಧ್ಯಕ್ಷೆ ನಂದಿನಿ

Share and Enjoy !

Shares
Listen to this article

ಸಂಡೂರು: ಫೆ: 27: ಅಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಿ ಎಂದು  ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ನಂದಿನಿ.ಕೆ,ತಿಳಿಸಿದರು

ತಾಲೂಕಿನ ಭುಜಂಗನಗರ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು, ಜನರ ಜೀವನ ಶೈಲಿ ಬದಲಾಗಿದೆ,ಸದಾ ಚಟುವಟಿಕೆಯಿಂದ ಇರುವುದು ಕಾಣದಾಗಿದೆ, ಆಹಾರ ಪದ್ಧತಿಯೂ ಬದಲಾಗಿದೆ, ಸುಹಾಸನೆ ಭರಿತ, ಬಣ್ಣ ಬಣ್ಣಗಳಿಂದ,ರಾಸಾಯನಿಕ ವಸ್ತುಗಳನ್ನು ಬಳಸಿ ತಯಾರಿದ ಆಹಾರ, ಹೆಚ್ಚು ಕೊಬ್ಬು ಹೊಂದಿರುವ ಆಹಾರ ಸೇವನೆ, ಸೊಪ್ಪು ತರಕಾರಿಗಳು ಅಲಂಕಾರಕ್ಕೆ ಎನ್ನುವಂತೆ ಆಗಿದೆ,ಇಲಾಖೆ ಇತ್ತ ಕಡೆ ಗಮನ ಹರಿಸಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ ಎಂದು ಅವರು ನುಡಿದರು,

ಈ ಸಂದರ್ಭದಲ್ಲಿ ಆರೋಗ್ಯವಂತ ಗ್ರಾಮದ ಪರಿಕಲ್ಪನೆ ಉತ್ತಮವಾಗಿದೆ, ರೋಗಗಳ ಕುರಿತು ಮಾಹಿತಿ ಪಡೆದು ಕೊಂಡು ಆರೋಗ್ಯವನ್ನು ಉತ್ನತಿಕರಿಸಿಕೊಳ್ಳ ಬೇಕು ಎಂದು ತಿಳಿಸುತ್ತಾ, ರಕ್ತದೊತ್ತಡ, ಮಧುಮೇಹ,ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಮಾನಸಿಕ ಆರೋಗ್ಯ ಕುರಿತು ಮತ್ತು ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಅವರು ಬಾಲ್ಯ ವಿವಾಹ ಕಾಯ್ದೆ, ಹದಿಹರೆಯದವರ ಆರೋಗ್ಯ, ಮುಟ್ಟಿನ ಸ್ವಚ್ಛತೆ, ಅನಿಮಿಯಾ, ಅಪೌಷ್ಟಿಕತೆ ಬಗ್ಗೆ ಮಾಹಿತಿ ನೀಡಿದರು,

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಮಲ್ಲಿಕಾರ್ಜುನ ಸ್ವಾಮಿ, ಎಲ್ಲಪ್ಪ, ಮುಖಂಡರಾದ ಚಿಂತಮಣಿ ಆಚಾರ್,ಕಾರ್ಯದರ್ಶಿ ರುದ್ರಸ್ವಾಮಿ, ಕೆ.ಹೆಚ್.ಪಿ.ಟಿ ಸ್ವಯಂಸೇವಕಿ ನಿರ್ಮಲ, ಅಂಗನವಾಡಿ ಕಾರ್ಯಕರ್ತೆಯರಾದ ಗಂಗಮ್ಮ,ತಾಯಮ್ಮ, ನಿರ್ಮಲಮ್ಮ, ದೊಡ್ಡಮ್ಮ, ಸ್ವಸಹಾಯ ಗುಂಪಿನ ಪ್ರತಿನಿಧಿ ಸುನಂದ,ರೇವಮ್ಮ, ಪಶು ಪಾಲನ ಸಖಿ ಮಲ್ಲಮ್ಮ, ಕೃಷಿ ಪಾಲನಾ ಸಖಿ ನೇತ್ರ,ರೇಣುಕಾ, ಅಂಜಿನೇಯಲು,ಮಹೇಶ್ ಇತರರು ಉಪಸ್ಥಿತರಿದ್ದರು

 

 

Share and Enjoy !

Shares