ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ರಾಷ್ಟ್ರೀಯ ಮಹಿಳಾ ಆಯೋಗದ (NCW) ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಕ್ಕಾಗಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಖುಷ್ಬೂ ಸುಂದರ್ ಅವರನ್ನು ಸೋಮವಾರ ಅಭಿನಂದಿಸಿದ್ದಾರೆ

Share and Enjoy !

Shares
Listen to this article

ತಮಿಳುನಾಡಿನ ನಟಿ-ರಾಜಕಾರಣಿ ಖುಷ್ಬೂ ಸುಂದರ್ (Khushbu Sundar) ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ(National Commission for Women) ನಾಮನಿರ್ದೇಶನಗೊಂಡಿದ್ದಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರು ರಾಷ್ಟ್ರೀಯ ಮಹಿಳಾ ಆಯೋಗದ (NCW) ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಕ್ಕಾಗಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾಗಿರುವ ಖುಷ್ಬೂ ಸುಂದರ್ ಅವರನ್ನು ಸೋಮವಾರ ಅಭಿನಂದಿಸಿದ್ದಾರೆ.

ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿ ನಾಮನಿರ್ದೇಶನಗೊಂಡಿದ್ದಕ್ಕಾಗಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಖುಷ್ಬೂ ಸುಂದರ್ ಅವರಿಗೆ ಅಭಿನಂದನೆಗಳು. ತಮಿಳುನಾಡಿನ ಪರವಾಗಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಇದು ಅವರ ನಿರಂತರ ಅನ್ವೇಷಣೆ ಮತ್ತು ಮಹಿಳಾ ಹಕ್ಕುಗಳಿಗಾಗಿ ಹೋರಾಟಕ್ಕೆ ಮನ್ನಣೆಯಾಗಿದೆ ಎಂದು ಅಣ್ಣಾಮಲೈ ಟ್ವೀಟ್ ಮಾಡಿದ್ದಾರೆ.

“ಇಂತಹ ದೊಡ್ಡ ಜವಾಬ್ದಾರಿಯನ್ನು ನನಗೆ ವಹಿಸಿದ್ದಕ್ಕಾಗಿ  ಗೌರವಾನ್ವಿತ ಪಿಎಂ ನರೇಂದ್ರ ಮೋದಿ ಜಿ ಮತ್ತು ಭಾರತ ಸರ್ಕಾರಕ್ಕೆ ಧನ್ಯವಾದಗಳು. ನಿಮ್ಮ ನಾಯಕತ್ವದಲ್ಲಿ ಚಿಮ್ಮಿ ಬೆಳೆಯುತ್ತಿರುವ ನಾರಿ ಶಕ್ತಿಯನ್ನು ರಕ್ಷಿಸಲು, ಸಂರಕ್ಷಿಸಲು ಮತ್ತು ಪೋಷಿಸಲು ನಾನು ಶ್ರಮಿಸುತ್ತೇನೆ. ಕುತೂಹಲದಿಂದ ಎದುರು ನೋಡುತ್ತಿದ್ದೇನೆ. #JaiHind@NCWIndia” ಎಂದು ಖುಷ್ಬೂ ಸುಂದರ್ ಟ್ವೀಟ್ ಮಾಡಿದ್ದಾರೆ.

 

 

 

Share and Enjoy !

Shares