ವಿ. ರಾಮನ್ ಎಂಬ ಭಾರತದ ಹೆಮ್ಮೆಯ ವಿಜ್ಞಾನಿ

Share and Enjoy !

Shares

ಸಮುದ್ರದ ನೀರು ಏಕೆ ನೀಲಿ!?—ಪರಿಶೋಧಿಸಿದ ವಿಜ್ಞಾನಿ

ಇಂದು ನಾವು ವಿಜ್ಞಾನ ಯುಗದಲ್ಲಿದ್ದೇವೆ. ವಿಜ್ಞಾನ ನಮ್ಮ ಬದುಕಿನ ಅವಿಭಾಜ್ಯವಾಗಿದೆ.ನಮ್ಮ ಸುತ್ತಲಿನ ಅನೇಕ ಸಮಸ್ಯೆಗಳಿಗೆ ವಿಜ್ಞಾನವೇ ಕಾರಣ-ಎಂದು ವಾದಿಸುವ ವರ್ಗ ಒಂದೆಡೆಯಾದರೆ,ಜಗತ್ತಿನ ಯಾವುದೇ ಸಮಸ್ಯೆಗಳಿಗೆ ಉತ್ತರವಾಗ ಬಲ್ಲುದು ವಿಜ್ಞಾನ ಮಾತ್ರ ಎಂದು ಎಲ್ಲರೂ ನಂಬಿದ್ದಾರೆ. ಸಮಾಜ ಮತ್ತು ಪರಿಸರದಿಂದ ಜ್ಞಾನ ಸಹಜವಾಗಿ ಲಭ್ಯವಾಗುತ್ತದೆ, ಆ ಜ್ಞಾನವನ್ನು ವ್ಯವಸ್ಥಿತಗೊಳಿಸುವುದೇ-ವಿಜ್ಞಾನ.ಅಂತಹ ವಿಜ್ಞಾನ ಪುನಃ ಪುನಃ ತನ್ನನ್ನು ತಾನು ಪರೀಕ್ಷೆಗೆ ಒಳಪಡಿಸಿಕೊಳ್ಳುತ್ತಾ ಹೋಗುತ್ತದೆ.ಆ ಮೂಲಕ ಹೊಸ ವಿಚಾರಗಳ ಉದಯಕ್ಕೆ ಕಾರಣವಾಗುತ್ತದೆ.ಇಂದು ನಮ್ಮ ಮುಂದೆ ಇರುವ ವಿಜ್ಞಾನದ ಬೆಳವಣಿಗೆಗೆ ವಿಜ್ಞಾನಿಗಳ ಯೋಚನೆ, ಚಿಂತನೆ, ಮತ್ತು ನಮ್ಮ ನಡುವೆ ಉದ್ಭವವಾಗುವ ಸಮಸ್ಯೆಗಳೇ ಕಾರಣ.ಆ ನಿಟ್ಟಿನಲ್ಲಿ ವಿಜ್ಞಾನದ ಬಗ್ಗೆ ಯೋಚಿಸುವಾಗ ಮತ್ತೊಮ್ಮೆ ನಮ್ಮ ಮುಂದೆ ರಾಷ್ಟಿçÃಯ ವಿಜ್ಞಾನ ದಿನಾಚರಣೆ ಬಂದಿದೆ.ರೈಲು ಮತ್ತು ಬಸ್ಸಿನ ಮೂಲಕ ನಾವು ಒಂದು ಊರಿನಿಂದ ಮತ್ತೊಂದು ಊರಿಗೆ ಪಯಣಿಸುವಾಗ ಅಲ್ಲಲ್ಲಿ ಊರು-ಜನ-ಪಟ್ಟಣ, ಹೊಲ, ಗದ್ದೆ, ಕ್ಷಣವತ್ತಾದರೂ ಕಾಣುವ ವೈವಿಧ್ಯಮಯ ಬದುಕು ಇವೆಲ್ಲವೂ ನಮ್ಮ ಪ್ರಯಾಣವನ್ನು ವರ್ಣಮಯಮಾಡಿಬಿಡುತ್ತದೆ.ವಿಮಾನದ ಮೂಲಕ ಮಾಡುವ ಪ್ರಯಾಣ ಭಿನ್ನ ಭಿನ್ನ ಪ್ರದೇಶ ಮತ್ತು ದೇಶಗಳಿಗೆ ಗಂಟೆಗಳ ಲೆಕ್ಕ ಅಥವಾ ಒಂದೆರಡು ದಿನಗಳ ಲೆಕ್ಕದಲ್ಲಿ ಮುಗಿಸಿ ಬಿಡುತ್ತೇವೆ.ಆದರೆ ತುಂಬಾ ಹಿಂದಿನ ದಿನಗಳಲ್ಲಿ ವಿಮಾಗಳು ಕಡಿಮೆ ಅಥವಾ ಇಲ್ಲದೇ ಇರುವ ಸಮಯದಲ್ಲಿ ಹಡಗಿನ ಮೂಲಕ ಪ್ರಯಾಣಿಸುವ ಅಗತ್ಯ ಇತ್ತು. ಅಂತಹ ಸಮುದ್ರ ಪಯಣ ಮಾಡುವಾಗ ಬಹುತೇಕ ಬೇಸರವೇ ಹೆಚ್ಚು.ಯಾಕೆಂದರೆ ಎತ್ತ ನೋಡಿದರೂ ನೀಲಿ..ನೀಲಿ ಆಕಾಶವೂ ನೀಲಿ ಸಮುದ್ರವು ನೀಲಿ.ನೀಲಿ ಬಿಟ್ಟು ಬೇರೇನೂ ಕಾಣದ ಸ್ಥಿತಿ.೧೯೨೧ ರಲ್ಲಿ ಭಾರತದಿಂದ ಇಂಗ್ಲಾಂಡಿನ ಆಕ್ಸ್ಫರ್ಡ್ಗೆ ಸಮುದ್ರದಲ್ಲಿ ಪಯಣ ಮಾಡುವ ಯುವಕನಿಗೆ ಅದು ಬೇಸರವಾಗದೆ ನೋಬೆಲ್ ಪ್ರಶಸ್ತಿಯನ್ನು ತಂದು ಕೊಟ್ಟಿತು, ಆ ಯುವಕನೇ ಭಾರತದ ವಿಜ್ಞಾನಿ ಸರ್ ಸಿ.ವಿ ರಮನ್.ಇಂಗ್ಲಾಂಡಿಗೆ ಸಮುದ್ರದ ಮೂಲಕ ಪಯಣಿಸುವಾಗ ಹಡಗಿನಲ್ಲಿ ಕುಳಿತು ಸಮುದ್ರವನ್ನು ನೋಡುತ್ತಿದ್ದ ರಾಮನ್ ತಲೆಯಲ್ಲಿ ಯೋಚನೆ ಬಂತು ಸಮುದ್ರದ ನೀರು ಏಕೆ ನೀಲಿ ?-ಎಂದು.ಅದುವರಿಗೆ ಲಾರ್ಡ್ ರ‍್ಯಾಲಿ ಎಂಬ ವಿಜ್ಞಾನಿ ಆಕಾಶದ ನೀಲಿ ಬಣ್ಣವು ಸಮುದ್ರದಲ್ಲಿ ಪ್ರತಿಫಲಿಸುವುದರಿಂದ ನೀಲಿ ಬಣ್ಣ ಕಾಣುತ್ತದೆ ಎಂದು ಪ್ರತಿಪಾದಿಸಿದ್ದ, ಆದರೆ ರಾಮನ್ ಗೆ ಈ ವಿಚಾರವೇಕೋ ಸರಿ ಅನ್ನಿಸಲಿಲ್ಲ.ಇದನ್ನು ಪರೀಕ್ಷಿಸ ಬೇಕು ಅನ್ನಿಸಿತು.ಅದಕ್ಕಾಗಿ ಆತ ತನ್ನ ಬಳಿ ಇರುವ ಸಲಕರಣೆಯೊಂದನ್ನು ತೆಗೆದುಕೊಂಡು ಅದರಲ್ಲಿ ಸಮುದ್ರದ ನೀರು ಸಂಗ್ರಹಿಸಿ ಪರೀಕ್ಷಿಸಿದರು ಆಗ ತಿಳಿಯಿತು ಸಮುದ್ರದ ನೀರು ಆಕಾಶವನ್ನು ಪ್ರತಿಫಲಿಸುವುದಿಲ್ಲ ಬದಲಾಗಿ ಸಮುದ್ರದ ನೀರೇ ನೀಲಿಯಾಗಿದೆ, ಇದಕ್ಕೆ ಬೇರೆ ಕಾರಣವಿರಬೇಕೆಂದು ಯೋಚಿಸತೊಡಗಿದರು. ಆಕಾಶದಲ್ಲಿನ ವಾತಾವರಣದ ಅಣುಗಳ ಮೇಲೆ ಬಿಳಿಯ ಬೆಳಕು ಬಿದ್ದು ಹೇಗೆ ಚದುರಿ ನೀಲಿ ಬಣ್ಣ ತೋರುತ್ತದೆಯೋ ಅದೇ ರೀತಿ ಸಮುದ್ರದ ನೀರಿನ ಮೇಲೆ ಬೆಳಕು ಬಿದ್ದಾಗ ಅದು ಚದುರಿ ನೀಲಿ ಬಣ್ಣದಲ್ಲಿ ಕಾಣುತ್ತದೆ ಎನ್ನುವ ತೀರ್ಮಾನಕ್ಕೆ ಬರುತ್ತಾರೆ.ಈ  ಘಟನೆ ನಡೆಯುವ ಪಯಣಕ್ಕೆ ಪೂರ್ವಕಾರಣವೇನೆಂದರೆ ಆಗಾಗಲೇ ಭೌತಶಾಸ್ತ್ರ ದ ಫ್ರೊಫೇಸರ್ ಆಗಿ ಮತ್ತು ಸಂಶೋಧಕರಾಗಿ ಹೆಸರಾಗಿದ್ದ ಅವರಿಗೆ ೧೯೨೧ರ ವಿಜ್ಞಾನ ಸಮ್ಮೇಳನದಲ್ಲಿ ಭಾಗವಹಿಸುವಂತೆ ಕರೆಬಂದಿರುತ್ತದೆ. ಸಮುದ್ರದ ನೀಲಿ ಬಣ್ಣದ ಯೋಚನೆಯೊಂದಿಗೆ ಪ್ರಯಾಣ ಮುಗಿಸಿ ಭಾರತಕ್ಕೆ ಹಿಂದುಗಿದ ಈತ ಪ್ರಯೋಗಗಳನ್ನು ಆರಂಭಿಸಿದ.ಜೊತೆಗೆ ಹಾಗೆ ಬೆಳಕು ಚದುರಿ ಹೋಗುವಾಗ ಆಗುವ ಅನೇಕ ಪರಿಣಾಮಗಳ ಬಗ್ಗೆ ಹಲವರು ಪ್ರಯೋಗಗಳನ್ನು ಮಾಡಿದರು.ಪ್ರಯೋಗಗಳ ಫಲಿತಾಂಶಗಳನ್ನು ಪ್ರತಿಪಾದಿಸಿಟ್ಟುಕೊಂಡರು. ಸಮುದ್ರಜಲ, ನಾನಾ ಘನವಸ್ತುಗಳು,ದ್ರವಗಳು ಮತ್ತು ಅನಿಲಗಳನ್ನು ಬಳಸಿಕೊಂಡು ಅವುಗಳ ಮೇಲೆ ಬೆಳಕು ಬಿದ್ದಾಗ ಅಣುಗಳು ನೀಲಿಬೆಳಕನ್ನು ಚದರುವಂತೆ ಮಾಡುತ್ತವೆ ಮತ್ತು ಸೂರ್ಯ ಕಿರಣದಲ್ಲಿನ (ಬಿಳಿಯ ಬೆಳಕಿನ) ಉಳಿದ ಎಲ್ಲಾ ಬಣ್ಣಗಳನ್ನು ಅಣುಗಳು ಹೀರಿಕೊಳ್ಳುತ್ತವೆ.ಈ ವಿದ್ಯಮನದಿಂದಾಗಿ ಸಮುದ್ರ ನೀಲಿ ಬಣ್ಣ ಪಡೆಯುತ್ತದೆ ಎಂಬುದನ್ನು ರಾಮನ್ ಕಂಡುಹಿಡಿದರು.ರಾಮನ್ ಪರಿಣಾಮ: ಬೆಳಕಿನ ಕಿರಣವೆಂದರೆ ಫೋಟಾನ್‌ಗಳ ಪ್ರವಾಹ, ಈ ಫೋಟಾನ್‌ಗಳು ರಾಸಾಯನಿಕ ದ್ರವದಲ್ಲಿನ ಅಣುವಿಗೆ ಡಿಕ್ಕಿ ಹೊಡೆದಾಗ ಫೋಟಾನ್‌ನ ಶಕ್ತಿಯಲ್ಲಿ ಉಂಟಾಗುವ ನಷ್ಠ ಮತ್ತು ತತ್ಪರಿಣಾಮವಾಗಿ ವರ್ಣಪಂಕ್ತಿ (ಸ್ಪೆಕ್ಟçಮ್) ಯಲ್ಲಿ ಉಂಟಾಗುವ ವಿಶೇಷ ರೇಖೆಗಳೇ “ರಾಮನ್ ಪರಿಣಾಮ: ಬೆಳಕಿನ ಕಿರಣವನ್ನು ಅಣುಗಳಿಂದ ತಿರುಗಿಸಿದಾಗ ಉಂಟಾಗುವ ಬೆಳಕಿನ ತರಂಗಾಂತರದಲ್ಲಿ ಬದಲಾವಣೆ. ಬೆಳಕಿನ ಕಿರಣವು ಧೂಳು-ಮುಕ್ತ, ರಾಸಾಯನಿಕ ಸಂಯುಕ್ತದ ಪಾರದರ್ಶಕ ಮಾದರಿಯನ್ನು ಹಾದುಹೋದಾಗ, ಬೆಳಕಿನ ಸಣ್ಣ ಭಾಗವು ಘಟನೆಯ ಹೊರತಾಗಿ ಬೇರೆ ದಿಕ್ಕುಗಳಲ್ಲಿ ಹೊರಹೊಮ್ಮುತ್ತದೆ. ಕಿರಣ. ಈ ಚದುರಿದ ಬೆಳಕಿನಲ್ಲಿ ಹೆಚ್ಚಿನವು ಬದಲಾಗದ ತರಂಗಾಂತರವಾಗಿದೆ. ಆದಾಗ್ಯೂ, ಒಂದು ಸಣ್ಣ ಭಾಗವು ಘಟನೆಯ ಬೆಳಕಿನಿಂದ ಭಿನ್ನವಾದ ತರಂಗಾಂತರಗಳನ್ನು ಹೊಂದಿದೆ, ಅದರ ಉಪಸ್ಥಿತಿಯು “ರಾಮನ್ ಪರಿಣಾಮ” ದ ಪರಿಣಾಮವಾಗಿದೆ.ಫೋಟಾನ್‌ಗಳ ಶಕ್ತಿಯ ನಷ್ಟದ ಪ್ರಮಾಣ ರಾಸಾಯನಿಕ ದ್ರವದ ಅಣುವಿನ ಬಗ್ಗೆ ಮಾಹಿತಿ ನೀಡುತ್ತದೆ, ರಾಮನ್ ರೇಖೆಗಳ ಸಹಾಯದಿಂದ ಫೋಟಾನ್‌ಗಳ ಶಕ್ತಿಯಲ್ಲುಂಟಾದ ನಷ್ಠದ ಪ್ರಮಾಣವನ್ನು ನಿರ್ಧರಿಸಿ ದ್ರವ,ಘನ ಮತ್ತು ಅನಿಲ ವಸ್ತುಗಳಲ್ಲಿನ ಅಣುಗಳ ವ್ಯವಸ್ಥೆಯನ್ನು ತಿಳಿದುಕೊಳ್ಳ ಬಹುದು.ರಾಮನ್ ಎಫೆಕ್ಟ್ ಯಾವುದೇ ವಸ್ತುವಿನ ಆಂತರಿಕ ರಚನೆಯನ್ನು ತಿಳಿದುಕೊಳ್ಳಲು ಸಹಕಾರಿಯಾಗಿದೆ.ಅತ್ಯಂತ ಸರಳವಾಗಿ ಹೇಳುವುದಾದರೆ “ ಒಂದು ವಸ್ತುವಿನ ಮೇಲೆ ಬೆಳಕು ಹಾಯಿಸಿದಾಗ ಅದು ಚದುರುತ್ತದೆ, ಇಂಥ ಚದುರಿದ ಬೆಳಕು ತನ್ನದೇ ಆದ ಗುಣ ಲಕ್ಷಣಗಳನ್ನು ಹೊಂದಿರುತ್ತದೆ.ಈ ಗುಣ ಲಕ್ಷಣ ವಸ್ತುವಿನ ರಚನೆಯ ಬಗ್ಗೆ ಕಲ್ಪನೆ/ಮಾಹಿತಿ ನೀಡುತ್ತದೆ.ಉದಾಹರಣೆಗೆ ಕಲ್ಲಿನೊಳಗೆ ಏನಿದೆ ಎಂದು ನೋಡಲು ಸಾಧ್ಯವಿಲ್ಲ ಆದರೆ ರಾಮನ್ ಎಫೆಕ್ಟ್ನ ಸಹಾಯದಿಂದ ಕಲ್ಲಿನ ಆಂತರಿಕ ರಚನೆ ಅರಿಯಲು ಸಾಧ್ಯವಾಗಿದೆ.ಈ ಸಂಶೋಧನೆಯ ನಂತರ ರಾಮನ್ ಮತ್ತು ಅವರ ವಿದ್ಯಾರ್ಥಿಗಳು ಅನೆಕ ವಿಧದ ಗಾಜು, ಸ್ಪಟಿಕ,ರತ್ನ ಹರಳು,ಮುತ್ತು, ಬೆಣಚುಕಲ್ಲುಗಳು,ವಜ್ರ, ಬೆಂಝೀನ್,ಟಾಲಿನ್ ಹೀಗೆ ಹಲವಾರು ರಸಾಯನಿಕ ವಸ್ತುಗಳ ಮೇಲೆ ಪ್ರಯೋಗ ಮಾಡಿಅವುಗಳ ಅನಿಲಗಳ ಸ್ಥಾನಗಳ ಬಗ್ಗೆ ಅಧ್ಯಯನ ಮಾಡಿದರು.ಇದು ರಾಸಾಯನಿಕ ಉದ್ಯಮದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣವಾಯಿತು.ಈ ಸಂಶೋಧನೆಗಳ ಫಲವಾಗಿ ರಸಾಯನಿಕ ಉದ್ಯಯಮ ಮಹತ್ತರವಾಗಿ ಬದಲಾಯಿತು.ಪ್ಲಾಸ್ಟಿಕ್,ಕಲರ್ ಫೋಟೋಗ್ರಫಿ ಮತ್ತು ಸಿಂಥಟೆರ್ ರಬ್ಬರ್ ತಯಾರಿಸಲು ಸಾಧ್ಯವಾಯಿತು.೧೯೨೮ ರ ಫೆಬ್ರವರಿ ೨೮ ರಂದು “ರಾಮನ್ ಎಫೆಕ್ಟ್ ” ಸಂಶೋಧನೆಯನ್ನು ಅಂತಿಮವಾಗಿ ಪ್ರಕಟಿಸಿದ ಕಾರಣ ಸದರಿ ದಿನವನ್ನು ಭಾರತದಲ್ಲಿ “ರಾಷ್ಟ್ರೀಯ ವಿಜ್ಞಾನ ದಿನ” ಎಂದು ಆಚರಿಸಲಾಗುತ್ತದೆ.೪೨ ವರ್ಷದ ರಾಮನ್ ಈ ಹೊಸ ಸಂಶೋಧನೆಗಾಗಿ ನೋಬೆಲ್ ಪ್ರಶಸ್ತಿ ಬಂದೇ ಬರುತ್ತದೆ ಎಂಬ ನಂಬಿಕೆಯಿಂದ ೧೯೩೦ ರ ಡಿಸೆಂಬರ್ ತಿಂಗಳಲ್ಲಿಯೇ ಪ್ರಶಸ್ತಿ ಪ್ರಕಟವಾಗುವ ಕೆಲವು ತಿಂಗಳ ಹಿಂದೆಯೆ ಸ್ಟಾಕ್ ಹೋಂಗೆ ಪ್ರವಾಸ ಯೋಜಿಸಿದ್ದರು ಅದರಂತೆ ೧೯೩೦ ರಲ್ಲಿ ಅವರಿಗೆ ನೋಬೆಲ್ ಪ್ರಶಸ್ತಿ ಭೌತಶಾಸ್ತ್ರ ವಿಭಾಗದಲ್ಲಿ ಪಡೆದುಕೊಂಡರು.ನೋಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಮನ್‌ರವರು ಇಷ್ಟೆಲ್ಲ ಸಂತಸದ ನಡುವೆ ಅವರಿಗೆ ನೋವಾದದ್ದು ಅವರು ನೋಬೆಲ್ ಪ್ರಶಸ್ತಿ ಪಡೆಯುವಾಗ ಎಲ್ಲರಿಗೆ ಅವರವರ ರಾಷ್ಟ್ರ ಗೀತೆ.. ಗಾಯನವಾದರೆ, ಇವರು ಪ್ರಶಸ್ತಿ ಪಡೆಯುವಾಗ ಇಂಗ್ಲಾಡ್ ನ ರಾಷ್ಟ್ರಗೀತೆ ಮೊಳಗಿತು ಈ ವಿಚಾರ ಅವರಿಗೆ ಕೊನೆಯವರೆಗೂ ಕಾಡಿತ್ತು.೧೮೮೮ ರ ನವೆಂಬರ್ ೭ ರಂದು ರಾಮನ್ ಹುಟ್ಟಿದರು,ಇವರ ತಾಯಿ ಪಾರ್ವತಿ ತಂದೆ ವೆಂಕಟ್‌ರಾಮನ್,ಬಾಲಕನಾಗಿದ್ದಾಗಿನಿಂದ ತುಂಬ ಚೂಟಿಯಿದ್ದ ರಾಮನ್ ತನ್ನ ೧೨ ನೆ ವರ್ಷಕ್ಕೆ ಮೆಟ್ರಿಕ್ಯುಲೇಷನ್, ಹದಿನಾರನೇ ವಯಸ್ಸಿಗೆ ಬಿ.ಎ ಪದವಿಯನ್ನು,ಹದಿನೆಂಟನೆ ವಯಸ್ಸಿನಲ್ಲಿ ಎಂ.ಎ ಪದವಿಯನ್ನು ಗಳಸಿದರು.ಆಗ ವಿಜ್ಞಾನವು ಸಹಿತ ಕಲಾ ವಿಭಾಗದಡಿಯಲ್ಲಿ ಅಧ್ಯಯನ ಮಾಡಲಾಗುತ್ತಿತ್ತು. ಮದರಾಸಿನ ಪ್ರಖ್ಯಾತ ಪ್ರಸಿಡೆನ್ಸಿ ಕಾಲೇಜಿನಲ್ಲಿ ಅಧ್ಯಯನ ಮಡಿದ ರಾಮನ್ ಎಂ ಎ (ವಿಜ್ಞಾನ) ದಲ್ಲಿ ಮದರಾಸ್ ಸಂಸ್ಥಾನಕ್ಕೆ ಮೊದಲಿಗರಾಗಿ ಪಾಸಾದರು. ಓದಿನಲ್ಲಿ ತುಂಬ ಚುರುಕಾಗಿದ್ದ ರಾಮನ್‌ನನ್ನು ವಿದೇಶಕ್ಕೆ ಅಧ್ಯಯನಕ್ಕೆ ಕಳುಹಿಸಲು ಶಿಕ್ಷಕ ವರ್ಗ ಅವರ ತಂದೆಯವರಿಗೆ ತಿಳಿಸಿದರು ಅದರೆ ವೈದ್ಯರ ಸಲಹೆಯಂತೆ ವಿದೇಶಕ್ಕೆ ಪಾಲಕರು ಕಳುಹಿಸಲಿಲ್ಲ,ನಂತರದ ದಿನಗಳಲ್ಲಿ ಒಂದು ಉದ್ಯೋಗ ಮಾಡಬೇಕೆಂದು ಪಾಲಕರ ನಿರ್ಧಾರದಂತೆ “ ಇಂಡಿಯನ್ ಫೈನಾನ್ಸಿಯಲ್ ಸರ್ವಿಸ್” ಪರೀಕ್ಷೆ ಬರೆದು ತೇರ್ಗಡೆಹೊಂದಿದರು ಪ್ರಯುಕ್ತ ಅವರಿಗೆ ಅಂದು ಬ್ರಟೀಷರ ಅಡಳಿತದಲ್ಲಿದ್ದ ಭಾರತದ ಭಾಗವಾಗಿದ್ದ ಬರ್ಮಾದ ರಂಗೂನ್ ಪಟ್ಟಣದಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.ಹೀಗೆ ಸರ್ಕಾರದ ಅಧಿಕಾರಿಯಾಗಿದ್ದ ಅವರಿಗೆ ವಿಜ್ಞಾನದ ಆಸಕ್ತಿ ಅವರನ್ನು ಸದಾ ಸಂಶೋಧನೆ ಕಡೆಗೆ ಸೆಳೆಯುತ್ತಿತ್ತು. ತಮ್ಮ ಮನೆಯಲ್ಲೇ ಚಿಕ್ಕದೊಂದು ಪ್ರಯೋಗಾಲಯ ಮಾಡಿಕೊಂಡು ರಾತ್ರಿ ಸಮಯದಲ್ಲಿ ಸಂಶೋಧನೆ ಮಡುತ್ತಿದ್ದರು.ಅವರ ದರ್ಮಪತ್ನಿ ಲೋಕಸುಂದರಿ ಅವರಿಗೆ ಎಲ್ಲಾ ವಿಧದಲ್ಲೂ ಸಹಕರಿಸಿದರು.  ೧೯೦೭ ರಲ್ಲಿ ರಾಮನ್ ಅವರಿಗೆ ಕಲ್ಕತ್ತಾ ಕ್ಕೆ ವರ್ಗವಾಯಿತು.ಆ ದಿನಗಳಲ್ಲಿ ಭಾರತದಲ್ಲಿ ಕೇವಲ ೧೬೦ ಕಾಲೇಜುಗಳಿದ್ದವು,ಬ್ರಿಟೀಷ್ ಆಳ್ವಿಕೆಯ ಭಾರತದಲ್ಲಿ ಸಂಶೋಧನೆಗೆ ಅನುಕೂಲವಾದ ಸೌಲಭ್ಯಗಳಿರುವ ಕಾಲೇಜುಗಳು ಇನ್ನೂ ಕಡಿಮೆ ಇದ್ದವು.ಆದರೆ ಕಲ್ಕತ್ತಾದಲ್ಲಿ ೧೮೭೬ ರಲ್ಲಿ ಡಾ|| ಮಹೇಂದ್ರಲಾಲ್ ಸರ್ಕಾರ್ ಎಂಬ ಬಂಗಾಳಿಯ ಶ್ರೀಮಂತ ವೈದ್ಯರೊಬ್ಬರು “ ಇಂಡಿಯನ್ ಅಸೋಷಿಯೆಶನ್ ಫಾರ್ ದಿ ಕಲ್ಟಿವೇಷನ್ ಅಫ್ ಸೈನ್ಸ್ ”ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದ್ದರು.ವಿಜ್ಞಾನಿಗಳು ಇಲ್ಲಿ ತಯಾರಾಗಲಿ ಎಂಬ ಹೆಬ್ಬಯಕೆ ಅವರದಾಗಿತ್ತು.ಒಂದು ದಿನ ಕಲ್ಕತ್ತಾದ ಬೀದಿಯಲ್ಲಿ ಟ್ರಾಮ್‌ನಲ್ಲಿ ಪಯಣಿಸುತ್ತಿದ್ದ ರಾಮನ್‌ಗೆ ಅದು ಕಣ್ಣಿಗೆ ಬಿತ್ತು,ತಟ್ಟನೆ ಇಳಿದು ಸರಸರನೆ ನೇರವಾಗಿ ಕಛೇರಿಗೆ ಹೋಗಿ ಕೇಳುತ್ತಾರೆ, ನಾನು ಸಿ.ವಿ.ರಾಮನ್ ಅಂತ , ನಾನಿಲ್ಲಿ ಸಂಶೋಧನೆ ಮಾಡಬಹುದಾ ಅಂತ. ಅಗ ಆ ಹೊತ್ತಿಗಾಗಲೇ ವಿಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ರಾಮನ್ ಅವರಿಗೆ ಅಲ್ಲಿದ್ದ ಕಾರ್ಯದರ್ಶಿ ಹೇಳುತ್ತಾರೆ, ನಾವು ಹಲವಾರು ವರ್ಷಗಳಿಂದ ನಿಮಗಾಗಿ ಕಾಯುತ್ತಿದ್ದೇವೆ-ಎಂದಾಗ ರಾಮನ್‌ಗೆ ಅಗಾಧವಾದ ಸಂತೋಷವಾಯಿತು. ಮರು ದಿನದಿಂದಲೆ ಸಂಶೋಧನೆಗೆಂದು ಅವರು ಬರಲು ಅರಂಭಿಸಿದರು,ಅವರಿಗೆ ಬೇಕಾದ ಸಾಮಗ್ರಿಗಳನ್ನು ಒದಗಿಸಲಾಯಿತು.ಪ್ರತಿ ದಿನ ಬೆಳಿಗ್ಗೆ ೫.೩೦ಕ್ಕೆ ಕೇಂದ್ರಕ್ಕೆ ಬಂದು ಪ್ರಯೋಗಗಳು ಮಾಡಿ ಕಛೇರಿಗೆ ಹೊರಡಲು ಅನುವಗುವಂತೆ ೭.೪೫ ಕ್ಕೆ ಮನೆಗೆ ಮರಳುತ್ತಿದ್ದರು, ನಂತರ ಕಛೇರಿ ಅವದಿಯನಂತರ ಸಂಜೆ ೫.೦೦ ಗಂಟೆಗೆ ಬಂದು ರಾತ್ರಿ ೧೦.೦೦ ಅಥವ ಒಮ್ಮೊಮ್ಮೆ ಮಧ್ಯರಾತ್ರಿಯವರೆಗೆ ಸಂಶೋಧನೆಯಲ್ಲಿ ನಿರತರಾಗುತ್ತಿದ್ದರು.ಹೀಗಿರುವಾಗ ರಾಮನ್ ರವರ ವಿಜ್ಞಾನದ ಚಟುವಟಿಕೆಗಳು, ಅಸಕ್ತಿ ಕಲ್ಕತ್ತಾ ವಿವಿ ಯ ಉಪಕುಲಪತಿಗಳಾಗಿದ್ದ ಸರ್ ಆಶುತೋಷ್ ಮುಖರ್ಜಿಯವರ ಗಮನ ಸೆಳೆದವು.ಅವರು ರಾಮನ್‌ರಿಗೆ ೧೯೧೭ ರಲ್ಲಿ ಭೌತಶಾಸ್ತ್ರ ದ ಪ್ರೊಫೆಸರ್ ಆಗಿ ವಿ.ವಿ ಗೆ ಬಂದು ಕಾರ್ಯನಿರ್ವಹಿಸುತ್ತೀರ ಎಂದು ಕೇಳುತ್ತಾರೆ. ಆಗ ಅವರು ಉತ್ತಮ ವೇತನವಿರುವ ಅಧಿಕಾರಿಯಾಗಿ ಉಳಿಯಬೇಕೆ? ಅಥವಾ ಸಂಶೋಧನೆಗೆ ಅನುಕೂಲವಾಗುವ ಪ್ರೊಫೆಸರ್ ಹುದ್ದೆಗೆ ಹೋಗಬೆಕೋ ಎನ್ನವ ಜಿಜ್ಞಾಸೆಯಲ್ಲಿದ್ದಾಗ ಪತ್ನಿಯ ಸಲಹೆಯೊಂದಿಗೆ ತಮಗೂ ಇಷ್ಟವಾಗಿದ್ದ ಸಂಶೋಧನೆಗಾಗಿ ಪ್ರೊಫೆಸರ್ ಹುದ್ದೆಗೆ (ಅಧಿಕಾರಿಯಾಗಿದ್ದಾಗ ಬರುವ ವೇತನದಲ್ಲಿ ಆರ್ಧಕ್ಕೆ ತೃಪ್ತಿ ಪಟ್ಟುಕೊಂಡರು)ಕಲ್ಕತ್ತಾ ವಿಶ್ವವಿದ್ಯಾಲಯ ಸೇರಿದರು.ಅಲ್ಲಿ ಅವರು ಮಾಡಿದ ಸಂಶೋಧನೆಗಳು, ಅವರ ಶಿಷ್ಯರ ಬಳಗ ದಿನದಿನಕ್ಕೆ ಹೆಚ್ಚುತ್ತಾ ಅವರ ನೆತೃತ್ವದಲ್ಲಿ ಕಲ್ಕತ್ತಾವು ಭೌತಶಾಸ್ತçದ ಪ್ರಮಖ ಸಂಶೋಧನಾ ಕೇಂದ್ರಗಳಲ್ಲಿ ಒಂದಾಯಿತು.ಇಲ್ಲಿರುವಾಗ ಅವರು ಈ ಲೇಖನದ ಅರಂಭದಲ್ಲಿ ಹೇಳಿದಂತೆ ೧೯೨೧ ರಲ್ಲಿ ಆಕ್ಸಫರ್ಡ ವಿ. ವಿ. ಗೆ ಪ್ರಯಾಣ ಬೆಳೆಸಿದ್ದರು. ನೋಬೆಲ್ ಪ್ರಶಸ್ಥಿಯನ್ನು ಪಡೆದ ನಂತರ ಅವರು ಕಲ್ಕತ್ತಾದಲ್ಲೆ ಪ್ರೊಫೇಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರಿಗೆ,ಬೆಂಗಳೂರಿನ ಪ್ರತಿಷ್ಟಿತ ವಿಜ್ಞಾನ-ಸಂಶೋಧನಾ ಸಂಸ್ಥೆ “ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ”ಗೆ ನಿರ್ದೇಶಕರ ಹುದ್ದೆ ಅಲಂಕರಿಸಲು ಕರೆಬರುತ್ತದೆ.ತುಂಬಾ ಪ್ರತಿಷ್ಟಿತ ಹುದ್ದೆ, ಅದುವರೆಗೆ ಕೇವಲ ಅಂಗ್ಲರು ಮಾತ್ರ ಈ ಹುದ್ದೆಯನ್ನು ನಿರ್ವಹಿಸಿದ್ದರು,ಅವರು ಬೆಂಗಳೂರಿಗೆ ಬರುವಾಗ ಕಲ್ಕತ್ತಾದ ವಿಜ್ಞಾನಿಗಳಿಗೆ ಬೇಸರವಾಯಿತು.ಬೆಂಗಳೂರಿಗೆ ಬಂದು ಈ ಸಂಸ್ಥೆಯಲ್ಲಿ ನಿರ್ದೇಶಕರಾದಮೇಲೆ,ಭೌತಶಾಸ್ತçದ ವಿಭಾಗ ಆರಂಭಿಸಿ ಯುವ ವಿಜ್ಞಾನಿಗಳ ತಂಡ ಕಟ್ಟಿ ಸಂಶೋಧನೆಗೆ ಪ್ರೋತ್ಸಾಹಿಸಿದರು.ನಂತರದ ದಿನಗಳಲ್ಲಿ ಅವರಿಗೆ ಇಂಗ್ಲಾAಡಿನ ಕೇಂಬ್ರಿಡ್ಜ್ ವಿ ವಿ ಯಿಂದಲೂ ಆಹ್ವಾನ ಬರುತ್ತದೆ, ಆದರೆ ಅವರು ಭಾರತ ಬಿಟ್ಟು ಹೊಗಲಾರೆ ಎಂದು ದೇಶ ಪ್ರೇಮ ಮೆರೆಯುತ್ತಾರೆ.ನಂತರದ ದಿನಗಳಲ್ಲಿ ಭಾರತದ ಯುವ ವಿಜ್ಞಾನಿಗಳಿಗೆ ಸೂಕ್ತವಾದ ಅವಕಾಶಗಳು ಸಿಗಬೇಕೆಂದು ಅವರು ‘ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್ ‘ ಎಂಬ ಸಂಸ್ಥೆ ಅರಂಭಿಸಿದರು ಮುಂದೆ ಅದು ೧೯೪೮ ರಲ್ಲಿ ರಾಮನ್ ಸಂಶೋಧನಾ ಸಂಸ್ಥೆಯಾಯಿತು.ಅವರ ಸಂಶೋಧನೆ ಹಾಗೆ ಮುಂದುವರೆದಿತ್ತು, ೧೯೫೪ ರಲ್ಲಿ ಅವರಿಗೆ ಭಾರತ ಸರ್ಕಾರವು ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತು.೧೯೭೦ ನವೆಂಬರ್ ೨೧ ರಂದು ಅವರು ಚಿರ ನಿದ್ರೆಗೆ ಜಾರುವ ದಿನದವರಗೆ ಉಪನ್ಯಾಸ-ಸಂಶೋಧನೆಯಲ್ಲೇ ನಿರತರಾಗಿದ್ದರು.

ಡಾ|| ಯು.ಶ್ರೀನಿವಾಸ ಮೂರ್ತಿ
ವಿಜ್ಞಾನ ಸಾಹಿತ್ಯ ಲೇಖಕರು
‘ವಿಚಾರ ಕುಟೀರ”
ರಾಮನಗರ ೧ ನೆ ಕ್ರಾಸ್
ಹವಂಭಾವಿ-ಬಳ್ಳಾರಿ
ಪ್ರತಿಕ್ರಿಯಿಸಿ:೭೯೭೫೯೮೩೬೨೪.

Share and Enjoy !

Shares