ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ..
ಸಿಂಧನೂರು:ತಾಲೂಕ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಾಗರಾಜ ಕಾಟವ ನೇತೃತ್ವದಲ್ಲಿ ಸಮಸ್ತ ಆಸ್ಪತ್ರೆಯ ನೌಕರರು ಕಪ್ಪು ಪಟ್ಟಿ ಧರಿಸುವುದರ ಮೂಲಕ ವಿನೂತನ ಪ್ರತಿಭಟನೆ ಮುಂದಾಗಿದ್ದು ಹೊರರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಕಂಡು ಬಂತು.
ಈ ಕುರಿತು ವೈದ್ಯಾಧಿಕಾರಿ ಡಾ.ನಾಗರಾಜ ಕಾಟ್ವಾ ಮಾತನಾಡಿ ರಾಜ್ಯ ಸರಕಾರ ನೌಕರರು 7 ನೆ ವೇತನ ಜಾರಿಗಾಗಿ ಜೊತೆಗೆ ಎನ್ ಪಿ ಎಸ್ ರದ್ದುಪಡಿಸಿ ಒಪಿಎಸ್ ಜಾರಿಗಾಗಿ ರಾಜ್ಯದಾದ್ಯಂತ ನೌಕರರು ಮುಷ್ಕರ ನಡೆಸಿದ್ದು ಈ ಮುಷ್ಕರ ಬೆಂಬಲಿಸಿ ನಾವು ವೈದ್ಯಕೀಯ ಸೌಲಭ್ಯ ಅನಿವಾರ್ಯತೆ ಅರಿತು ತುರ್ತು ಚಿಕಿತ್ಸೆ ಸೇರಿದಂತೆ ಒಳ ರೋಗಿಗಳಿಗೆ ಚಿಕಿತ್ಸೆ ಕೊಟ್ಟು ಹೊರ ರೋಗಿಗಳಿಗೆ ಚಿಕಿತ್ಸೆ ಕೊಡದೇ ಕಪ್ಪು ಪಟ್ಟಿ ಧರಿಸುವುದರ ಮೂಲಕ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು ಕೂಡಲೇ ರಾಜ್ಯ ಸರ್ಕಾರ ನೌಕರರ ಬೆಡಿಕೆ ಈಡೇರಿಸಲು ಒತ್ತಾಯಿಸಿದರು.