ವಿಜಯನಗರವಾಣಿ ಸುದ್ದಿ
ಕಂಪ್ಲಿ.ರಾಜ್ಯ ಸರ್ಕಾರಿ ನೌಕರರ ಮುಷ್ಕರಕ್ಕೆ ಕಂಪ್ಲಿ ತಾಲೂಕಿನಾದ್ಯಂತ ಅತ್ಯುತ್ತಮ ಸ್ಪಂದನೆ ದೊರೆತಿದೆ.
ಪ್ರಮುಖವಾಗಿ 7 ನೇ ವೇತನ ಆಯೋಗದ ಶಿಫಾರಸ್ಸು ಹಾಗೂ ಎನ್.ಪಿ.ಎಸ್ ರದ್ದು ಪಡಿಸಿ ಓಪಿಎಸ್ ಜಾರಿಗೊಳಿಸಲು ಹೋರಾಟ ಹಮ್ಮಿಕೊಂಡಿದ್ದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಜೊತೆಗೆ ನಡೆದ ಸಂಧಾನ ಬಹುತೇಕ ವಿಫಲಗೊಂಡಿದೆ.
ಸದ್ಯ ಇಂದು ನಡೆದ ಮತ್ತೊಂದು ಸುತ್ತಿನ ಮಾತುಕತೆಯಲ್ಲಿ 17% ವೇತನ ಹೆಚ್ಚಿಸುವ ಭರವಸೆ ಸಿಕ್ಕಿದ್ದು ಅದನ್ನು ಲಿಖಿತ ರೂಪದಲ್ಲಿ ನೀಡಿದರೆ ಮಾತ್ರ ಮುಷ್ಕರ ವಾಪಾಸು ಪಡೆದುಕೊಳ್ಳುತ್ತೇವೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ತಿಳಿಸಿದ್ದಾರೆ.
ಕಂಪ್ಲಿಯ ಬಹುತೇಕ ಸರ್ಕಾರಿ ಶಾಲಾ ಕಾಲೇಜುಗಳು,ಸರ್ಕಾರಿ ಆಸ್ಪತ್ರೆ, ತಾಲೂಕು ಪಂಚಾಯತ್, ತಹಶಿಲ್ದಾರ್ ಕಛೇರಿ,ಪುರಸಭೆ ಸಂಪೂರ್ಣ ಬಂದ್ ಆಗಿರುವ ದೃಶ್ಯ ಕಂಡುಬಂತು.
ಸರ್ಕಾರಿ ನೌಕರರು ಇಂದು ಕರ್ತವ್ಯಕ್ಕೆ ಗೈರಾದ ಪರಿಣಾಮ
ಸರ್ಕಾರಿ ಆಸ್ಪತ್ರೆ, ಕಛೇರಿಗಳ ಕಡೆ ಜನರ ಒಡಾಟ ಸಂಪೂರ್ಣ ಸ್ತಬ್ಧವಾಗಿತ್ತು.
ಇನ್ನೂ ಇಂದು ನಿಗದಿಯಾಗಿದ್ದ ಪ್ರಥಮ ಪಿಯುಸಿ ಹಾಗೂ ಎಸ್.ಎಸ್ ಎಲ್ ಸಿ ರಾಜ್ಯ ಮಟ್ಟದ ಪರೀಕ್ಷೆಗಳು ಮುಂದೂಡಲಾಗಿದೆ. ಬಹುತೇಕ ವಿದ್ಯಾರ್ಥಿಗಳು ಶಾಲೆಯ ಕಡೆ ಮುಖ ಮಾಡುವ ಗೋಜಿಗೆ ಹೋಗಿಲ್ಲ.
ಆಸ್ಪತ್ರೆಯಲ್ಲಿ ಕೆಲ ವೈದ್ಯಕೀಯ ಸಿಬ್ಬಂದಿ ಮಾತ್ರ ಹಾಜರಿದ್ದು ತುರ್ತು ಚಿಕಿತ್ಸೆಗೆ ಮಾತ್ರ ಸ್ಪಂದಿಸುತ್ತಿದ್ದಾರೆ.ಇದರಿಂದಾಗಿ ಹೊರ ರೋಗಿಗಳಿಗೆ ತೀವ್ರ ಸಂಕಷ್ಟ ಎದುರಾಗುತ್ತಿದೆ.
ಹಲವರು ಆಸ್ಪತ್ರೆಗೆ ಬಂದು ವಾಪಾಸ್ಸಾಗುತ್ತಿದ್ದಾರೆ.
ಬಸ್ ಸಂಚಾರ ಯಥಾಸ್ಥಿತಿಯಲ್ಲಿದೆ.