ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆ ಇಂದು ಓಪಿಡಿ ಬಂದ್: ಮರಳಿ ನಿವಾಸದತ್ತಾ ವಿದ್ಯಾರ್ಥಿಗಳು

Share and Enjoy !

Shares
Listen to this article

ವಿಜಯನಗರವಾಣಿ
ಬಳ್ಳಾರಿ: ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ಮಾ.1ರಿಂದ ರಾಜ್ಯದ ಎಲ್ಲ ಸರ್ಕಾರಿ ನೌಕರರು ಕರ್ತವ್ಯಕ್ಕೆ ಗೈರಾಗಿರುವ ಹಿನ್ನಲೆ ಜಿಲ್ಲಾ ಆಸ್ಪತ್ರೆ ಓ ಪಿ ಡಿ ಕ ಸೆವೆಗಳುಬಂದ್ ಆಗಿದ್ದು ಕೆವಲ ತುರ್ತು ಸೇವಗಳಿಗೆ ಮಾತ್ರ ಇದ್ದು
ಜಿಲ್ಲಾ ಆಸ್ಪತ್ರೆ ಬಂದ್ ಹಾಗಿರುವ ಹಿನ್ನೆಲೆ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆ ನಗರ ಸೇರಿದಂತೆ ಆಂಧ್ರಪ್ರದೇಶದಿಂದ ಚಿಕಿತ್ಸೆಗೆಂದು ಆಗಮಿಸಿದ ರೋಗಿಗಳನ್ನು ಸಿಬ್ಬಂದಿಗಳು ಆಸ್ಪತ್ರೆಯ ಮುಂಭಾಗದಲ್ಲಿ ನಿಂತು ವಾಪಸ್ ಕಳಿಸುತ್ತಿದ್ದಾರೆ. ಅನಿವಾರ್ಯವಾಗಿ ಆಸ್ಪತ್ರೆಗೆ ಬಂದ ರೋಗಿಗಳು ಮರಳಿ ವಾಪಸ್ ಆಗುತ್ತಿದ್ದಾರೆ.
ಆದ್ರೆ ಇಂದು ನಾಳೆ ಎರಡು ದಿನ ಓಪಿಡಿ ಬಂದ್ ಇರುವದ್ದಾಗಿ ರೋಗಿಗಳಿಗೆ ಜ. ಹೇಳಿ‌ಕಳಿಸಿರುವ ಆಸ್ಪತ್ರೆ ಸಿಬ್ಬಂದಿ…
ಮರಳಿ ನಿವಾಸದತಾ ವಿದ್ಯಾರ್ಥಿಗಳು:
ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶಾಲಾ ಕಾಲೇಜುಗಳಿಗೆ ಶಿಕ್ಷಕರು ಆಗಮಿಸದ ಕಾರಣ ವಿದ್ಯಾರ್ಥಿಗಳು ಮರಳಿ ನಿವಾಸಕ್ಕೆ ತೆರಳುತ್ತಿರುವ ದೃಶ್ಯಗಳು ಬುಧವಾರ ಬೆಳಗ್ಗೆ ಕಂಡು ಬಂತು.
ಕಳೆದ ಫೆ.21 ರಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ, ಪದಾಧಿಕಾರಿಗಳ ತುರ್ತು ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಈ ಮಹತ್ವದ ನಿರ್ಣಯವನ್ನು ಕೈಗೊಳ್ಳಲಾಗಿದೆ, ಪ್ರತಿಯೋಬ್ಬ ನೌಕರರು ಕೆಲಸಕ್ಕೆ ಗೈರಾಗುವ ಮೂಲಕ ಈ ಹೋರಾಟಕ್ಕೆ ಬೆಂಬಲಿಸಿ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು. ಇದರಂತೆಯೇ ಬುದುವಾರ ನಗರ ಸೇರಿದಂತೆ ಜಿಲ್ಲೆಯ ನೌಕರರು ಕರ್ತವ್ಯಕ್ಕೆ ಗೈರಾಗಿದ್ದಾರೆ.

Share and Enjoy !

Shares