ಸೊಳ್ಳೆಗಳ ನಿಯಂತ್ರಣಕ್ಕೆ ಒಳಾಂಗಣ ಕೀಟನಾಶಕ ಸಿಂಪರಣೆ ಅವಶ್ಯ

Share and Enjoy !

Shares
Listen to this article

ಸಂಡೂರು: ಮಾ: 02: ಒಳಾಂಗಣ ಕೀಟನಾಶಕ ಸಿಂಪರಣೆ  ಕಾರ್ಯದ ಸದುಪಯೋಗ ಪಡೆದುಕೊಳ್ಳಿ; ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅಬ್ದುಲ್ಲಾ ಸಲಹೆ ನೀಡಿದರು

ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ ಸೊಳ್ಳೆಗಳ ನಿಯಂತ್ರಣಕ್ಕಾಗಿ ಒಳಾಂಗಣ ಕೀಟನಾಶಕ ಸಿಂಪರಣೆ ಕಾರ್ಯವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆವತಿಯಿಂದ ಹಮ್ಮಿ ಕೊಂಡಿದ್ದು, ಆಯ್ದ ಗ್ರಾಮಗಳಾದ ವಡ್ಡು,ತೋರಣಗಲ್ಲು, ಮತ್ತು ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮಗಳಲ್ಲಿ ಕೀಟನಾಶಕ ಸಿಂಪರಣೆ ಮಾಡಲಾಗುತ್ತಿದೆ, ಈ ಹಳ್ಳಿಗಳ  ಪ್ರತಿಯೊಂದು ಮನೆಗೂ ಕೀಟನಾಶಕ ಸಿಂಪರಣೆ ಮಾಡಲೇಬೇಕು, ಸೊಳ್ಳೆಗಳು ಸಂಪೂರ್ಣ ನಾಶವಾಗಲು ಪ್ರತಿಯೊಂದು ಮನೆಯ ಎಲ್ಲಾ ಕೋಣೆಗಳಲ್ಲಿ ಕೀಟನಾಶಕ ಸಿಂಪರಣೆ ಮಾಡಿಸಬೇಕು, ಜನರಿಗೆ ಇದರ ಉಪಯೋಗದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನು ಮಾಡಿ, ಅವರ ಮನವೊಲಿಸಿ ಯಶಸ್ವಿಗೊಳಿಸುವಂತೆ ಅವರು ತಿಳಿಸಿದರು, ಸೊಳ್ಳೆಗಳ ನಿಯಂತ್ರಣದಿಂದ  ಆರು ಮಾರಕ ರೋಗಗಳಾದ ಮಲೇರಿಯ, ಡೆಂಗ್ಯೂ, ಚಿಕೂನ್ ಗುನ್ಯಾ, ಮೆದುಳು ಜ್ವರ, ಆನೆಕಾಲು ರೋಗ ಹಾಗೂ ಝೀಕಾ ವೈರಸ್ ನಂತಹ ಕಾಯಿಲೆಗಳನ್ನು ತಡೆಗಟ್ಟಲು ಅರೋಗ್ಯ ಇಲಾಖೆಯೊಂದಿಗೆ ಮನೆಯ ಒಡೆಯರೂ ಸಹಕಾರ ನೀಡಬೇಕು, ಸಿಬ್ಬಂದಿಯವರು ಜನರೊಂದಿಗೆ ಸಂಯಮದಿಂದ ವರ್ತಿಸಿ ಯಶಸ್ವಿ ಗೊಳಿಸಲು ಸೂಚಿಸಿದರು,

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು

 

Share and Enjoy !

Shares