ಸಂಡೂರು ಪಟ್ಟಣ ಪುರಸಭೆ ಕಚೇರಿಯ ಕೆ ಎಸ್ ವೀರಭದ್ರಪ್ಪ ಸಭಾಂಗಣದಲ್ಲಿ ಅಧ್ಯಕ್ಷೆ ಶ್ರೀಮತಿ ಅನಿತಾ ವಸಂತ್ ಕುಮಾರ್ ಅವರು 2023-24ನೇ ಸಾಲಿಗೆ 62.40 ಲಕ್ಷ ಉಳಿತಾಯ ಬಜೆಟ್ ಮಂಡಿಸಿದರು.
23-24 ನೇ ಸಾಲಿನ ಅರ್ಥಿಕ ವರ್ಷದಲ್ಲಿ 31.48 ಅದಾಯವನ್ನು ಹಾಗೂ 30.85 ಕೋಟಿ ಖರ್ಚನ್ನು ಅಂದಾಜಿಸಲಾಗಿದ್ದು, 62.40 ಲಕ್ಷ ಉಳಿತಾಯವಾಗಲಿದೆ’ ಎಂದು ತಿಳಿಸಿದರು.
ಯೋಜನಾಧಿಕಾರಿ ಪ್ರಭುರಾಜ್ ಹಗರಿ ಮಾತನಾಡಿ, 23-24ನೇ ಸಾಲಿನ ಆರ್ಥಿಕ ವರ್ಷದಲ್ಲಿ 92.40 ಲಕ್ಷ ಅಸ್ತಿ ತೆರಿಗೆ, 62.40 ಲಕ್ಷ ನೀರಿನ ತೆರಿಗೆ, 22.50 ಲಕ್ಷ ಮಳಿಗೆ ಬಾಡಿಗೆ, 2.49 ಕೋಟಿ 15ನೇ ಹಣಕಾಸು ಆಯೋಗದ ಅನುದಾನ, 1.20 ಕೋಟಿ, ಎಸ್. ಎಫ್.ಸಿ. ಮಕ್ತ ನಿಧಿ, 3.15 ಕೋಟಿ ಎಸ್.ಎಫ್.ಸಿ. ವೇತನ ಅನುದಾನ, 4.60 ಕೋಟಿ ಎಸ್.ಎಫ್.ಸಿ ವಿದ್ಯುತ್ ಅನುದಾನ, 95.80 ಲಕ್ಷ ಪುರಸಭೆಯ ಇತರೆ ಸೇವೆಗಳಿಂದ ಬರಬಹುದಾದ ಆದಾಯ ಮೂಲಗಳಾಗಿವೆ’ ಎಂದರು.
ರಸ್ತೆ ಚರಂಡಿ ನಿರ್ಮಾಣಕ್ಕಾಗಿ 4.40ಕೋಟಿ, ಸಾರ್ವಜನಿಕ ಬೀದಿ ದೀಪಗಳ ಅಭಿವೃದ್ಧಿಗೆ 2.46 ಕೋಟಿ, ರುದ್ರಭೂಮಿ ಹಾಗೂ ಪಾಕ್‌ರ್ಗಳ ಕೋಟಿ ಅಭಿವೃದ್ಧಿಗೆ 85 ಲಕ್ಷ, ವಾಹನ ಮತ್ತು ಆಧುನಿಕ ಸಲಕರಣೆ ಖರೀದಿಗೆ 1.17 ಕೋಟಿ, ಕಟ್ಟಡ ಹಾಗೂ ಇತರೆ ನಾಗರಿಕ ವಿನ್ಯಾಸಕ್ಕೆ 1.67 ಕೋಟಿ, ಘನತ್ಯಾಜ್ಯ ವಸ್ತುಗಳ ನಿರ್ವಹಣೆಗಾಗಿ 2.37 ಕೋಟಿ, ಕುಡಿಯುವ ನೀರು ಮತ್ತು ಒಳಚರಂಡಿಗಾಗಿ 4.27 ಕೋಟಿ, ಪ.ಜಾತಿ/ಪ.ಪಂಗಡ ಹಾಗೂ ಇತರೆ ಹಿಂದುಳಿದ ಜನಾಗ ಮತ್ತು ಅಂಗವಿಕಲರ ಅಭಿವೃದ್ಧಿಗಾಗಿ 51.03 ಲಕ್ಷ ಹಾಗೂ ವೇತನ ಪಾವತಿಗಾಗಿ 3.28 ಕೋಟಿ ಖರ್ಚನ್ನು ಅಂದಾಜಿಸಲಾಗಿದೆ’ ಎಂದರು. ಉಪಾಧ್ಯಕ್ಷರಾದ ಈರೇಶ್ ಶಿಂಧೆ, ಮುಖ್ಯಾಧಿಕಾರಿ ಎಂ.ಖಾಜಾ, ಪುರಸಭೆ ಅಧಿಕಾರಿಗಳು ಉಪಸ್ಥಿತರಿದ್ದರು.
ಪುರಸಭೆಯವರು ಬಜೆಟ್‍ನಲ್ಲಿ 10 ಲಕ್ಷದ 91 ಸಾವಿರದ 600ನೂರು ಡಿಪಾಜಿಟ್ ಇದೆ. ನೀವು ಪುರಸಭೆಯನ್ನು ಯಾವ ರೀತಿ ನಡೆಸುತ್ತೀರಿ ತೆರಿಗೆ ಕಟ್ಟಲು ಬಂದವರನ್ನು ವಾಪಾಸ್ಸು ಕಳಿಸುತ್ತೀರಿ, ಶೈಕ್ಷಣಿಕ ಪ್ರವಾಸವನ್ನು ಯಾವಾಗಲೂ ಕೈಗೊಂಡಿಲ್ಲ ಬಾಯಿಮಾತಿನಲ್ಲಿ ಪ್ರವಾಸದ ಬಗ್ಗೆ ಮಾತನಾಡುತ್ತೀರಿ ಅ ವಿಚಾರವನ್ನು ಡಿಲಿಟ್ ಮಾಡಿಬಿಡಿ ಎಂದು ಬಿಜೆಪಿಯ ನಾಮ ನಿರ್ದೇಶಕ ರವಿಕಾಂತ ಬೋಸ್ಲೆಯವರು ಅಧ್ಯಕ್ಷರಿಗೆ ಮನವಿ ಮಾಡಿದರೆ ಹಿರಿಯ ಬಿಜೆಪಿ ಸದಸ್ಯ ಮಾಳ್ಗಿ ರಾಮಪ್ಪನವರು ವಿರೋಧಿಸಿದರು.
ಶೌಚಾಲಯದಲ್ಲಿ ನೀರಿನ ಸರಬರಾಜು ಇಲ್ಲ ಮೆಂಟೇನೆನ್ಸ್ ಇಲ್ಲ 20 ಲಕ್ಷ ಖರ್ಚು ಹೇಗೆ ಬಂತು ಕಾಂಗ್ರೇಸ್ ಪಕ್ಷದ ಕೆ.ವಿ. ಸುರೇಶ್ ಪ್ರಶ್ನೆ. 42 ಸಾವಿರ ರೂಪಾಯಿ ಮಳಿಗೆಯಿಂದ ಬಂದ ಬಾಡಿಗೆ ಬರಬೇಕಾಗಿದ್ದು ಸಾರ್ವಜನಿಕರು ತಡವಾಗಿ ಕಟ್ಟಿದರೆ ಬಡ್ಡಿ ಹಾಕುತ್ತೀರಿ, ವ್ಯವಾರಸ್ಥರಿಗೆ ಏನು ಆದಾಯ ಇಲ್ಲ ಯಾವ ರೀತಿ ಆದಾಯವಿಲ್ಲ ಅವರಿಗೆ ಎಲ್ಲಾ ತರಹದ ಸೌಲಭ್ಯ ಕೊಡುತ್ತೀರಿ ಇದರಲ್ಲಿ ಏನೋ ಕುತಂತ್ರವಿದ್ದು ಒಳಗಡೆ ಅಂತರಂಗ ವ್ಯವಹಾರ ನಡೆಯುತ್ತಿದೆ. ಬಹಿರಂಗವಾಗಲಿ ಎಂದು ಕೆ.ವಿ. ಸುರೇಶ್ ಗುಡಿಗಿದರು, ಸಂಡೂರಿನಲ್ಲಿ 33 ಪಾರ್ಕಗಳಿವೆ 2 ಪಾರ್ಕಗಳು ಅಭಿವೃದ್ದಿ ಬಿಟ್ಟರೆ 31 ಪಾರ್ಕ ಅಭಿವೃದ್ಧಿಯಾಗಿಲ್ಲ ಸಂಘ ಸಂಸ್ಥೆಗಳಿಗೆ ಪಾರ್ಕನ ಹೊಣೆಗಾರಿಕೆ ನೀಡುವುದಾದರೆ 3 ಎನ್.ಜಿ.ಓ ಗಳು ಇವೆ ಅವವರಿಗೆ ಕೊಡಿ ನಾನು ಹೊಣೆ ಹೊರುತ್ತೇನೆ ಎಂದು ಬಿಜೆಪಿ ನಾಮ ನಿರ್ದೇಶಕ ಸದಸ್ಯ ರವಿಕಾಂತ ಬೋಸ್ಲೆ ಮನವಿ ಮಾಡಿದರು.
ಕಾಂಗ್ರೇಸ್ ಪಕ್ಷದ ಎಲ್ ಹೆಚ್. ಶಿವಕುಮಾರ ಮಾತನಾಡಿ ಹಿರಿಯರನ್ನು ಮುಂದಿಟ್ಟುಕೊಂಡು ಬಜೆಟ್ ಮಂಡಿಸಿದರೆ ಚೆನ್ನಾಗಿರುತ್ತಿತ್ತು ಆದರೆ ಏಕಾ ಏಕಿ ಬಜೆಟ್ ಮಂಡಿಸಿದರೆ ಹೇಗೆ ಎಂದು ಬಿಜೆಪಿ ಹಿರಿಯ ಸದಸ್ಯ ಮಾಳ್ಗಿ ರಾಮಪ್ಪನವರನ್ನು ನೋಡಿ ವ್ಯಂಗ್ಯವಾಡಿದರು. ಬಿಜೆಪಿಯ ಅಶಾನರಸಿಂಹ ಮಾತನಾಡಿ ನಮ್ಮ ವಾರ್ಡನಲ್ಲಿ ಅನೇಕ ಸಮಸ್ಯೆಗಳು ಇವೆ ಬಗೆಹರಿಸುವವರು ಯಾರು? ಎಂದು ಪ್ರಶ್ನಿಸಿದರು. ಕೆ.ವಿ. ಸುರೇಶ್, ಹಗರಿ ಪ್ರಭುರಾಜರವರು ಬಜೆಟ್‍ನ್ನು ಮಂಡಿಸಿದಷ್ಟು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿಲ್ಲ ಎಂದು ತಮಾಷೆ ಮಾಡಿದಾಗ ಸಭೆಯಲ್ಲಿ ಕರತಾಡನ ಸ್ವೀಕರಿಸಿ ಅಲ್ಲಿಗೆ ಸಭೆ ಮುಕ್ತಾಯ ಮಾಡಿದರು