ವಿಜಯನಗರ ವಾಣಿ ಸುದ್ದಿ:
ರಾಯಚೂರು ಜಿಲ್ಲೆ…
ಸಿಂಧನೂರು: ಹೋಳಿ ಹಬ್ಬ ಹಾಗೂ ಶಬೆಬರಾತ್ ಹಿನ್ನೆಲೆ ನಗರ ಪೊಲೀಸ್ ಠಾಣೆಯಲ್ಲಿ ಪಿಐ ಡಿ ದುರುಗಪ್ಪ ಅಧ್ಯಕ್ಷತೆಯಲ್ಲಿ ಶಾಂತಿ ಸಭೆ ನಡೆಸಲಾಯಿತು. ಹಬ್ಬಗಳು ಶಾಂತಿ,ಸೌಹಾರ್ದತೆಯ ಸಂಕೇತವಾಗಿದ್ದು.ಇದನ್ನು ಅರಿತುಕೊಂಡ ಹಬ್ಬಗಳನ್ನು ಆಚರಣೆ ಮಾಡಬೇಕು. ಈ ಬಾರಿ ಹೋಳಿ ಹಬ್ಬ ಹಾಗೂ ಶಬೆಬರಾತ್ ಒಟ್ಟಾಗಿ ಬಂದಿದ್ದು ವಿಶೇಷವಾಗಿದ್ದು.ಬೆಳಗ್ಗೆ 6 ರಿಂದ ಮಧ್ಯಾನ್ಹ 12 ರ ವರೆಗೆ ಮಾತ್ರ ಹೋಳಿ ಹಬ್ಬ ಆಚರಣೆ ಮಾಡಬೇಕು.
ಪ್ರತಿಯೊಬ್ಬರೂ ಸರ್ಕಾರದ ನಿಯಮಗಳನ್ನು ಪಾಲನೆ ಮಾಡುವ ಮೂಲಕ ಸಂಭ್ರಮದಿಂದ ಹಬ್ಬವನ್ನು ಆಚರಣೆ ಮಾಡಿ ಇತರರಿಗೆ ಮಾದರಿ ಯಾಗಬೇಕು.ಯಾರಿಗೂ ಒತ್ತಾಯ ಪೂರ್ವಕವಾಗಿ ಬಣ್ಣ ಹಚ್ಚದೆ,ಇಲಾಖೆ ಅನುಮತಿ ಇಲ್ಲದೆ ಬೇಕಾಬಿಟ್ಟಿ ಡಿಜೆ ಉಪಯೋಗಿಸುವಂತಿಲ್ಲ.
ಜನ ಸೇವೆಗೆ ಇಲಾಖೆ ಸದಾ ಸನ್ನದ್ಧವಾಗಿದೆ. ಒಂದು ವೇಳೆ ನಿಯಮಗಳನ್ನು ಮೀರಿದರೆ ಕಾನೂ ನು ಕ್ರಮ ಕೈಗೊಳ್ಳಲಾಗುವುದು ಎಂದು ಪಿಐ ಡಿ ದುರುಗಪ್ಪ
ತಿಳಿಸಿದರು. ಪಿಎಸ್ಐ ಗಳಾದ ಮಣಿಕಂಠ, ಮುನಿರತ್ನ,ಮುಖಂಡರಾದ ಗಂಗಣ್ಣ ಡಿಶ್, ರಾಜು ಅಡವಿಭಾವಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಹಾಗೂ ವಿವಿಧ ಸಮಾಜದ ಮುಖಂಡರು ಉಪಸ್ಥಿತರಿದ್ದರು.