ಮರಿಯಮ್ಮನಹಳ್ಳಿ:ಬಿ.ಎಂ.ಎಂ. ಇಸ್ಪಾತ್ ಲಿಮಿಟೆಡ್ ಹಾಗೂ ಜೆ.ಎಸ್.ಡಬ್ಲ್ಯೂ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ರಾಜ್ಯ ಮಟ್ಟದ ಪುರುಷ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿ ಡಣಾಪುರ ಬಳಿ ಹೊನಲು,ಬೆಳಕಿನಲ್ಲಿ ಕುಸ್ತಿಗಳು ನಡೆದು,ಕುಸ್ತಿ ಪ್ರಿಯರ ಮನತಣಿಸಿದವು.
ಬಿ.ಎಂ.ಎಂ.ಅಧಿಕಾರಿಗಳಾದ ಸತೀಶ್ ಗೌಡ , ಬೋಜರಾಜ್,ಅರುಣ್ ಕುಮಾರ್ , ಮಾರುತಿ , ಮಲ್ಲಿಕಾರ್ಜುನ ಕುಸ್ತಿ ಪಂದ್ಯಾವಳಿಗಳಿಗೆ ಚಾಲನೆ ನೀಡಿದರು,
ರೇವಣ್ಣ,ಡಿ.ಬಿ.ನಾಯಕ್,ಸಂಘಟಕ ಎಂ.ಭರತ್ ಕುಮಾರ್ ,ಬಿ.ಮಂಜುನಾಥ , ಎ.ಪಕ್ಕಿರಸ್ವಾಮಿ , ಕೆ.ಲಿಂಗರಾಜ್ , ಹಳ್ಳಿ ನಿಂಗಪ್ಪ , ಯಮನೂರ , ಗುಡುದಪ್ಪ , ಎ.ಅಂಜಿನಪ್ಪ , ಕೆ.ಅಂಜಿನಪ್ಪ ,ಬಿ.ನಿಂಗಪ್ಪ ಎ.ಉಮೇಶ್ , ವಿರೇಶ್ ಉಪಸ್ಥಿತರಿದ್ದರು.
ವಿಜೇತ ಕುಸ್ತಿ ಪಟುಗಳು ಕಲ್ಯಾಣ ಕರ್ನಾಟಕ ಕೇಸರಿ ಪ್ರಭು ಹೊಸಪೇಟೆ,ವಿಜಯನಗರ ಕೇಸರಿ ಕೆಂಚಪ್ಪ ಹರಪನಹಳ್ಳಿ,ಕರ್ನಾಟಕ ಕೇಸರಿ ಹನುಮಂತ ಮರಿಯಮ್ಮನಹಳ್ಳಿ,ವಿಜಯನಗರ ಕಿಶೋರಿ ದಿವ್ಯ ದಾವಣಗೆರೆ,ಕೊನೆಯ ಪಂದ್ಯದಲ್ಲಿ ಓಂಕಾರ ಕೊಲ್ಲಾಪುರ ವಿಜೇತರಾದರು.ಈ ಪಂದ್ಯಾವಳಿಯಲ್ಲಿ ಜಿಲ್ಲಾ,ಅಂತರರಾಜ್ಯ,ರಾಜ್ಯ ಮಟ್ಟದ ಕುಸ್ತಿ ಪಟುಗಳು ಭಾಗವಹಿಸಿದ್ದರು.