ಸಂಡೂರು ವಿಧಾನ ಸಭೆ ಕ್ಷೇತ್ರದಲ್ಲಿ ಮ್ಯಾರಥಾನ್ ಓಟ ನಡೆಸಿ 20 ಲಕ್ಷ ರೂ. ಬಹುಮಾನ ನೀಡುತ್ತಿರುವುದು ಇತಿಹಾಸದಲ್ಲೇ ಮೊದಲಾಗಿದೆ ಎಂದು ಪ್ರಭುದೇವರ ಸಂಸ್ಥಾನ ವಿರಕ್ತ ಮಠದ ಪ್ರಭುಸ್ವಾಮೀಜಿ ಹೇಳಿದರು.
ಸಂಡೂರು ಪಟ್ಟಣಕ್ಕೆ ಸಮೀಪದ ಕೃಷ್ಣಾನಗರದ ಹೊರ ವಲಯದಲ್ಲಿ ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಎಸ್.ದಿವಾಕರ್ ಹಮ್ಮಿಕೊಂಡಿದ್ದ ಮ್ಯಾರಥಾನ್ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಕ್ರೀಡೆಗಳಿಗೆ ಅಧ್ಯತೆ ನೀಡದಿರುವುದರಿಂದ ಒಲಂಪಿಕ್ಸ್ ನಲ್ಲಿ ಭಾರತ ಅತ್ಯುನ್ನತ ಸಾಧನೆ ಮಾಡಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು
ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ ಎಸ್.ದಿವಾಕರ್ ಮಾತನಾಡಿ, ಫೆ.26 ರಂದು ಮ್ಯಾರಥಾನ್ ಓಟ ನಡೆಯಬೇಕಿತ್ತು. ಆದರೆ
ಕೆಲ ನೆಪಗಳನ್ನೊಡ್ಡಿ ಅವಕಾಶ ನೀಡಲಿಲ್ಲ. ಅದಕ್ಕಾಗಿ ಮುಂದೂಡಲಾಯಿತು.
ಪ್ರಸಕ್ತ ಮ್ಯಾರಥಾನ್‌ನಲ್ಲಿ ಭಾಗಿಯಾದ 8 ಜನ ಮಹಿಳೆಯರಿಗೆ ತಲಾ 5 ಸಾವಿರ ರೂ. ಪ್ರೋತ್ಸಾಹ ಧನ ನೀಡುವೆ ಘೋಷಿಸಿದರು. ಎಂದು ಯಶವಂತನಗರದ ಗಂಗಾಧರ ಸ್ವಾಮೀಜಿ ಮಾತನಾಡಿ, ಆತ್ಮದ ವಾಹನವಾಗಿದೆ. ದೇಹವನ್ನು
ಸದೃಢವಾಗಿಟ್ಟುಕೊಳ್ಳಲು ಕ್ರೀಡೆಗಳು ಅವಶ್ಯಕವಾಗಿವೆ ಎಂದರು.
ಬಹುಮಾನ ವಿತರಣೆ:
ಮ್ಯಾರಥಾನ್‌ನಲ್ಲಿ ಮೊದಲ ಸ್ಥಾನ ಪಡೆದ ಮೆಟ್ರಿಕಿಯ ನಾರಾಯಣ ಚನ್ನಕೇಶವರಿಗೆ 10 ಲಕ್ಷರೂ, ಚೆಕ್ ಮತ್ತು ಕಪ್, 2ನೇ ಸ್ಥಾನ ಪಡೆದ ಬಂಡ್ರಿಯ ಅಜಯ್, ಸಿದ್ದಾಪುರದ ರಾಮಾಂಜನಿ, ಕೊಂಡಾಪುರದ ಮಂಜುನಾಥ, ವೀರಪ್ಪ,ಎಚ್.ಕೆ.ಹಳ್ಳಿ ದುರುಗೇಶರಿಗೆ ತಲಾ 1 ಲಕ್ಷ ರೂ. 3ನೇ ಸ್ಥಾನ ಪಡೆದ 10 ಜನರಿಗೆ ತಲಾ 50 ಸಾವಿರ ರೂ. ಚೆಕ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಉಸ್ತುವಾರಿ ಅಜಯ್ ಮಂದಾನ್, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಓಬಳೇಶ, ಮಂಡಲ ಅಧ್ಯಕ್ಷ ಜಿಟಿ ಪಂಪಾಪತಿ,ವಾಡಾ ಅಧ್ಯಕ್ಷ ಕೆ.ಯರಿಸ್ವಾಮಿ, ಪುರಸಭೆ ಸದಸ್ಯರಾದ ಬಾಬು ಮುನಾಫ್, ದೇವೇಂದ್ರಪ್ಪ,ಪಂಪಾಪತಿ, ಪುಷ್ಪಾ,
ಮುಖಂಡರಾದ ನವಿಲಟ್ಟಿ ಗಂಗಣ್ಣ, ಜೆಸಿಬಿ ರಾಮಕೃಷ್ಣ ತುಂಬರಗುದ್ದಿ ತಿಪ್ಪೇಸ್ವಾಮಿ, ವೆಂಕಟಸುಬ್ಬಯ್ಯ, ನರಸಿಂಹ, ಎಫ್.ಕುಮಾರನಾಯ್ಕ, ಕಿನ್ನೂರೇಶ್ವರ,
ನಾರಾಯಣ ಮೇಶ್ರೀ,ಬೊಪ್ಪಕಾನ್ ಆನಂದಪ್ಪ, ಭೀಮಲಿಂಗಪ್ಪ, ವೀರೇಶ, ಕೃಷ್ಣಾನಗರದ ಚಂದ್ರಪ್ಪ, ಹನುಮಂತರಾವ್ ಕದಂ, ವೈಟಿಜಿ ನಾಗರಾಜ, ರುದ್ರಪ್ಪ, ಗುರುಮೂರ್ತಿ ಇದ್ದರು.