ಇ ವಿ ಎಂ ಮಿಷನ್ ಕುರಿತು ಜಾಗೃತಿ ಮೂಡಿಸಿದ ದಂಡಾಧಿಕಾರಿ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ..
ರಾಯಚೂರು ಜಿಲ್ಲೆ..
ಸಿಂಧನೂರು:ನಗರದ ತಹಶೀಲ್ದಾರ ಕಚೇರಿಯಲ್ಲಿ ದಂಡಾಧಿಕಾರಿ ಅರುಣ್ ದೇಸಾಯಿ ಅಧ್ಯಕ್ಷತೆಯಲ್ಲಿ ವಿಧಾನ ಸಭಾ ಚುನಾವಣೆ 2023 ರ ಪ್ರಯುಕ್ತ ಇ ವಿ ಎಂ ಮಿಷನ್ ಗಳ ಜಾಗೃತಿ ಕುರಿತು ವಿವಿಧ ಪಕ್ಷಗಳ ಮುಖಂಡರ ಸಭೆಯನ್ನು ಆಯೋಜಿಸಲಾಗಿತ್ತು.

ಕ್ಷೇತ್ರದಲ್ಲಿ 269 ಭೂತಗಳಿದ್ದು 2 ಲಕ್ಷ 36 ಸಾವಿರ ಮತದಾರರಿದ್ದು  2023 ರ ಚುನಾವಣೆ ಕೆಲವೇ ದಿನಗಳಲ್ಲಿ ಘೋಷಣೆ ಯಾಗಲಿದ್ದು ತಾಲೂಕ ಆಡಳಿತ ಚುನಾವಣೆ ಅಚ್ಚುಕಟ್ಟಾಗಿ ನಿರ್ವಹಿಸಲ್ಲು ಸಕಲ ಸಿದ್ಧತೆ ಮಾಡಿಕೋಳ್ಳುತ್ತಿದ್ದು ಸೆಕ್ಟರ್ ಅಧಿಕಾರಿಗಳನ್ನು ನೇಮಿಸುವ ಮೂಲಕ ಮತದಾರರಲ್ಲಿ ಇ ವಿ ಎಂ ಮಿಷನ್ ಕುರಿತು ಜಾಗೃತಿ ಮೂಡಿಸಲಾಗುತ್ತಿದ್ದು ಎಲ್ಲಾ ಪಕ್ಷದ ಮುಖಂಡರು ಸಹಕರಿಸಬೇಕು ಎಂದು ಕೋರಿದರು.

ಬಿಎಸ್ಪಿ ಪಕ್ಷದ ಅಭ್ಯರ್ಥಿ ಹುಲುಗಪ್ಪ ಮಲ್ಕಾಪುರ ,ಕಾಂಗ್ರೆಸ್ ಪಕ್ಷದ ವೈ ಅನಿಲ್ ಕುಮಾರ್, ಆಮ್ ಆದ್ಮಿ ಪಕ್ಷದ ಮುಖಂಡ ಕೃಷ್ಣ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ ಜವಳಿ,ಇ ವಿ ಎಂ ಮಿಷನ್ ಕುರಿತು ಜನರಲ್ಲಿ ಗೊಂದಲವಿದ್ದು  ತಾವು ಹಾಕಿದ ಮತ ಮತ್ತೊಬ್ಬರಿಗೆ ಹೋಗುತ್ತದೆ ಎಂದು ಭಾವನೆ ಇದೆ ಎಂದು ಪ್ರಶ್ನೆ ಕೇಳಿದಾಗ, ಕೇಂದ್ರ ಚುನಾವಣೆ ಆಯೋಗವು ಇ ವಿ ಎಂ ಮಿಷನ್ ನೊಂದಿಗೆ ಬಹಿರಂಗವಾಗಿ ಒಪನ್ ಚಾಲೆಂಜ್ ಮಾಡಲಾಗಿತ್ತು.ಆದರೆ ಯಾರಿಗೂ ಹ್ಯಾಕ್ ಮಾಡಲು ಆಗಿಲ್ಲ.ತಾವು ಮಾಡಿದ ಮತದಾನ ಯಾವ ಪಕ್ಷದ ಅಭ್ಯರ್ಥಿ ಗೆ ಮಾಡಿದ್ದೀರಿ ಎಂದು ಇ ವಿ ಎಂ ಮಿಷನ್ ನಲ್ಲಿ ಗೋಚರಿಸುತ್ತದೆ.ಇದರ ಕುರಿತು ಅನುಮಾನ ಬೇಡ ಎಂದು ಅರುಣ್ ದೇಸಾಯಿ ಪೌರಾಯುಕ್ತ ಮಂಜುನಾಥ್ ಗುಂಡೂರು,ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀ ದೇವಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸೋಮನಗೌಡ ಬಾದರ್ಲಿ,, ಕಂದಾಯ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Share and Enjoy !

Shares