ಯಶವಂತನಗರದಲ್ಲಿ ಕರ್ನಾಟಕ ಮುಸ್ಲಿಂ ಸಂಘ, ಗ್ರಾಮ ಘಟಕಕ್ಕೆ ಚಾಲನೆ

Share and Enjoy !

Shares
Listen to this article

ಸಂಡೂರು: ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಯಶವಂತನಗರ ಗ್ರಾಮದಲ್ಲಿ ಕರ್ನಾಟಕ ಮುಸ್ಲಿಂ ಸಂಘದ ಗ್ರಾಮ ಘಟಕಕ್ಕೆ ರಾಜ್ಯಾಧ್ಯಕ್ಷರಾದ ಎಲ್ ಎಸ್ ಬಶೀರ್ ಅಹಮದ್ ಅವರು ಚಾಲನೆಯನ್ನು ನೀಡಿದರು.

ಗ್ರಾಮ ಘಟಕಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ರಾಜ್ಯಾಧ್ಯಕ್ಷ ಹಾಗೂ ವಕೀಲರರು ಆದ ಶ್ರೀಯುತ ಬಶೀರ್ ಅಹಮದ್ ಆವರು ಪ್ರಸ್ತುತ ಸನ್ನಿವೇಶದಲ್ಲಿ ಮುಸ್ಲಿಂ ಸಮುದಾಯದವರನ್ನು ರಾಜಕೀಯವಾಗಿ,ಶೈಕ್ಷಣಿಕವಾಗಿ, ಆರ್ಥಿಕವಾಗಿ,ತುಳಿಯುವ ಪ್ರಯತ್ನ ಮಾಡಲಾಗುತ್ತದೆ,ಚುನಾವಣೆಗಳು ಬಂದಾಗ ಮಾತ್ರ ಎಲ್ಲಾ ಪಕ್ಷದ ನಾಯಕರುಗಳಿಗೆ ನಮ್ಮ ಮುಸ್ಲಿಂ ಸಮುದಾಯದ ಜನರು ನೆನಪಾಗುತ್ತಾರೆ,ಸಮುದಾಯದ ಮತಗಳನ್ನು ಸೆಳೆಯಲು ನಾನಾ ರೀತಿಯ ಆಮಿಷಗಳನ್ನು ತೋರಿಸುತ್ತಾರೆ ಅದ್ಯಾವುದಕ್ಕೂ ತಾವುಗಳು ಮರುಳಾಗದಿರಿ,

ನಮ್ಮ ಮುಸ್ಲಿಂ ಸಮುದಾಯಕ್ಕೆ ಯಾರು ಭದ್ರತೆಯನ್ನು ನೀಡುತ್ತಾರೋ, ಯಾರು ನಮ್ಮ ಸಮುದಾಯದ ಜನರನ್ನು ಕೈಹಿಡಿದು ಮೇಲೆತ್ತುವಂತ ಕೆಲಸ ಮಾಡುತ್ತಾರೋ ಅಂತ ಪಕ್ಷ ಹಾಗೂ ವ್ಯಕ್ತಿಗಳ ಜೊತೆ ನಾವು ಕೈಜೋಡಿಸುತ್ತೇವೆ ಎಂದರು

ಹಾಗೇ ಮುಸ್ಲಿಂ ಸಮುದಾಯದವರಿಗೆ ಆಗುತ್ತಿರುವ ಅನ್ಯಾಯಗಳ ಬಗ್ಗೆ, ಯಾವ ಯಾವ ಸರ್ಕಾರಗಳು ನಮ್ಮನ್ನು ಯಾವ ರೀತಿಯಾಗಿ ನಡೆಸಿಕೊಂಡು ಹೇಗೆ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟರು

ಈ ಸಂಧರ್ಭದಲ್ಲಿ ರಾಜ್ಯಾಧ್ಯಕ್ಷ ಎಲ್ ಎಸ್ ಬಶೀರ್ ಅಹಮದ್, ಯಶವಂತನಗರ ಗ್ರಾಮ ಘಟಕದ ಅಧ್ಯಕ್ಷ ರೆಹಮಾನ್, ರೈತಸಂಘದ ಎಂ ಎಲ್ ಕೆ ನಾಯ್ಡು,ಕೆ ಎಸ್ ದಿವಾಕರ್, ವಾಲ್ಮೀಕಿ, ವೀರಶೈವ, ಕುರುಬ ಸಮಾಜದ ಹಾಗೂ ವಿವಿಧ ಸಂಘಟನೆಯ ಮುಖಂಡರುಗಳು ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಇತರರು ಉಪಸ್ಥಿತರಿದ್ದರು

 

 

Share and Enjoy !

Shares