ವಿಜಯನಗರ ವಾಣಿ ಸುದ್ದಿ
ಕಂಪ್ಲಿ:ಜೆ ಸಿ ಐ ಸೋನಾ ವತಿಯಿಂದ ಕಂಪ್ಲಿ ಪಟ್ಟಣದಲ್ಲಿ ಬುಧವಾರ ಹೋಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಜೆ ಸಿ ಐಕಂಪ್ಲಿ ಸೋನದ ಅಧ್ಯಕ್ಷರು ಜಿಸಿ ಸಂತೋಷ್ ಕೊಟ್ರಪ್ಪ ಸೋಗಿ ಮಾತನಾಡಿ ಹಿಂದೂ ಸನಾತನ ಸಂಸ್ಕೃತಿಯ ಪ್ರಕಾರ ವರ್ಷದ ಕೊನೆಯ ಹಬ್ಬವಾದ ಹೋಳಿ ಹುಣ್ಣಿಮೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ಮನುಷ್ಯ ತನ್ನ ಎಲ್ಲಾ ಕಹಿ ಘಟನೆಗಳನ್ನು ಮರೆತು ಹೋಳಿ ಹಬ್ಬದಲ್ಲಿ ಪರಸ್ಪರ ಬಣ್ಣವನ್ನು ಹಚ್ಚಿಕೊಂಡು ಬಣ್ಣದ ಉತ್ತಮ ಜೀವನ ಸಾಗಿಸಬೇಕು ಎಂದರು.
ಈ ಸಂದರ್ಭದಲ್ಲಿ ಜೆಸಿಐ ಕಾರ್ಯದರ್ಶಿ ಅಮರನಾಥ ಶಾಸ್ತ್ರಿ, ಪೂರ್ವ ಅಧ್ಯಕ್ಷರಾದ ಅರವಿಂದ್, ಮಂಜೇಶ್, ಪ್ರಮುಖರಾದ ಭರತ್, ಪ್ರದೀಪ್ ಚೌಕಿಮಠ, ಮಂಜುನಾಥ್, ಜಾವಿದ್, ಸಿದ್ದರಾಮೇಶ್ವರ, ಗುರುಕೃಷ್ಣ, ಗೋವಿಂದ ಸೇರಿದಂತೆ ಇತರರಿದ್ದರು