ಸಂಡೂರು: ಮಾ:11: ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಿರಿ, ಮುಂದೆ ಪ್ರೌಢಶಾಲೆಯಲ್ಲಿ ಉತ್ತಮ ನಡವಳಿಕೆಗಳನ್ನು ರೂಢಿಸಿಕೊಳ್ಳಿ; ಮುಖ್ಯ ಶಿಕ್ಷಕ ಎಸ್.ಎನ್ ಬಾಬು,ಅವರು ಶುಭ ಹಾರೈಕೆಯ ಮಾತುಗಳನ್ನು ಹೇಳಿದರು
ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾರ್ಥಿಳಿಂದ ಸರಸ್ವತಿ ಪೂಜೆ ಹಾಗೂ ಅವರಿಗೆ ಶಾಲೆ ವತಿಯಿಂದ ಬೀಳ್ಕೊಡಿಗೆ ಸಮಾರಂಭ ಏರ್ಪಡಿಸಲಾಗಿತ್ತು, ಶಾಲೆಯ ಮುಖ್ಯ ಶಿಕ್ಷಕ ಎಸ್ ಎನ್ ಬಾಬು ಅವರು ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಶುಭ ಹಾರೈಸಿದರು ಹಾಗೆ ಎಂಟು ವರ್ಷಗಳ ಕಾಲ ನಮ್ಮ ಮುದ್ದಿನ ಮಕ್ಕಳಾಗಿ ಇದ್ದಿರಿ ಮುಂದೆ ಪ್ರೌಢಶಾಲೆಯಲ್ಲಿ ಈ ಅನುಬಂಧ ಇರುವುದಿಲ್ಲ,ಅಲ್ಲಿಯ ಶಿಕ್ಷಕರು ಮತ್ತು ನಿಮ್ಮ ಸಹಪಾಠಿಗಳೊಂದಿಗೆ ಉತ್ತಮ ಬಾಂಧವ್ಯವನ್ನು ಬೆಳಿಸಿಕೊಳ್ಳಿ ಎಂದು ಶುಭ ಹಾರೈಸಿದರು,
ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ರಜನಿ, ಬಂದೇ ನವಾಜ್,ಗ್ರೇಸಿ,ಅನುರಾಧ ಮಕ್ಕಳ ಒಡನಾಟದ ಬಗ್ಗೆ ಮಾತನಾಡಿದರು,
ನಂತರ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ತಿಳಿಸುತ್ತಾ ನಮಗೆ ತಿಳಿದೊ ತಿಳಿಯದೋ ಏನಾದರೂ ತಪ್ಪುಗಳನ್ನು ಮಾಡಿದ್ದರೆ ಕ್ಷಮಿಸಿ ಬಿಡಿ, ಮುಂದಿನ ತರಗತಿಗಳಲ್ಲಿ ನಿಮ್ಮ ಕಲಿಸುವ ಸಂಯಮದ ಮೌಲ್ಯ ನಮಗೆ ಖಂಡಿತ ಗೊತ್ತಾಗುತ್ತದೆ, ನಿಮ್ಮ ಶುಭಹಾರೈಕೆ ಸದಾ ನಮ್ಮ ಮೇಲೆ ಇರಲಿ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಶಿವಪ್ಪ ಮಾತನಾಡಿ ಮಕ್ಕಳಿಗೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುವುದು ಮತ್ತು ಅರೋಗ್ಯ ಹಾನಿ ಮಾಡುವ ದುರಭ್ಯಾಸಗಳನ್ನು ದೂರ ಇಡುವ ಕುರಿತು ಕಿವಿ ಮಾತು ಹೇಳಿದರು,
ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಪಾರ್ವತಮ್ಮ,ಮೋಹಿದ್ದೀನ್ ಶೇಕ್,ಅತಿಥಿ ಶಿಕ್ಷಕರಾದ ಶಶಿಕಲಾ, ಅಂಬಿಕಾ,ನೀರಾಜ್, ಕೃಷ್ಣವೇಣಿ, ಮಾಲತಿ,ರೇಣುಕಾ, ಬಸವರಾಜ್,ಗೌರಿ, ಶೋಭಾ, ಜೆ.ಎಸ್.ಡಬ್ಲ್ಯೂ ಆಸ್ಪೈರ್ ಮ್ಯಾಜಿಕ್ ಬಸ್ ನ ಮಲ್ಲೇಶಪ್ಪ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು