ಬಳ್ಳಾರಿ: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರ ಅಕ್ರಮ ಆಸ್ತಿ ವಿರುದ್ಧ ಗೃಹ ಸಚಿವ ಅಮಿತ್ ಷಾ ಅವರಿಗೆ ದೂರು ನೀಡುವೆ ಎಂದು ಮಾಜಿ ಶಾಸಕ ಅನಿಲ್ ಎಚ್ ಲಾಡ್ ಅವರು ಹೇಳಿದರು.
ಬಳ್ಳಾರಿ ನಗರದ ಗೃಹ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ ಹಾಗೂ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆಯ ಗಂಭೀರ ಆರೋಪ ಮಾಡಿದರು. 2008 ರಲ್ಲಿ ನಾನು ಖರೀದಿ ಮಾಡಿದ್ದ ಆಸ್ತಿಯನ್ನು ಜನಾರ್ದನ ರೆಡ್ಡಿ ಅವರು ಅವರ ಮಾವನ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾರೆ. ಹಾಗೂ ವೀರನಗೌಡ ಕಾಲೋನಿ ಅವಂಬಾವಿ ಸೇರಿದಂತೆ ವಿವಿಧ ಭಾಗಗಳಲ್ಲಿ ಜನಸಾಮಾನ್ಯರನ್ನು ಬೆದರಿಸಿ ಮನೆಗಳು, ಜಾಗಗಳನ್ನು ಕಬಳಿಸಿದ್ದಾರೆ ಎಂದು ಮಾಜಿ ಸಚಿವ ಜನಾರ್ದನರೆಡ್ಡಿ ಅವರ ವಿರುದ್ಧ ಮಾಜಿ ಶಾಸಕ ಅನಿಲ್ ಲಾಡ್ ಬಹಿರಂಗವಾಗಿ ಆರೋಪ ಮಾಡಿದರು. ನಗರದಲ್ಲಿರುವ ಯಾರಿಗಾದರೂ ಅನ್ಯಾಯವಾಗಿದ್ದಲ್ಲಿ ದಾಖಲೆ ಸಮೇತ ನನಗೆ ತಂದು ಕೊಡಿ.ಜನಾರ್ಧನ ರೆಡ್ಡಿ ಅಕ್ರಮ ಅಸ್ತಿ ಗಳಿಕೆ ವಿರುದ್ಧ ತನಿಖೆ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಗೆ ದೂರು ನೀಡಲು ನಿರ್ಧರಿಸಿದ್ದೇನೆ. ಅವರ ವಿರುದ್ಧ ಈಗ ರಾಜ್ಯ ಸೇರಿದಂತೆ ಹೊರ ರಾಜ್ಯಗಳಲ್ಲಿ ಇರುವ ಅವರ ಖಾತೆಗಳನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರ ದೂರು ನೀಡಿದೆ. ಇದೇ ಒಳ್ಳೆ ಸಮಯ ನಾನು ಜನಾರ್ದನ ರೆಡ್ಡಿ ಅವರ ಅಕ್ರಮ ಆಸ್ತಿ ಗಳಿಕೆ ವಿರುದ್ಧ ಆದಷ್ಟು ಬೇಗ ದೂರ ನೀಡಲಿದ್ದೇನೆ ಎಂದರು.
ಸಿರುಗುಪ್ಪ ರಸ್ತೆಯಲ್ಲಿ ನದಾಫ್ ಸಮುದಾಯಕ್ಕೆ ಸೇರಿದ 150 ಹಾಗೂ ಸಿನಿಮಾ ನಟಿ ರಮ್ಯಾ ಕೃಷ್ಣ ಅವರಿಗೆ ಸೇರಿದ 300 ಎಕರೆ ಆಸ್ತಿಯನ್ನುಜನಾರ್ದನರೆಡ್ಡಿ ಕಬಳಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದು ಅದರ ಮಾಹಿತಿಯನ್ನು ಜನರಿಗೆ ತಿಳಿಸುವೆ. ಗಾಲಿ ಜನಾರ್ಧನ ರೆಡ್ಡಿ ಅಕ್ರಮ ಆಸ್ತಿ ಗಳಿಕೆ ವಿರುದ್ಧ ಇರುವ ಎಲ್ಲಾ ದಾಖಲೆಗಳನ್ನು ಸೇರಿಸಿ ಶೀಘ್ರದಲ್ಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗೆ ಅವರಿಗೆ ದೂರು ಸಲ್ಲಿಸುವೆ. ಜನಾರ್ದನ ರೆಡ್ಡಿ ಕಬಳಿಸಿರುವ ಜನರ ಆಸ್ತಿ ಬಗ್ಗೆ ಸೂಕ್ತ ತನಿಖೆ ಮಾಡುವಂತೆ ಒತ್ತಾಯಿಸುವೆ ಎಂದು ತಿಳಿಸಿದರು.