ಮೋಹನ್ ಕುಮಾರ್ ನಡೆಸುತ್ತಿರುವ ಮ್ಯಾರಥಾನ್ ಸ್ವಾಗತಾರ್ಹ ಹೆಜ್ಜೆ- ಸಚಿವ ರಾಜೀವ್ ಚಂದ್ರಶೇಖರ್!

Share and Enjoy !

Shares
Listen to this article

ಬೆಂಗಳೂರು: ಮಾ 13, ದೇಶದ ಜನತೆಗೆ ಮತದಾನದ ಜಾಗೃತಿ ಮೂಡಿಸಲು ನವದೆಹಲಿಯಲ್ಲಿ ಮ್ಯಾರಥಾನ್ ಮಾಡಿದ ಬಳ್ಳಾರಿ ಜಿಲ್ಲೆಯ ಕಂಪ್ಲಿ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರಿಗೆ ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ರವರು ಅಭಿನಂದಿಸಿದ್ದಾರೆ

ಕೇಂದ್ರ ಸಚಿವ ಬರೆದ ಪತ್ರದಲ್ಲಿ ಮೋಹನ್ ಕುಮಾರ್ ದಾನಪ್ಪ, ಕೇಂದ್ರ ಸರ್ಕಾರದ ವಕೀಲರು, ಕರ್ನಾಟಕ ಹೈಕೋರ್ಟ್,ಇವರು ಸಾಮಾಜಿಕ-ರಾಜಕೀಯ ವಿಷಯಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದು ನನಗೆ ಸಂತೋಷವಾಗಿದೆ,

ಭಾರತದಲ್ಲಿ “ಮತದಾನದ ಹಕ್ಕು” ಎಂಬುದು ಸಾಂವಿಧಾನಿಕ ಹಕ್ಕು,18  ವರ್ಷ ಮೇಲ್ಪಟ್ಟ ಎಲ್ಲಾ ನಾಗರೀಕರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು,

ಮತದಾನದ ಹಕ್ಕಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮೋಹನ್ ಕುಮಾರ್ ದಾನಪ್ಪ ಅವರು ನಡೆಸುತ್ತಿರುವ ಮ್ಯಾರಥಾನ್ ಸ್ವಾಗತಾರ್ಹ ಹೆಜ್ಜೆ.

ಜಾಗೃತಿ ಅಭಿಯಾನಕ್ಕಾಗಿ ಮ್ಯಾರಥಾನ್ ಕೈಗೊಂಡಿರುವ ಮೋಹನ್ ಕುಮಾರ್ ದಾನಪ್ಪ ಅವರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತ ಮತ್ತು ಅವರಿಗೆ ಶುಭ ಹಾರೈಸುವುದಾಗಿ ಕೇಂದ್ರ ಸರ್ಕಾರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ರವರು ಪತ್ರ ಬರೆದು ಅಭಿನಂದಿಸಿದ್ದಾರೆ!

Share and Enjoy !

Shares