ಕಂಪ್ಲಿ ವಿಜಯನಗರ ಜಿಲ್ಲಾ ಸೇರ್ಪಡೆ ಪ್ರಕರಣ ವಜಾ, ಸುಪ್ರೀಂಗೆ ಮೇಲ್ಮನವಿ ಸಲ್ಲಿಸಲು ಚಿಂತನೆ,

Share and Enjoy !

Shares

ಬೆಂಗಳೂರು: ಮಾ 20, ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರ್ಪಡಿಸುವಂತೆ ಸಲ್ಲಿಸಲಾಗಿದ್ದ ಪಿಐಎಲ್ ನ ಪ್ರಕರಣವು ಇಂದು ಹೈ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ಪ್ರಸನ್ನ ಬಿ ವರಲೇ ಮತ್ತು ಅಶೋಕ್ ಬಿ ಕಿಣಗಿ ರವರೊಳಗೊಂಡ ದ್ವಿಸದಸ್ಯ ಪೀಠದ  ಮುಂದೆ ಬಂದಿದ್ದು ವಿಚಾರಣೆಯನ್ನ ನಡೆಸಿದ ನ್ಯಾಯಾಲಯವು ಪ್ರಕರಣವನ್ನ ವಜಾಗೊಳಿಸಿದ್ದಾಗಿ ಅರ್ಜಿದಾರರಾದ ವಕೀಲ ಮೋಹನ್ ಕುಮಾರ್ ದಾನಪ್ಪನವರು ತಿಳಿಸಿದರು,

ಅರ್ಜಿದಾರರ ಪರ ವಕೀಲರು ಸುಧೀರ್ಘ ವಾದವನ್ನ ಮಂಡಿಸಿದ್ದು ವಾದವನ್ನ ಆಲಿಸಿದ ನ್ಯಾಯಾಲಯವು ಪ್ರಕರಣವನ್ನ ವಜಾಗೊಳಿಸಿದೆ, ಸದರಿ ಪ್ರಕರಣದ ಆದೇಶ ಪ್ರತಿಗಳು ಲಭ್ಯವಾದ ತಕ್ಷಣ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗುವುದೆಂದು ಅರ್ಜಿದಾರರಾದ ಮೋಹನ್ ಕುಮಾರ್ ದಾನಪ್ಪ ಮತ್ತು ಕೆ. ಪ್ರಭಾಕರ ರಾವ್ ತಿಳಿಸಿದರು,

ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರಿಸದೇ ಕೈ ಬಿಟ್ಟಿರುವುದನ್ನು ಪ್ರಶ್ನಿಸಿ ಸರ್ಕಾರದ ಅಧಿಸೂಚನೆಯನ್ನ ರದ್ದು ಪಡಿಸಿ ಕಂಪ್ಲಿ ತಾಲೂಕನ್ನು ವಿಜಯನಗರ ಜಿಲ್ಲೆಗೆ ಸೇರ್ಪಡಿಸುವಂತೆ ರಾಜ್ಯ ಹೈಕೋರ್ಟ್‌ನಲ್ಲಿ 2021 ಮಾರ್ಚ್ 10 ರಂದು ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷ ವಕೀಲ ಮೋಹನ್ ಕುಮಾರ್ ದಾನಪ್ಪ ಮತ್ತು ಕಂಪ್ಲಿ ತಾಲೂಕು ವಕೀಲರ ಬಳಗದ ಕಾರ್ಯಾಧ್ಯಕ್ಷರಾದ ಹಿರಿಯ ವಕೀಲ ಕೆ. ಪ್ರಭಾಕರ್ ರಾವ್ ಹಾಗೂ ಇತರರು ಸಾರ್ವಜನಿಕ ಹಿತಾಸಕ್ತಿ ಪಿಐಎಲ್ ಅರ್ಜಿಯನ್ನು ಸಲ್ಲಿಸಿದ್ದರು

Share and Enjoy !

Shares