ಬಿಸಿಲಿನ ತಾಪಕ್ಕೆ ಒಂದು ಅಳಿಲು ಸೇವೆ…

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ

 

ಕಂಪ್ಲಿ:ಫಾರುಕ್ ಅಬ್ದುಲ್ ನೇತೃತ್ವದಲ್ಲಿ  ಪ್ರತಿದಿನ ಬಿಸಿಲಿನ ತಾಪಕ್ಕೆ ಜನ ಬಾಯಾರಿಕೆ ಆದವರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ತಮ್ಮ ಆಟೋ ಮೊಬೈಲ್ಸ್  ಅಂಗಡಿಯ ರಸ್ತೆ ಬದಿಯಲ್ಲಿ ಮುಂದೆ ವ್ಯವಸ್ಥೆ ಮಾಡಿದ್ದಾರೆ…

ಇಂದು ವಿಶೇಷವಾಗಿ ಕುಡಿಯುವ ನೀರಿನ ಜೊತೆಗೆ ತಂಪು ಮಾವಿನ ಹಣ್ಣಿನ ಪಾನೀಯ ಜ್ಯೂಸ್ ಮಾಡಿ ಹಳ್ಳಿಯಿಂದ ಬರುವಂತಹ ಜನರಿಗೆ ಹಾಗೂ ರಸ್ತೆ ಬದಿಯಲ್ಲಿ ಹೋಗುವಂತಹ ಜನರನ್ನು ಕರೆದು ತಂಪು ಪಾನೀಯ  ಹಾಗೂ ಮ್ಯಾಂಗೋ ಜ್ಯೂಸ್ ಕೊಡುವುದು ಎಲ್ಲರನ್ನೂ ಗಮನ ಸೆಳೆಯಿತು…

ಈ ಸಮಯದಲ್ಲಿ ಮಾತನಾಡಿದ ಮಂಜುನಾಥ್ ಬಿಸಿಲಿನ ತಾಪ ದಿನ ದಿನ ದಿನಕ್ಕೆ ಎಚ್ಚೆತ್ತುವುದರಿಂದ… ಕುಡಿಯುವ ನೀರಿನ ವ್ಯವಸ್ಥೆಯನ್ನು ಬೇಸಿಗೆ ಸಮಯದಲ್ಲಿ ಮಾಡಿದ್ದೇವೆ… ಆದರೆ ವಿಶೇಷವೆಂದರೆ ಪ್ರತಿ ಮಂಗಳವಾರ ಮಜ್ಜಿಗೆ,  ಮಾವಿನ ಸಿಹಿ ಪಾನಿಯ, ಸ್ನೇಹಿತರ ಜೊತೆಗೂಡಿ ಹಂಚುತ್ತೆವೆ ಎಂದರು….

ಈ ಸಮಯದಲ್ಲಿಶರಣಪ್ಪ, ರಾಜ್, ಶಿವು, ಇತರರು ಉಪಸ್ಥಿತರಿದ್ದರು…..

Share and Enjoy !

Shares