ನಿಯಮಗಳನ್ನು ಪಾಲನೆ ಮಾಡದ ವಾಹನ ಸವಾರರಿಗೆ ದಂಡ ಹಾಕಿ ಬಿಸಿ ಮುಟ್ಟಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು.

Share and Enjoy !

Shares
Listen to this article

ಬಳ್ಳಾರಿ :ನಗರದ ಕಪ್ಪಗಲ್ಲು ರಸ್ತೆಯಲ್ಲಿ ಮಂಗಳವಾರ ರಾತ್ರಿ 7 ಗಂಟೆಯ ಸಮಯದಲ್ಲಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡಹಾಕುವಾಗ ನಡೆದ ನೈಜ ಘಟನೆಗಳು. ಅದರಲ್ಲಿ ಕೆಲವು ನಾನು ಗ್ರಾಮಪಂಚಾಯತಿ ಸದಸ್ಯ, ಸರ್ ನಾನು ಮಾಜಿ ಸಂಸದರ ಮನೆಯಲ್ಲಿ ಕೆಲಸ ಮಾಡ್ತಿನಿ, ಮಗಳಿಗೆ 18 ವರ್ಷ ನಡೆಯುತ್ತಿದೆ, ನಾವು ಅವರ ಕಡೆ, ಇವರ ಕಡೆ ಎಂದು ಪೋನ್ ಮಾಡಿಕೊಡುವ ಪದ್ಧತಿ ಇದೆ. ಇದಕ್ಕೆ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳಿಗೆ ದಂಡ ವಸೂಲಿ ಮಾಡಲು ಸಮಸ್ಯೆ ಆಯ್ತ್.

ಚುನಾವಣೆ ಪ್ರಯುಕ್ತ ನಗರದಲ್ಲಿ ಖಾಕಿ ಪಡೆಯಿಂದ ಜಾಗೃತಿ.
ಸವಾರರು ವಾಹನಗಳ ನಿಯಮಗಳನ್ನು ಉಲ್ಲಂಘನೆ ಮಾಡಿದವರಿಗೆ ದಂಡ. ಸರ್ ನಾನು ಗ್ರಾಮ ಪಂಚಾಯತಿ ಸದಸ್ಯ, ಎಂ.ಎಲ್.ಎ ಮಾತನಾಡುತ್ತಾರೆ ಅಲ್ಲ…ಅಲ್ಲ ಅವರ ಮಗ ಮಾತನಾಡುತ್ತಾರೆ ಆದರೂ 200 ರೂಪಾಯಿ ದಂಡ ಕಟ್ಟ ಎಂದ ಪೊಲೀಸ್ ಅಧಿಕಾರಿ.

ಸರ್ ಈಗ ತ್ರಿಬಲ್ ರೈಡಿಂಗ್ ದಂಡ ಕಟ್ಟಿರುವೆ, ಹಾಗಾಗಿ ಗಂಡ ಹೆಂಡ್ತಿ, ಮಗಳು ಮತ್ತೆ ತ್ರಿಬಲ್ ರೈಡಿಂಗ್ ಹೋಗುವಾಗ, ಇಲ್ಲ ಸರ್ ನಾವು 500 ರೂಪಾಯಿ ದಂಡ ಕಟ್ಟಿವಿ ಹಾಗಾಗಿ ಮತ್ತೆ ತ್ರಿಬಲ್ ರೈಡ್ ಹೋಗ್ತಿವಿ 500 ರೂಪಾಯಿ ಎಲ್ಲಿಂದ ತರಬೇಕು, ಆಗ ಪೊಲೀಸರು ಸರ್ಕಾರಕ್ಕೆ ಕೇಳಿ ಅಂದ್ರೂ.

ಚುನಾವಣಾ ಹತ್ತಿರ ಬರುತ್ತಿಂದತೆ ಪೊಲೀಸರು ನಗರದ ಏರಿಯಾಗಳಲ್ಲಿ ಸಂಚಾರ ಮಾಡುವುದು.ಯಾವುದು ಸೀರೆ, ಹಣ ಹಂಚಿಕೆ, ಮಧ್ಯ ಮಾರಾಟ ನಡೆಯದಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದರು.

ಈ ಸಮಯದಲ್ಲಿ ಬೈಕ್, ಕಾರು, ಆಟೋ ವಾಹನ ಸವಾರರಿಗೆ ಲೈಸೆನ್ಸ್ ಇಲ್ಲ, ಮೀರರ್ ಇಲ್ಲ, ಆರ್.ಸಿ ಇಲ್ಲ, ತ್ರೀಬಲ್ ರೈಡ್, ಸೀಟ್ ಬೆಲ್ಟ್ ಇಲ್ಲ, ಹೆಲ್ಮೆಟ್ ಇಲ್ಲದ ಕಾರಣ 40ಕ್ಕಿಂತ ಹೆಚ್ಚಿನ ಕೇಸ್ ಗಳನ್ನು ಹಾಕಿ ದಂಡ ಪಡೆದುಕೊಂಡರು. ಇನ್ನು ಕೆಲವರು ವಾದ ಮಾಡುತ್ತಾ ಇದ್ದರು.

 

 

ಈ ಸಮಯದಲ್ಲಿ ಗಾಂಧಿ ನಗರ ಪೊಲೀಸ್‌  ಠಾಣೆಯ ಪೊಲೀಸ್‌ ಸ್ಟೋರಿ ಇನ್ಸ್ಪೆಕ್ಟರ್ ಸಿದ್ದರಾಮೇಶ್ವರ ಗಡದ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾಗರಾಜ್, ಎ.ಎಸ್.ಐ ಅಧಿಕಾರಿಗಳು ಹಾಗೂ
ಸಿಬ್ಬಂದಿಗಳಾದ ರೇವಣ, ಶೇಕ್ಷವಲಿ, ತಿಮ್ಮಪ್ಪ, ಜಯರಾಮ್, ಮಾರುತಿ, ಹನುಮಂತಪ್ಪ ಮತ್ತು ಮಹಿಳಾ ಸಿಬ್ಬಂದಿಗಳು ಕರ್ತವ್ಯದಲ್ಲಿ  ನಿರ್ವಹಿಸಿದರು.

Share and Enjoy !

Shares