23 ವರ್ಷದ ಯುವತಿ ಮೇಯರ್ ಆದ್ರೇ ಇಂದಿನಿಂದ ಚುನಾವಣೆ ನೀತಿ ಸಂಹಿತೆ ಜಾರಿ !

Share and Enjoy !

Shares
Listen to this article

ಬಳ್ಳಾರಿ: ಮಹಾನಗರ ಪಾಲಿಕೆಯ 22ನೇ ಅವಧಿಗೆ ನೂತನ ಮೇಯರ್ ಆಗಿ 23 ವರ್ಷದ ಯುವತಿ ಡಿ.ತ್ರಿವೇಣಿ ಸೂರಿ ಅವರು ಆಯ್ಕೆ.

 ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಚುನಾವಣೆ ನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆಯಿತು 4ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಡಿ.ತ್ರಿವೇಣಿ ಸೂರಿ ಮೇಯರ್ ಹಾಗೂ ಉಪ ಮೇಯರ್ ಆಗಿ 33ನೇ ವಾರ್ಡ್ ಕಾಂಗ್ರೆಸ್ ಸದಸ್ಯೆ ಜಾನಕಿ ಆಯ್ಕೆ.

ಉಪಮೇಯರ್ ಸ್ಥಾನಕ್ಕೆ 33ನೇ ವಾರ್ಡಿನ ಜಾನಕಮ್ಮ ಆಯ್ಕೆಯಾಗಿದ್ದು, ಚುನಾವಣಾ ನೀತಿ ಸಂಹಿತೆಯಡಿಯೇ ಅವರು ಅಧಿಕಾರ ಚಲಾಯಿಸಲು ಅವಕಾಶ ಲಭಿಸಿದಂತಾಗಿದೆ. ಮೇಯರ್ ಸ್ಥಾನಕ್ಕೆ ಒಟ್ಟು ನಾಲ್ಕು ಜನ ತಮ್ಮ ನಾಮ ಪತ್ರ ಸಲ್ಲಿಸಿದ್ದರು. ಪೈಕಿ ಬಿಜೆಪಿಯ ನಾಗರತ್ನ, ಕಾಂಗ್ರೆಸ್ ಡಿ.ತ್ರಿವೇಣಿ, ವಿ.ಕುಬೇರ,(36ನೇ ವಾರ್ಡ್) ಉಮಾದೇವಿ ಶಿವರಾಜ್ ಇವರಲ್ಲಿ ಪೈಪೋಟಿ ಏರ್ಪಟ್ಟಿದ್ದು ನಾಮ ಪತ್ರ ಪರಿಶೀಲನೆ ವೇಳೆ ಇಬ್ಬರು(ಕುಬೇರ ಮತ್ತು ಉಮಾದೇವಿ) ತಮ್ಮ ನಾಮಪತ್ರಗಳನ್ನು ವಾಪಸ್ಸು ಪಡೆದರುಅಂತಿಮವಾಗಿ ಬಿಜೆಪಿಯ ನಾಗರತ್ನ ಹಾಗೂ ಡಿ.ತ್ರಿವೇಣಿ ಕಣದಲ್ಲಿದ್ದು ಡಿ.ತ್ರಿವೇಣಿಗೆ 28 ಮತಗಳು ಪರವಾಗಿ, 16 ಮತಗಳು ವಿರೋಧವಾಗಿ ಚಲಾವಣೆಗೊಂಡಿದ್ದರೆ, ನಾಗರತ್ನ ಅವರಿಗೆ 16 ಮತಗಳು ಪರವಾಗಿ, 27 ಮತಗಳು ವಿರೋಧವಾಗಿ ಚಲಾವಣೆಗೊಂಡು ಅಂತಿಮವಾಗಿ ಮೇಯರ್ ಆಗಿ ಡಿ.ತ್ರಿವೇಣಿ ಆಯ್ಕೆಯಾದರು.

 44 ಮತದಾರರು ಮಹಾನಗರ ಪಾಲಿಕೆಯಲ್ಲಿ ಒಟ್ಟು 44 ಜನ ಪಾಲಿಕೆ ಸದಸ್ಯರಿದ್ದು, 39 ಜನ ಚುನಾಯಿತ ಸದಸ್ಯರು, 5 ಜನ ನಾಮ ನಿರ್ದೇಶಿತ ಸದಸ್ಯರು ಒಳಗೊಂಡಂತೆ 44 ಜನ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು

 ಕಲಬುರಗಿ ಉಪವಿಭಾಗದ ಆಯುಕ್ತ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಇವರ ನೇತೃತ್ವದಲ್ಲಿ ಇಂದು ಮಧ್ಯಾಹ್ನ ಚುನಾವಣೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ನಾಮ ಪತ್ರ ಸಲ್ಲಿಕೆ, ಪರಿಶೀಲನೆ, ನಾಮ ಪತ್ರ ಹಿಂಪಡೆಯುವ ಎಲ್ಲ ಪ್ರಕ್ರಿಯೆಗಳು ನಡೆದ ಬಳಿಕ ಮೇಯರ್ ಮತ್ತು ಉಪ ಮೇಯರ್ ಹೆಸರುಗಳನ್ನು ಚುನಾವಣಾಧಿಕಾರಿಗಳು 1-10 ಸುಮಾರಿಗೆ ಘೋಷಿಸಿದರು.

ಕ್ಷಣದಲ್ಲಿ ಸಂಸದ ವೈ.ದೇವೇಂದ್ರಪ್ಪ, ರಾಜ್ಯ ಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಗ್ರಾಮೀಣ ಶಾಸಕ ಬಿ.ನಾಗೇಂದ್ರ, ವಿಧಾನಪರಿಷತ್ ಸದಸ್ಯ ವೈ.ಸತೀಶ್, ಕಾಂಗ್ರೆಸ್, ಬಿಜೆಪಿಯ ಪಾಲಿಕೆ ಸದಸ್ಯರು, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ್ ಹಾಜರಿದ್ದರು.

Share and Enjoy !

Shares