ದಾಖಲೆಯಿಲ್ಲದೆ ಸಾಗಿಸುತ್ತಿದ್ದ ಹಣ ಜಪ್ತಿ.

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ

ಕೊಟ್ಟೂರು : ನೀತಿ ಸಂಹಿತೆ ಜಾರಿಯಾದ ದಿನವೇ ಕೊಟ್ಟೂರು ತಾಲೂಕಿನ ಹರಾಳು ಕ್ರಾಸ್ ನಲ್ಲಿ    ನಿರ್ಮಿಸಿರುವ  ಚೆಕ್ ಪೋಸ್ಟ್ ನಲ್ಲಿ ₹ 3.80.000 ಲಕ್ಷ ರೂಪಾಯಿಗಳನ್ನು ಕಾರಿನಲ್ಲಿ ಸಾಗಿಸುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ. ಈ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಎಸ್ ಎಸ್ ಟಿ ಸಿಬ್ಬಂದಿ ಹಾಗು ಪೋಲೀಸ್ ಸಿಬ್ಬಂದಿ ರವರು ವಾಹನಗಳ ಪರಿಶೀಲನೆ ಮಾಡುತ್ತಿದ್ದಾಗ  ಹರಪನಹಳ್ಳಿಯಿಂದ ಕೊಟ್ಟೂರು ಕಡೆ ಹೋಗುತ್ತಿದ್ದ ಚಂದ್ರನಾಯ್ಕ  ವಾಹನದಲ್ಲಿ  ಪತ್ತೆಯಾಗಿದ್ದು ಸೂಕ್ತ ದಾಖಲೆಗಳು ಇಲ್ಲದೇ ಇರುವುದರಿಂದ ಕೊಟ್ಟೂರು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಪರಿಶೀಲನೆಗಾಗಿ ಜಿಲ್ಲಾ ವೆಚ್ಚ ನಿರ್ವಹಣಾ ಸಮಿತಿಗೆ ವರದಿ ಸಲ್ಲಿಸಲಾಗಿದೆ. ಎಂದು ತಿಳಿದು ಬಂದಿದೆ.

Share and Enjoy !

Shares